ತರಗತಿಯಲ್ಲಿ ಜೈ ಶ್ರೀರಾಮ ಎಂದು ಘೋಷಣೆ ನೀಡಿದ್ದರಿಂದ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಂದ ವಿದ್ಯಾರ್ಥಿಗೆ ಥಳಿತ

ಅಸ್ಸಾಂದಲ್ಲಿನ ಕ್ರೈಸ್ತ ಮಿಷಿನರಿ ಶಾಲೆಯಲ್ಲಿನ ಘಟನೆ !

ಗೋಹಾಟಿ (ಅಸ್ಸಾಂ) – ಅಸ್ಸಾಂನ ಸೋನಿತಪುರ ಜಿಲ್ಲೆಯಲ್ಲಿನ ಬಾಲಿಪಾರ ಹತ್ತಿರ ಖೆಲಮತಿ ಇಲ್ಲಿಯ ಕಲವರಿ ಇಂಗ್ಲಿಷ್ ಸ್ಕೂಲ್ ಈ ಮಿಶನರಿ ಶಾಲೆಯ ತರಗತಿಯಲ್ಲಿ ೧೦ ವರ್ಷದ ವಿದ್ಯಾರ್ಥಿಯು ‘ಜೈ ಶ್ರೀ ರಾಮ’ ಎಂದು ಹೇಳಿದ್ದರಿಂದ ಅವನಿಗೆ ಥಳಿಸಲಾಯಿತು. ಈ ಘಟನೆ ಫೆಬ್ರವರಿ ೫ ರಂದು ನಡೆದಿದ್ದು. ಈ ಪ್ರಕರಣದಲ್ಲಿ ಕುಟುಂಬ ಸುರಕ್ಷಾ ಪರಿಷತ್ ಈ ಹಿಂದೂ ಸಂಘಟನೆಯಿಂದ ಸಂಬಂಧಿತ ಶಾಲಾ ಆಡಳಿತದ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದೆ.

೧. ಶಾಲೆಯ 4 ನೇ ತರಗತಿಯಲ್ಲಿ ಕಲಿಯುವ ಓರ್ವ ಅಪ್ರಾಪ್ತ ವಿದ್ಯಾರ್ಥಿಗೆ ಮೊದಲು ತರಗತಿಯ ಶಿಕ್ಷಕರು ಮತ್ತು ನಂತರ ಮುಖ್ಯೋಪಾಧ್ಯಾಯರಿಂದ ಶಾರೀರಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ವಿದ್ಯಾರ್ಥಿಯು ತರಗತಿಯಲ್ಲಿ ‘ಜೈ ಶ್ರೀರಾಮ’ ಎಂದು ಘೋಷಣೆ ನೀಡಿದ್ದನು. ಈ ವಿದ್ಯಾರ್ಥಿಯು ಘಟನೆಯ ಮಾಹಿತಿ ಪೋಷಕರಿಗೆ ನೀಡಿದ ನಂತರ ಅವರು ಶಾಲೆಯ ಆಡಳಿತಕ್ಕೆ ಈ ಕುರಿತು ಸ್ಪಷ್ಟೀಕರಣ ಕೇಳಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಚಾರಿದುರ ಪೊಲೀಸ್ ಠಾಣೆ ಮತ್ತು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿಯ ತಂಡದಿಂದ ಶಾಲಾ ಆಡಳಿತಕ್ಕೆ ಈ ರೀತಿಯ ಘಟನೆ ಮರಕಳಿಸಬಾರದೆಂದು ಸೂಚನೆ ನೀಡಿದ್ದಾರೆ.

೨. ಕುಟುಂಬ ಸುರಕ್ಷಾ ಪರಿಷತ್ತಿನ ಅಧ್ಯಕ್ಷ ಸತ್ಯ ರಂಜನ್ ಬೋರಾ ಇವರು ಅಸ್ಸಾಂನ ಶಿಕ್ಷಣ ಸಚಿವ ರನೋಜ್ ಪೆಗು ಇವರಿಗೆ ಕಳುಹಿಸಿರುವ ಪತ್ರದಲ್ಲಿ, ಶಾಲಾ ಪ್ರಾಧೀಕರಣ ಭಾರತೀಯ ಸಂವಿಧಾನದ ಕಲಂ ೫೧(ಅ) ಅಂತರ್ಗತ ಮಕ್ಕಳ ಹಕ್ಕು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಹೇಳಿದ್ದಾರೆ.

೩. ಹಾಗೂ ಈ ಸಂಘಟನೆಯಿಂದ ಶಿಕ್ಷಕರಿಗೆ ಕ್ರೈಸ್ತ ಧರ್ಮದ ಪ್ರಕಾರ ಅಲ್ಲದೆ ಸಾಮಾನ್ಯರಂತೆ ಉಡುಪು ಧರಿಸಲು ಹೇಳಿದೆ.

ಸಂಪಾದಕೀಯ ನಿಲುವು

ಹಿಂದೂ ವಿರೋಧಿ ಮದರಸಾಗಳು ಮತ್ತು ಕ್ರೈಸ್ತ ಮಷನರಿ ಶಾಲೆಗಳು ಇನ್ನು ಮುಚ್ಚುವುದು ಅವಶ್ಯಕ. ಅದಕ್ಕಾಗಿ ಈಗ ಹಿಂದೂ ಸಂಘಟನೆಗಳಿಂದಲೇ ಸರಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಬೇಕು !