ಹಂಗೇರಿ ಅಧ್ಯಕ್ಷರಿಂದ ರಾಜೀನಾಮೆ !

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಕ್ಷಮಾದಾನ ನೀಡಿ ನಿರ್ಧಾರ !

ಬುಡಾಪೆಸ್ಟ್ (ಹಂಗೇರಿ) – ಹಂಗೇರಿ ಅಧ್ಯಕ್ಷ ಕ್ಯಾಟಲಿನ್ ನೊವಾಕ್ ಅವರು ರಾಷ್ಟ್ರದ ಅತ್ಯುನ್ನತ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಕ್ಕಳ ಲೈಂಗಿಕ ಕಿರುಕುಳದ ಆರೋಪಿಯ ಕ್ಷಮಾದಾನವನ್ನು ವಿರೋಧಿಸಿ ಅವರು ರಾಜೀನಾಮೆ ನೀಡಿದರು. ಈ ಸಮಯದಲ್ಲಿ, ನಾನು ಕ್ಷಮೆಯಾಚಿಸುತ್ತೇನೆ ಎಂದು ನೋವಾಕ್ ಹೇಳಿದರು. ನಾನು ತಪ್ಪು ಮಾಡಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಿಯನ್ನು ನಾನು ಕ್ಷಮಿಸಿದ್ದೇನೆ. ಈ ಸುದ್ದಿಯಿಂದ ಹಲವರು ಬೇಸರಗೊಂಡಿದ್ದಾರೆ. ಮಕ್ಕಳು ಮತ್ತು ಕುಟುಂಬಗಳ ಸುರಕ್ಷತೆಯ ಪರವಾಗಿ ನಾನು ಯಾವಾಗಲೂ ಇದ್ದೇನೆ ಮತ್ತು ಯಾವಾಗಲೂ ಇರುತ್ತೇನೆ.

ಏಪ್ರಿಲ್ 2023 ರಲ್ಲಿ, ಹಂಗೇರಿಯನ್ ಅನಾಥಾಶ್ರಮದ ಮಾಜಿ ಉಪ ನಿರ್ದೇಶಕರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕ್ಷಮೆ ಮಾಡಲಾಗಿತ್ತು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಮುಚ್ಚಿಡಲು ಅವರು ತಮ್ಮ ಮೇಲಧಿಕಾರಿಗಳಿಗೆ ಸಹಾಯ ಮಾಡಿದ್ದರು. ರಾಷ್ಟ್ರಪತಿಗಳು ಕ್ಷಮಾದಾನ ನೀಡಿದ ಬಳಿಕ ವಿರೋಧ ವ್ಯಕ್ತವಾಯಿತು. ಪ್ರತಿಭಟನೆಯು ಫೆಬ್ರವರಿ 9, 2024 ರಂದು ಉಲ್ಬಣಗೊಂಡಿತು. ಅನೇಕ ನಾಗರಿಕರು ಅಧ್ಯಕ್ಷ ನೊವಾಕ್ ಅವರ ಮನೆಯ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ಅವರ ರಾಜೀನಾಮೆಗೆ ಒತ್ತಾಯಿಸಿದ್ದರು.

ಸಂಪಾದಕೀಯ ನಿಲುವು

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಎಷ್ಟು ಪ್ರತಿನಿಧಿಗಳು ಇಂತಹ ಸೂಕ್ಷ್ಮತೆಯನ್ನು ತೋರಿಸುತ್ತಾರೆ ?