ಪರ್ವೇಜ್ ಪರ್ವಾಜ್‌ಗೆ 7 ವರ್ಷಗಳ ಜೈಲು ಶಿಕ್ಷೆ !

17 ವರ್ಷಗಳ ಹಿಂದೆ ಯೋಗಿ ಆದಿತ್ಯನಾಥ್ ಮತ್ತು ಇತರ ಬಿಜೆಪಿ ನಾಯಕರ ಘನತೆಯನ್ನು ಹಾಳು ಮಾಡಿದ ಪ್ರಕರಣ !

ಗೋರಖ್‌ಪುರ (ಉತ್ತರ ಪ್ರದೇಶ) – ನಕಲಿ ಸಿಡಿಗಳ ಮೂಲಕ ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರ ಘನತೆಯನ್ನು ಹಾಳು ಮಾಡಿದ ಪ್ರಕರಣದಲ್ಲಿ ಆರೋಪಿ ಪರ್ವೇಜ್ ಪರ್ವಾಜ್‌ಗೆ ಗೋರಖ್‌ಪುರ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗೂ 10 ಸಾವಿರ ದಂಡವನ್ನೂ ವಿಧಿಸಿದೆ.

2007 ರಲ್ಲಿ, ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರನ್ನು ಗಲ್ಲಿಗೇರಿಸಿದಾಗ, ಪರ್ವೇಜ್ ಗೋರಖ್‌ಪುರದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದ ಮತ್ತು ಮುಸ್ಲಿಂ ಗುಂಪುಗಳು ನಗರದ ಹಿಂದೂ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರ ನಂತರ, ಅವರು ಗೋರಖ್‌ಪುರದ ಅಂದಿನ ಸಂಸದ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕರಾದ ಶಿವ ಪ್ರತಾಪ್ ಶುಕ್ಲಾ, ರಾಧಾಮೋಹನ್ ದಾಸ್ ಅಗ್ರವಾಲ್ ಮತ್ತು ಅಂಜು ಚೌಧರಿ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸುಳ್ಳು ದೂರು ದಾಖಲಿಸಿದ್ದ. ನ್ಯಾಯಾಲಯವು ಪರ್ವೇಜ್‌ಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ಕೇಳಿದಾಗ, ಅವರು ಸಿಡಿಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿದರು. ಈ ಸಿಡಿಗಳು ಈ ನಾಯಕರ ಪ್ರಚೋದನಕಾರಿ ಭಾಷಣಗಳನ್ನು ಒಳಗೊಂಡಿವೆ ಎಂದು ಅವರು ಹೇಳಿದ್ದ. ಸಿಡಿಯನ್ನು ಪರೀಕ್ಷೆಗಾಗಿ ಕ್ರೈಂ ಲ್ಯಾಬ್‌ಗೆ ಕಳುಹಿಸಿದಾಗ ಅದು ನಕಲಿ ಎಂದು ತಿಳಿದುಬಂದಿದೆ. ಈ ಕುರಿತು ನ್ಯಾಯಾಧೀಶ ಆದರ್ಶ ಶ್ರೀವಾಸ್ತವ ಇವರು ಶಿಕ್ಷೆ ವಿಧಿಸಿದ್ದಾರೆ. ಪರ್ವೇಜ್ ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾನೆ.

ಸಂಪಾದಕೀಯ ನಿಲುವು

’17 ವರ್ಷಗಳ ನಂತರ ಸಿಕ್ಕಿದ ನ್ಯಾಯ ಅನ್ಯಾಯವಲ್ಲವೇ ?’ ಎಂದು ನಾಗರಿಕರಿಗೆ ಅನಿಸುತ್ತದೆ !