ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ !
ನವ ದೆಹಲಿ – ಫೆಬ್ರವರಿ ೮ ರಂದು ಲೋಕಸಭೆಯಲ್ಲಿ ಆರ್ಥಿಕತೆಯ ಕುರಿತು ಶ್ವೇತ ಪತ್ರವನ್ನು (ಪ್ರಮುಖ ವಿಷಯದ ಕುರಿತು ಪ್ರಸ್ತುತ ಪಡಿಸಿದ ಮಾಹಿತಿ) ಮಂಡಿಸಲಾಗಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ ೯ ರಂದು ಸಂಸತ್ತಿನಲ್ಲಿ ಭಾಷಣ ಮಾಡಿದರು. ಅದರಲ್ಲಿ ಅವರು, ಭಾರತದ ಆರ್ಥಿಕತೆ ಈಗ ೫ ನೇ ಸ್ಥಾನಕ್ಕೆ ಜಿಗಿದಿದೆ. ಯುಪಿಎ ಆಡಳಿತದ ಅವಧಿಯಲ್ಲಿ ಆರ್ಥಿಕತೆಯ ಮಟ್ಟಹೆಚ್ಚಿಸಲು ಏನೂ ಆಗಲಿಲ್ಲ. ಅವರ ೧೦ ವರ್ಷಗಳ ಕಾಲಾವಧಿಯಲ್ಲಿ ಭಾರತದ ಆರ್ಥಿಕತೆಯು ಅತ್ಯಂತ ದುರ್ಬಲ ಸ್ಥಿತಿಯಲ್ಲಿತ್ತು. ಕಲ್ಲಿದ್ದಲು ಹಗರಣದಲ್ಲಿ ಯಾರ ಕೈ ಕಪ್ಪಾಯಿತು ? ಇದನ್ನು ಸ್ವಲ್ಪ ನೋಡಿ. ಪ್ರಧಾನಿಯವರು ನಿಮ್ಮ ತಪ್ಪನ್ನು ಸುಧಾರಿಸಿದ್ದಾರೆ ಎಂದು ಹೇಳಿದರು.
ಸೀತಾರಾಮನ್ ರವರು ಮಂಡಿಸಿದ ಪ್ರಮುಖ ಸೂತ್ರಗಳು !
೧. ನಾವು ನಮ್ಮ ೧೦ ವರ್ಷಗಳ ಕಾಲಾವಧಿಯಲ್ಲಿ ಭಾರತದ ಆರ್ಥಿಕತೆಯನ್ನು ವಿಶ್ವದ ಅಗ್ರ ೫ ಆರ್ಥಿಕತೆಗಳಿಗೆ ತಂದಿದ್ದೇವೆ. ನಾವು ಮಂಡಿಸಿರುವ ಶ್ವೇತಪತ್ರವನ್ನು ಜವಾಬ್ದಾರಿಯಿಂದ ಮಂಡಿಸಲಾಗಿದೆ.
೨. ‘ಯುಪಿಎ‘ ಕಾಲಾವಧಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಹಗರಣ, ಕಲ್ಲಿದ್ದಲು ಹಗರಣ ಇತ್ಯಾದಿ ಹಲವು ಹಗರಣಗಳು ನಡೆದಿವೆ. ಇದು ದೇಶದ ಘನತೆಗೆ ಮಸಿ ಬಳಿಯಿತು.
೩. ಕಲ್ಲಿದ್ದಲು ಹಗರಣ ದೇಶಕ್ಕೆ ಅಪಾರ ನಷ್ಟ ಉಂಟುಮಾಡಿದೆ. ದೇಶದಲ್ಲಿ ದೀರ್ಘಕಾಲದಿಂದ ಯಾವುದೇ ಹೊಸ ಉದ್ಯೋಗ ಸೃಷ್ಟಿಯಾಗಲಿಲ್ಲ. ನಮಗೆ ಕಲ್ಲಿದ್ದಲು ಹೊರಗಡೆಯಿಂದ ತರಿಸಬೇಕಾಯಿತು.
೪. ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಕೊರೋನಾ ಮಹಾಮಾರಿ ಸಂಕಟ ಬಂತು. ಆದರೂ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈ ಸಂಕಟವನ್ನು ಎದುರಿಸಿದೆವು. ಆರ್ಥಿಕವ್ಯವಸ್ಥೆಯು ೧೧ ನೆಯ ಸ್ಥಾನದಿಂದ ೫ ನೇಯ ಸ್ಥಾನಕ್ಕೆ ತರಲಾಯಿತು. ಇನ್ನೂ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ.
೫. ಇಂದಿನ ವಿರೋಧಪಕ್ಷವು ಮೊಸಳೆ ಕಣ್ಣೀರು ಸುರಿಸುತ್ತಿದೆ. ಎಂದು ಹೇಳಿದರು.