ಆರ್ಥಿಕ ದಿವಾಳಿಯಾದ ಈಜಿಪ್ಟ್ ತನ್ನ ಪಟ್ಟಣವನ್ನು ಸಂಯುಕ್ತ ಅರಬ್ ಎಮಿರೇಟ್ಸ್ ಗೆ ಮಾರಾಟ ಮಾಡಲಿದೆ !

ಕೈರೋ (ಈಜಿಪ್ಟ್) – ಆರ್ಥಿಕ ದಿವಾಳಿಯಾಗುವ ಸ್ಥಿತಿಯಲ್ಲಿರುವ ಈಜಿಪ್ಟ್ ಈ ಇಸ್ಲಾಮಿಕ್ ದೇಶದ ‘ರಾಸ ಅಲೂ ಹಿಕಮಾ‘ ನಗರವನ್ನು ಸಂಯುಕ್ತ ಅರಬ್ ಎಮಿರೇಟ್ಸ್ ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈಜಿಪ್ಟ್ ಗೆ ಈ ಪಟ್ಟಣದ ಬದಲಿಗೆ ೨೨ ಅಬ್ಜ ಡಾಲರ್‌ ಸಿಗಲಿದೆ. ಈ ನಗರ ಸುಂದರವಾಗಿದ್ದು ಅಲ್ಲಿಯ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಈ ನಗರವನ್ನು ಈಜಿಪ್ಟ್‌ನ ನಾಗರಿಕರು ‘ಭೂಮಿಯ ಮೇಲಿನ ಸ್ವರ್ಗ‘ ಎಂದು ಹೇಳುತ್ತಾರೆ. ರಾಷ್ಟ್ರಾಧ್ಯಕ್ಷ ಅಬ್ದೇಲ ಫತೇಹ ಅಲ್ ಸಿಸಿ ಇವರು ನಗರವನ್ನು ಮಾರಾಟ ಮಾಡುವ ನಿರ್ಧಾರದಿಂದ ದೇಶದೆಲ್ಲಡೆ ವಿರೋಧವಾಗುತ್ತಿದೆ.

ಈಜಿಪ್ಟ್‌ಗೆ ವಿದೇಶಿ ವಿನಿಮಯದ ಅವಶ್ಯಕತೆಯಿದೆ ಮತ್ತು ಅದಕ್ಕಾಗಿ ರಾಸ ಅಲು ಹಿಕಮಾ ನಗರವನ್ನು ಸಂಯುಕ್ತ ಅರಬ್ ಎಮಿರೇಟ್ಸ್ ವಶಕ್ಕೆ ಕೊಡಲಾಗುತ್ತಿದೆ. ಸಂಯುಕ್ತ ಅರಬ್ ಎಮಿರೇಟ್ಸ್‌ನ ಹೂಡಿಕೆದಾರರು ಅಭಿವೃದ್ಧಿಗೆ ಹಣಕಾಸು ಒದಗಿಸಿ ನಗರವನ್ನು ಅಭಿವೃದ್ಧಿ ಗೊಳಿಸುವರು ಮತ್ತು ವ್ಯವಸ್ಥಾಪನೆಯನ್ನು ನಿರ್ವಹಿಸುವರು ಎಂದು ಈಜಿಪ್ಟ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಶೀಘ್ರದಲ್ಲಿ ಪಾಕಿಸ್ತಾನದ್ದೂ ಇದೇ ರೀತಿ ಆಗಲಿದ್ದು ಪಾಕಿಸ್ತಾನ ತುಂಡುಗಳಾಗಿ ವಿಭಜನೆ ಆಗುವುದು !