ಇಡೀ ಪ್ರಪಂಚದಲ್ಲೇ ಅತಿಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ಭಾರತ !

ಭಾರತದಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ ವಿಶ್ವದ ಸರಾಸರಿಗಿಂತ ಮೂರು ಪಟ್ಟು ಹೆಚ್ಚು !

ನ್ಯೂಯಾರ್ಕ್ (ಅಮೇರಿಕ) – ವಿಶ್ವಮಟ್ಟದಲ್ಲಿ ಪೈಲಟ್‌ಗಳಲ್ಲಿ ಶೇಕಡಾವಾರು ಮಹಿಳೆಯರ ಅಧ್ಯಯನ ಮಾಡಿದಾಗ ಭಾರತದ ಹೆಸರು ಮಂಚೂಣಿಯಲ್ಲಿದೆ. ಭಾರತದಲ್ಲಿ ಶೇಕಡಾ ೧೫ ರಷ್ಟು ಪೈಲಟ್‌ಗಳು ಮಹಿಳೆಯರಿದ್ದಾರೆ. ಆನಂತರ ಐರ್ಲೆಂಡ್ ಶೇಕಡಾ ೯.೯, ದಕ್ಷಿಣ ಆಫ್ರಿಕಾ ಶೇಕಡಾ ೯.೮, ಆಸ್ಟ್ರೇಲಿಯಾ ಶೇಕಡಾ ೭.೫ ಹಾಗೂ ಕೆನಡಾದಲ್ಲಿ ಒಟ್ಟು ಪೈಲಟ್‌ಗಳ ಪೈಕಿ ಶೇಕಡಾ ೭ರಷ್ಟು ಮಹಿಳಾ ಪೈಲಟ್‌ಗಳಿದ್ದಾರೆ. ಎಲ್ಲಾ ದೇಶಗಳ ಸರಾಸರಿ ಶೇಕಡಾವಾರು ಪ್ರಮಾಣವನ್ನು ನೋಡಿದರೆ ಒಟ್ಟು ಪೈಲಟ್‌ಗಳಲ್ಲಿ ಕೇವಲ ಶೇ. ೫.೮ ರಷ್ಟು ಮಹಿಳಾ ಪೈಲಟ್‌ಗಳಿದ್ದಾರೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ, ಎಂದು ಹೇಳಲಾಗಿದೆ. ಈ ಅಂಕಿಅಂಶಗಳನ್ನು ‘ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್‘ ಕಡೆಯಿಂದ ಪ್ರಕಟಿಸಲಾಗಿದೆ.

ಈ ಪಟ್ಟಿಯಲ್ಲಿ ಆರನೇಯ ಸ್ಥಾನ ಜರ್ಮನಿಯಾಗಿದ್ದು ಅಲ್ಲಿ ಶೇಕಡಾವಾರು ೬.೯, ಅಮೇರಿಕಾ ಶೇಕಡಾ ೫.೫, ಯುನೈಟೆಡ್ ಕಿಂಗ್‌ಡಮ್ ಶೇಕಡಾ ೪.೭, ನ್ಯೂಜಿಲೆಂಡ್ ಶೇಕಡಾ ೪.೫ ಹಾಗೂ ಇಸ್ಲಾಮಿಕ್ ದೇಶವಾದ ಕತಾರ್ ನಲ್ಲಿ ಕೇವಲ ೨.೪ ಶೇಕಡಾ ಮಹಿಳಾ ಪೈಲಟ್‌ಗಳೆಂದು ಕೆಲಸ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾರತೀಯ ಸಂವಿಧಾನವು ಕಾಗದದ ಮೇಲೆ ಜಾತ್ಯಾತೀತವಾಗಿದ್ದರೂ, ಭಾರತದ ಆತ್ಮ ಹಿಂದೂಧರ್ಮವೇ ಇದೆ. ‘ಹಿಂದೂ ಧರ್ಮ ಸ್ತ್ರೀಯರಿಗೆ ಕೀಳಾಗಿ ಕಾಣುವುದು, ಅವರಿಗೆ ಅಧಿಕಾರ ನಿರಾಕರಿಸಿದೆ,‘ ಎಂದು ಆರೋಪವನ್ನು ಮಾಡುವ ತಥಾಕಥಿತ ಪ್ರಗತಿಪರ ದೇಶಗಳು ಪದೇ ಪದೆ ಹೀಯಾಳಿಸುತ್ತವೆ. ಅವರಿಗೆ ಈ ಅಂಕಿಅಂಶಗಳ ಬಗ್ಗೆ ಏನು ಹೇಳಲಿಕ್ಕಿದೆ ?