ನಿತೇಶ್ ರಾಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಆಸಿಫ್ ಶೇಖ್ ಇವರ ಹೇಳಿಕೆಕ್ಷಮೆ ಕೇಳದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಬೆದರಿಕೆ |
ನಾಸಿಕ್ – ಬಿಜೆಪಿ ಶಾಸಕ ನಿತೇಶ್ ರಾಣೆ ಅವರು ಮಾಲೆಗಾಂವ್ಅನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದಿದ್ದರು. ಈ ವಿಚಾರದಲ್ಲಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಎನ್‌ಸಿಪಿ ಮಾಜಿ ಶಾಸಕ ಆಸಿಫ್ ಶೇಖ್ ಅವರು ಶಾಸಕ ನಿತೇಶ್ ರಾಣೆ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಈ ವಿಚಾರದಲ್ಲಿ ‘ರಾಣೆ ಮಾಲೆಗಾಂವ್ಕರ್ ಮತ್ತು ಮುಸ್ಲಿಂ ಬಾಂಧವರ ಕ್ಷಮೆ ಕೇಳಬೇಕು. ಕೇಳದಿದ್ದರೆ ಮಾಲೆಗಾಂವ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. (ಯಾರು ಕ್ಷಮೆ ಕೇಳಬೇಕು ? ಯಾರು ಗಲಭೆ ಸೃಷ್ಟಿಸುತ್ತಾರೆ, ಸಾರ್ವಜನಿಕ ಆಸ್ತಿ ಹಾನಿ ಮಾಡುವವರು ನಿಜವಾಗಿ ಕ್ಷಮೆ ಕೇಳಬೇಕು ! – ಸಂಪಾದಕರು) ಇಲ್ಲಿನ 300 ಕೋಟಿ ರೂಪಾಯಿ ವಿದ್ಯುತ್ ಕಳ್ಳತನ ಪ್ರಕರಣದಲ್ಲಿ ಶಾಸಕ ನಿತೇಶ್ ರಾಣೆ ಅವರು ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ಗೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಸಂಪಾದಕರ ನಿಲುವು* ಯಾರ ಮೇಲೆ ಗಲಭೆ ಪ್ರಕರಣ ದಾಖಲಾಗುತ್ತದೆಯೋ, ಅಂತಹವರಿಗೆ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಹೇಳಲು ಏನು ಅಧಿಕಾರ ? |