ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಾಖಂಡ ವಿಧಾನಸಭೆಯು ಸಮಾನ ನಾಗರಿಕ ಕಾನೂನನ್ನು ಅಂಗೀಕರಿಸಿದೆ. ಹೀಗಿರುವಾಗ ರಾಜ್ಯದ ಮುಸ್ಲಿಮರು ವಿರೋಧಿಸಲಾರಂಭಿಸಿದ್ದಾರೆ. ಮಸೂದೆಯನ್ನು ವಿರೋಧಿಸಿ ರಾಜ್ಯದ ಮುಸ್ಲಿಮರು ಕೆಲವು ವೀಡಿಯೊಗಳನ್ನು ಸಹ ಪ್ರಸಾರ ಮಾಡಿದ್ದಾರೆ. ಓರ್ವ ಮುಸಲ್ಮಾನ ಯುವಕನು, ‘ನಾವು ಈ ಕಾನೂನಿನ ಪ್ರಕಾರ ಅಲ್ಲ, ಬದಲಾಗಿ ಷರಿಯಾ ಪ್ರಕಾರ ವರ್ತಿಸುತ್ತೇವೆ. ಷರಿಯಾ ಪ್ರಕಾರ 4 ಮದುವೆಗಳನ್ನು ಮಾಡಬಹುದು. ಸಮಾನ ನಾಗರಿಕ ಮಸೂದೆಯು ಕೇವಲ ಒಂದು ಮದುವೆಗೆ ಅವಕಾಶ ನೀಡುತ್ತದೆ. ಷರಿಯತ್ ಪ್ರಕಾರ 4 ಮದುವೆಗಳು ನಡೆಯಬೇಕು, ಒಂದು ಮದುವೆ ಯಾಕೆ ಮಾಡಬೇಕು ? ಈಗ ಯಾರಾದರೂ (ಮುಸ್ಲಿಮರು) ಹೆಂಡತಿ ಇದ್ದಾರೆ ಎಂದು ಭಾವಿಸೋಣ. ಈಗ ಒಬ್ಬಳೇ ಹೆಂಡ್ತಿ ಇರೋದು ಒಳ್ಳೇದು ಅನ್ನಿಸದೇ ಮತ್ತೊಬ್ಬ ಹೆಣ್ಣಿನ ಮದುವೆಗೆ ಸಿದ್ಧತೆ ನಡೆಸಿದ್ದರೆ ಅವಳಿಗೆ ‘ಬೇಡ’ ಅಂತ ಯಾಕೆ ಹೇಳಬೇಕು ? ಎರಡು ಮಕ್ಕಳಿಗೆ ಜನ್ಮ ನೀಡುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಅದು ಹೇಗೆ ಸಾಧ್ಯ ? ಅದು ಅಲ್ಲಾಹನ ಕೈಯಲ್ಲಿದೆ. ಎಂದು ಹೇಳಿದರು
ನಗರದ ಜಾಮಾ ಮಸೀದಿ ನಗರ ಖಾಜಿ (ಶರಿಯಾ ಅನುಸಾರ ನ್ಯಾಯಾಧೀಶ) ಮೊಹಮ್ಮದ್ ಅಹ್ಮದ್ ಖಾಸ್ಮಿ ಮಸೂದೆಯನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾನೂನು ಜಾರಿಗೆ ತರಲಾಗಿದೆ ಎಂದು ಆರೋಪಿಸಿರುವ ಅವರು, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಮ್ಮ ನಾಯಕರನ್ನು ಮೆಚ್ಚಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವು
ಭಾರತದಲ್ಲಿ ಹಿಂದೂಗಳನ್ನು ಅಸಹಿಷ್ಣು ಮತ್ತು ಹಿಂಸಾತ್ಮಕ ಎಂದು ನಿರ್ಧರಿಸಿ ಪ್ರಜಾಪ್ರಭುತ್ವವನ್ನು ಕೊಲ್ಲಲಾಗುತ್ತಿದೆ ಎಂದು ಕೂಗುತ್ತಿರುವ Sampadakiya ಮುಸ್ಲಿಮರು ಈಗ ‘ಏಕರೂಪ ವೈಯಕ್ತಿಕ ಹಕ್ಕುಗಳ’ ಕಾಯ್ದೆಯ ವಿರೋಧದ ಬಗ್ಗೆ ಏಕೆ ಮೌನವಾಗಿದ್ದಾರೆ? |