ಪಾಕಿಸ್ತಾನಿ ಮಹಿಳೆಯರ ಬೇಡಿಕೆ !
ಇಸ್ಲಾಮಾಬಾದ (ಪಾಕಿಸ್ತಾನ) – ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರವರು `ಯಾರಾದರೂ ಮಹಿಳೆಯರನ್ನು ಚುಡಾಯಿಸಿದರೆ ಅವರನ್ನು ಮುಂದಿನ ಚೌಕಿಯಲ್ಲಿ ಬಂಧಿಸಿ ಅವರ `ರಾಮ ನಾಮ ಸತ್ಯ ಹೇ’ ಮಾಡಲಾಗುವುದು (ಮರಣ ದಂಡನೆ ನೀಡಲಾಗುವುದು) ಎಂದು ಎಚ್ಚರಿಸಿದ್ದಾರೆ. ಈ ಹೇಳಿಕೆಯ ಮೇಲೆ ಪಾಕಿಸ್ತಾನದಲ್ಲಿಯೂ ಚರ್ಚೆ ನಡೆಯುತ್ತಿದೆ. ಪಾಕಿಸ್ತಾನದಲ್ಲಿನ ಕೆಲವು ಯುಟ್ಯೂಬ್ ಚಾನೆಲಗಳನ್ನು ನಡೆಸುವವರು ಈ ಹೇಳಿಕೆಯೆ ಮೇಲೆ ಅಲ್ಲಿನ ಮಹಿಳೆಯರೊಂದಿಗೆ ಚರ್ಚಿಸಿದರು. ಆಗ ಅವರಲ್ಲಿನ ಹೆಚ್ಚಿನ ಮಹಿಳೆಯರು `ತಮ್ಮನ್ನು ಚುಡಾಯಿಸುವವರ ಮೇಲೆ ಕಠೋರ ಕಾರ್ಯಾಚರಣೆ ನಡೆಸಬೇಕು. ಯೋಗಿ ಆದಿತ್ಯನಾಥರಂತೆ ಪಾಕಿಸ್ತಾನದಲ್ಲಿಯೂ ಹುಡುಗಿಯರನ್ನು ಚುಡಾಯಿಸುವವರಿಗೆ ಬುದ್ಧಿ ಕಲಿಸಲು ಸಕ್ಷಮ ನಾಯಕರ ಅವಶ್ಯಕತೆಯಿದೆ’, ಎಂದು ಹೇಳಿದರು.
(ಸೌಜನ್ಯ – ANI News)
1. ಪಾಕಿಸ್ತಾನದಲ್ಲಿ ನಾಳೆ ಫೆಬ್ರುವರಿ 8 ರಂದು ಸಾರ್ವತ್ರಿಕ ಚುನಾವಣೆಗಾಗಿ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಹೆಚ್ಚಿನ ಪಕ್ಷಗಳು ಮಹಿಳೆಯರ ಸುರಕ್ಷೆಗಾಗಿ ಅನೇಕ ಅಶ್ವಾಸನೆಗಳನ್ನು ನೀಡಿವೆ. ಇವೆಲ್ಲವುಗಳಲ್ಲಿ ಯೋಗಿ ಆದಿತ್ಯನಾಥರ ಹೇಳಿಕೆಯ ಬಗ್ಗೆಯೂ ಚರ್ಚೆಯಾಗುತ್ತಿದೆ. ಪಾಕಿಸ್ತಾನದಲ್ಲಿಯೂ ಮಹಿಳೆಯರಿಗೆ ಸಾಮಾನ ಅಧಿಕಾರ ಲಭಿಸಬೇಕು ಎಂದು ಇಲ್ಲಿನ ಯುವತಿಯರು ಹೇಳುತ್ತಿದ್ದಾರೆ.
2. ಪಾಕಿಸ್ತಾನದ ಯುವತಿಯರು ಮಾತನಾಡುತ್ತ, ನಾವು ಮನೆಯಿಂದ ಹೊರಗೆ ಹೋಗುವಾಗ ಅನೇಕ ಟಿಪ್ಪಣಿಗಳನ್ನು ಕೇಳುತ್ತೇವೆ. ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಬಿರಿಯಾನಿ ಹಾಗೂ ಮಿಠಾಯಿ ತಿನ್ನುವಾಗಲೂ ಬುರಖಾ ಧರಿಸಲು ಹೇಳಲಾಗುತ್ತದೆ. ಬದಲಾಗಿ ಭಾರತದಲ್ಲಿ ಯುವತಿಯರು ಸಹಜವಾಗಿ ಹೊರಗೆ ಬರುತ್ತಾರೆ, ಉದ್ಯೋಗ ಮಾಡುತ್ತಾರೆ ಹಾಗೆಯೇ ರಾಜಕಾರಣದಲ್ಲಿಯೂ ಸಹಭಾಗಿಯಾಗುತ್ತಾರೆ. ಇವುಗಳ ಹಿಂದಿನ ಮಹತ್ತರ ಕಾರಣವೆಂದರೆ ಅಲ್ಲಿ ತಪ್ಪು ಮಾಡುವವರ ಮೇಲೆ ಕಠಿಣ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ, ಭಾರತದ ಎಲ್ಲ ರಾಜ್ಯಗಳಲ್ಲಿ ಯೋಗಿ ಆದಿತ್ಯನಾಥ ರಂತಹ ಮುಖ್ಯಮಂತ್ರಿಗಳ ಅವಶ್ಯಕತೆ ಇದೆ ಎಂದು ಜನತೆ ಹೇಳುವುದು ! |