ಅಯೋಧ್ಯೆಯಲ್ಲೊಂದು ವಿಶಿಷ್ಟ ಬ್ಯಾಂಕ್‌: ಆಧ್ಯಾತ್ಮಿಕತೆ; ಆಂತರಿಕ ಶಾಂತಿಯೇ ಅಲ್ಲಿನ ವಹಿವಾಟು !

ಅಯೋಧ್ಯೆ: ಪ್ರಭು ಶ್ರೀರಾಮನ ಭೂಮಿಯಾದ ಅಯೋಧ್ಯಾದಲ್ಲಿ ಒಂದು ವಿಶಿಷ್ಟವಾದ ಬ್ಯಾಂಕ್ ಎಲ್ಲರ ಗಮನ ಸೆಳೆಯುತ್ತಿದೆ. ಅಲ್ಲಿ ವಿಶೇಷವೆಂದರೆ ಇಲ್ಲಿ ಹಣವು ಮುಖ್ಯವಲ್ಲ ಮತ್ತು ಅದರ 35,000 ಖಾತೆದಾರರು ಪಡೆಯುವ ಏಕೈಕ ಪ್ರತಿಫಲವೆಂದರೆ ಮನಃಶಾಂತಿ, ಶ್ರದ್ಧೆ ಮತ್ತು ಆಧ್ಯಾತ್ಮಿಕತೆ ! ಭವ್ಯವಾಗಿ ನಿರ್ಮಿಸಲಾದ ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರು ಮತ್ತು ಪ್ರವಾಸಿಗರು ಈ ‘ಇಂಟರ್‍‌ನ್ಯಾಶನಲ್‌ ಶ್ರೀ ಸೀತಾರಾಮ್ ಬ್ಯಾಂಕ್’ ಬಗ್ಗೆ ಅತ್ಯುತ್ಸಾಹ ಹೊಂದಿದ್ದಾರೆ. ಇಲ್ಲಿರುವ ಠೇವಣಿಗಳೆಂದರೆ ಎಲ್ಲಾ ಪುಟಗಳಲ್ಲಿ ‘ಸೀತಾರಾಮ್’ ಎಂದು ಬರೆದಿರುವ ಕಿರುಪುಸ್ತಕಗಳು.`ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌’ನ ಮುಖ್ಯಸ್ಥರಾದ ಮಹಂತ್ ನೃತ್ಯ ಗೋಪಾಲ್ ದಾಸ್‌ಜಿ ಅವರು ನವೆಂಬರ್ 1970 ರಲ್ಲಿ ಸ್ಥಾಪಿಸಿದ ಈ ಆಧ್ಯಾತ್ಮಿಕ ಬ್ಯಾಂಕ್‌ನಲ್ಲಿ ಭಾರತ ಸೇರಿದಂತೆ US, UK, ಕೆನಡಾ, ನೇಪಾಳ, ಫಿಜಿ ಹೀಗೆ ವಿದೇಶಗಳಿಂದ 35,000 ಖಾತೆದಾರರನ್ನು ಹೊಂದಿದೆ. ಈ ಬ್ಯಾಂಕ್.ನಲ್ಲಿ ರಾಮನ ಭಕ್ತರು ಬರೆದಿರುವ 20 ಸಾವಿರ ಕೋಟಿಯಷ್ಟು ‘ಸೀತಾರಾಮ್’ ಕಿರುಪುಸ್ತಕಗಳ ಸಂಗ್ರಹವಿದೆ. ಬ್ಯಾಂಕಿನ ಮ್ಯಾನೇಜರ್ ಪುನಿತ್ ರಾಮ್ ದಾಸ್ ಮಹಾರಾಜ್ ಅವರ ಪ್ರಕಾರ, ಕಳೆದ ತಿಂಗಳು ನಡೆದ ಭವ್ಯ ರಾಮಮಂದಿರದ ಉದ್ಘಾಟನೆಯ ನಂತರ ಬ್ಯಾಂಕ್‌ಗೆ ಪ್ರತಿನಿತ್ಯ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಭಕ್ತರಿಗೆ ಉಚಿತ ಬುಕ್‌ಲೆಟ್‌ಗಳು ಮತ್ತು ಕೆಂಪು ಪೆನ್ನುಗಳನ್ನು ಬ್ಯಾಂಕ್ ಒದಗಿಸುತ್ತದೆ ಮತ್ತು ಪ್ರತಿ ಖಾತೆಯನ್ನು ಟ್ರ್ಯಾಕ್ ಮಾಡುತ್ತದೆ. ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಕನಿಷ್ಠ 5 ಲಕ್ಷ ಬಾರಿ ಸೀತಾರಾಮ್ ಎಂದು ಬರೆಯಬೇಕು ಮತ್ತು ನಂತರ ಪಾಸ್‌ಬುಕ್ ನೀಡಲಾಗುತ್ತದೆ.