ಸನಾತನ ಪ್ರಭಾತದಲ್ಲಿ ಮುದ್ರಿಸಲು ಅನುಭೂತಿ, ಕಲಿಯಲು ಸಿಕ್ಕಿದ ಅಂಶಗಳು ಮುಂತಾದ ಲೇಖನ ಕಡಿಮೆ ಶಬ್ದಗಳಲ್ಲಿ ಬರೆದು ಕಳಿಸಿ !

ಸಾಧಕರಿಗೆ ಸೂಚನೆ

ಸಾಧಕರು ಸಾಧನೆ ಮಾಡುತ್ತಿರುವಾಗ ಅವರಿಗೆ ಬಂದಿರುವ ಅನುಭೂತಿಗಳು, ಕಲಿಯಲು ಸಿಕ್ಕಿದ ಅಂಶಗಳು, ಇತರ ಸಾಧಕರ ಗುಣವೈಶಿಷ್ಟ್ಯಗಳು ಮುಂತಾದವುಗಳನ್ನು ಸನಾತನ ಪ್ರಭಾತದಲ್ಲಿ ಮುದ್ರಿಸಲು ಕಳುಹಿಸುತ್ತಿರುತ್ತಾರೆ. ಸಾಧಕರ ಈ ಲೇಖನಗಳು ತುಂಬಾ ವಿಸ್ತಾರವಾಗಿರುತ್ತವೆ. ಸನಾತನ ಪ್ರಭಾತದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ವಾರ್ತೆ ಹಾಗೂ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕುರಿತು ಲೇಖನಗಳು ಮತ್ತು ವಾಚಕರ ಪ್ರತಿಕ್ರಿಯೆ ಮುಂತಾದ ಲೇಖನಗಳನ್ನು ಪ್ರಸಾರ ಮಾಡಲಾಗುತ್ತದೆ. ಆದ್ದರಿಂದ ಸಾಧಕರ ಅನುಭೂತಿ, ಕಲಿಯಲು ಸಿಕ್ಕಿರುವ ಅಂಶಗಳು ಮುಂತಾದವುಗಳ ಪ್ರಸಾರವನ್ನು ಮಾಡಲು ಮಿತಿ ಇರುತ್ತದೆ. ಸಾಧಕರು ಅವರ ಲೇಖನವನ್ನು ಕಡಿಮೆ ಶಬ್ದಗಳಲ್ಲಿ ಬರೆದು ಕಳುಹಿಸಬೇಕು. ಆದ್ದರಿಂದ ಹೆಚ್ಚೆಚ್ಚು ಸಾಧಕರ ಲೇಖನಗಳನ್ನು ಮುದ್ರಿಸಬಹುದು. – ಸಂಪಾದಕರು, ಸನಾತನ ಪ್ರಭಾತ (೧೮.೧೦.೨೦೨೩)