ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಸ್ಥಾಪನೆಯಾದ ಹಾಗೂ ಶಿಲ್ಪಿ ಅರುಣ ಯೋಗಿರಾಜ ಇವರು ತಯಾರಿಸಿದ ಶ್ರೀ ರಾಮಲಲ್ಲಾನ ಮೂರ್ತಿಯ ಗುಣವೈಶಿಷ್ಟ್ಯಗಳು !

ಸದ್ಗುರು ಡಾ. ಮುಕುಲ ಗಾಡಗೀಳ

‘ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆಗಾಗಿ ಶ್ರೀ ರಾಮಲಲ್ಲಾನ ಮೂರ್ತಿಯನ್ನು ತಯಾರಿಸಿದ ಮೂರ್ತಿಕಾರ ಶ್ರೀ.ಅರುಣ ಯೋಗಿರಾಜ ಇವರಿಗೆ ಈ ಮೂರ್ತಿ ತಯಾರಿಸಲು ೬ ತಿಂಗಳು ಬೇಕಾಯಿತು. ಈ ೬ ತಿಂಗಳಲ್ಲಿ ಅವರು ಋಷಿಮುನಿಗಳ ಹಾಗೆ ಜೀವನ ನಡೆಸಿದರು. ‘ಈ ೬ ತಿಂಗಳಲ್ಲಿ ಅವರು ಸಾತ್ತ್ವಿಕ ಆಹಾರ ಸೇವಿಸಿದರು. ಅವರು ಹಣ್ಣು-ಹಂಪಲು ಮತ್ತು ಮೊಳಕೆಯೊಡೆದ ಧಾನ್ಯಗಳನ್ನು ಮಾತ್ರ ಸೇವಿಸುತ್ತಿದ್ದರು’, ಎಂದು ಮೂರ್ತಿಕಾರ ಶ್ರೀ. ಅರುಣ ಯೋಗಿರಾಜ ಅವರ ಪತ್ನಿ ಸೌ. ವಿಜೇತಾ ಯೋಗಿರಾಜ ಇವರು ಹೇಳಿದರು.

ಶ್ರೀ.ಅರುಣ ಯೋಗಿರಾಜ

ಶ್ರೀ. ಯೋಗಿರಾಜ ಇವರು ತಯಾರಿಸಿದ ಮೂರ್ತಿಯ ವರ್ಣನೆ ಮಾಡುವಾಗ ಅವರು ಹೇಳುತ್ತಾರೆ, ”ಶ್ರೀರಾಮಲಲ್ಲಾನ ಸುಂದರ ಮೂರ್ತಿ ದೈವೀ ಅಸ್ತಿತ್ವವನ್ನು ತೋರಿಸುತ್ತದೆ. ಶ್ರೀರಾಮಲಲ್ಲಾ ಅಯೋಧ್ಯೆಗೆ ಹಿಂದಿರುಗಿದ್ದಾನೆ, ಎಂಬುದು ಮೂರ್ತಿಯನ್ನು ನೋಡಿದಾಗ ಸಾಕ್ಷಾತ್ಕಾರವಾಗುತ್ತದೆ.’’

೨೨.೧.೨೦೨೪ ರಂದು ಶ್ರೀ ರಾಮಲಲ್ಲಾನ ಮೂರ್ತಿಯನ್ನು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಶ್ರೀರಾಮಮಂದಿರ ದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಆ ಮೂರ್ತಿಯನ್ನು ನೋಡಿದಾಗ ಶಿಲ್ಪಿ ಶ್ರೀ. ಅರುಣ ಯೋಗಿರಾಜ ಇವರು ತಯಾರಿಸಿದ ಈ ಶ್ರೀ ರಾಮಲಲ್ಲಾನ ಮೂರ್ತಿಯಲ್ಲಿ ನನಗೆ ಈ ಮುಂದಿನ ಗುಣವೈಶಿಷ್ಟ್ಯಗಳು ಅರಿವಾದವು.

೧. ಶ್ರೀ ರಾಮಲಲ್ಲಾನ ಈ ಮೂರ್ತಿಯು ಅಪ್ರತಿಮ ಹಾಗೂ ಸುಂದರವಾಗಿದೆ.

೨. ಶ್ರೀರಾಮನ ಬಾಲಕರೂಪವು ನಮ್ಮನ್ನು ಆಕರ್ಷಿಸುತ್ತಿದೆ : ಶ್ರೀ ರಾಮಲಲ್ಲಾನ ಮೂರ್ತಿ ನಮ್ಮನ್ನು ತಕ್ಷಣ ಅದರ ಕಡೆಗೆ ಆಕರ್ಷಿಸುತ್ತದೆ. ‘ಅದು ಪ್ರಭು ಶ್ರೀರಾಮನ ಬಾಲರೂಪ ವಾಗಿರುವುದರಿಂದ ಹಾಗಾಗುತ್ತದೆ’, ಎಂಬುದು ಅರಿವಾಯಿತು. ಇದು ಮೂರ್ತಿಕಾರ ಶ್ರೀ. ಅರುಣ ಯೋಗೀರಾಜ ಇವರ ಆವಿಷ್ಕಾರ
ವಾಗಿದೆ. ಅವರು ಶ್ರೀರಾಮನ ಬಾಲಕರೂಪವನ್ನು ಯಥಾವತ್ತಾಗಿ ನಿರ್ಮಿಸಿದ್ದಾರೆ. ಶ್ರೀರಾಮ ದೇವತೆಯಾಗಿದ್ದಾನೆ ಹಾಗೂ ಅದರಲ್ಲಿಯೂ ಬಾಲರೂಪವೆಂದರೆ ಮುಗ್ಧ ಹಾಗೂ ನಿರ್ಮಲ ವಾಗಿರುತ್ತದೆ. ಆದ್ದರಿಂದ ಅದು ನಮ್ಮನ್ನು ಆಕರ್ಷಿಸುತ್ತದೆ.

೩. ಶ್ರೀರಾಮಲಲ್ಲಾನ ಮುಖವನ್ನು ನೋಡಿದಾಗ ಆನಂದವಾಗುವುದು, ಚರಣವನ್ನು ನೋಡಿದಾಗ ಶರಾಣಾಗತಭಾವ ಜಾಗೃತವಾಗುವುದು : ಶ್ರೀರಾಮಲಲ್ಲಾನ ಮುಖದಲ್ಲಿ ಮಧುರ ಮಂದಹಾಸವಿದೆ. ಆದ್ದರಿಂದ ಅವನ ಮುಖವನ್ನು ನೋಡಿದಾಗ ನಮಗೆ ತುಂಬಾ ಆನಂದವಾಗುತ್ತದೆ. ಅವನ ಚರಣಗಳನ್ನು ನೋಡಿದಾಗ ನಮ್ಮ ಶರಣಾಗತಭಾವ ಜಾಗೃತವಾಗುತ್ತದೆ. ಇದು ಕೂಡ ಮೂರ್ತಿಕಾರನ ವೈಶಿಷ್ಟ್ಯವಾಗಿದೆ. ಶ್ರೀ ರಾಮಲಲ್ಲಾನ ಮುಖ ನೋಡಿದಾಗ ಅದನ್ನು ನೋಡುತ್ತಲೇ ಇರಬೇಕೆನಿಸುತ್ತದೆ, ಅವನ ಚರಣಗಳನ್ನು ನೋಡಿದರೂ ನಮ್ಮ ದೃಷ್ಟಿ ಅಲ್ಲಿಂದ ಕದಲುವುದಿಲ್ಲ. ಇವೆರಡರಲ್ಲಿಯೂ ಅಷ್ಟು ಜೀವಂತಿಕೆ ಹಾಗೂ ದೇವತ್ವ ಬಂದಿದೆ. ‘ಇದು ಮೂರ್ತಿಕಾರ ಶ್ರೀ. ಯೋಗಿರಾಜರಿಗೆ ರಾಮನ ಬಗ್ಗೆ ಇರುವ ಭಾವ ಹಾಗೂ ಅವರ ಸಾಧನೆಯಿಂದ ಅವರಿಗೆ ಸಾಧ್ಯವಾಗಿದೆ’, ಎಂಬುದು ಅರಿವಾಯಿತು.

೪. ಶ್ರೀ. ರಾಮಲಲ್ಲಾನ ಮೂರ್ತಿ ಸುಂದರ ಹಾಗೂ ಸೊಗಸಾಗಿದೆ.

೫. ಪ್ರಾಣಪ್ರತಿಷ್ಠೆಯಾಗದಿದ್ದಾಗಲೂ ಮೂರ್ತಿಯಲ್ಲಿ ರಾಮತತ್ತ್ವ ಶೇ. ೨೫ ಇರುವುದು ಹಾಗೂ ಪ್ರಾಣಪ್ರತಿಷ್ಠೆಯಾದ ನಂತರ ಅದು ಶೇ. ೩೫ ರಷ್ಟಾಗಿರುವುದು ಅರಿವಾಯಿತು : ೨೨.೧.೨೦೨೪ ರಂದು ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆ ಆಗುವ ಮೊದಲು ಬೆಳಗ್ಗೆ ಅದರಲ್ಲಿ ರಾಮತತ್ತ್ವ ಶೇ. ೨೫ ರಷ್ಟು ಇರುವುದು ಅರಿವಾಯಿತು. ಇದು ಮೂರ್ತಿಕಾರನ ಕೌಶಲ್ಯ, ಭಾವ, ವ್ರತಾಚರಣೆ ಇತ್ಯಾದಿ ಗುಣಗಳಿಂದಾಗಿ ಸಾಧ್ಯ ವಾಯಿತು. ಶ್ರೀ ರಾಮಲಲ್ಲಾನ ಮೂರ್ತಿಯಲ್ಲಿ ಪ್ರಾಣಪ್ರತಿಷ್ಠೆಯಾದ ನಂತರ ಅದರಲ್ಲಿನ ರಾಮತತ್ತ್ವ ಶೇ. ೩೫ ರಷ್ಟಾಯಿತು.

೬. ಮೂರ್ತಿಯಲ್ಲಿ ತಾರಕ ಸ್ಪಂದನಗಳು ಶೇ. ೯೦ ರಷ್ಟು ಹಾಗೂ ಮಾರಕ ಸ್ಪಂದನಗಳು ಶೇ. ೧೦ ರಷ್ಟು ಅರಿವಾಗುವುದು ಶ್ರೀರಾಮನ ಮೂರ್ತಿ ಬಾಲಕಸ್ವರೂಪದಲ್ಲಿದ್ದ ಕಾರಣ ಅದರಲ್ಲಿ ತಾರಕ ತತ್ತ್ವ ಹೆಚ್ಚು ಪ್ರಮಾಣದಲ್ಲಿದೆ.

೭. ಮೂರ್ತಿಯನ್ನು ನೋಡಿದಾಗ ಮಣಿಪುರಚಕ್ರದಲ್ಲಿ ಸ್ಪಂದನಗಳು ಅರಿವಾಗುವುದು ಹಾಗೂ ಸೂರ್ಯನಾಡಿ ಕಾರ್ಯನಿರತವಾಗುವುದು : ಪ್ರಭು ಶ್ರೀರಾಮನು ಸೂರ್ಯವಂಶಿಯಾಗಿದ್ದಾನೆ. ಮಣಿ ಪುರಚಕ್ರ ಹಾಗೂ ಸೂರ್ಯನಾಡಿ ತೇಜತತ್ತ್ವಕ್ಕೆ ಸಂಬಂಧಿಸಿದೆ. ಆದ್ದರಿಂದ ಶ್ರೀ ರಾಮಲಲ್ಲಾನ ಮೂರ್ತಿಯನ್ನು ನೋಡಿ ತೇಜ ತತ್ತ್ವದ ಅರಿವಾಯಿತು. ಮೂರ್ತಿಕಾರ ಶ್ರೀ. ಯೋಗಿರಾಜರು ಶ್ರೀ ರಾಮಲಲ್ಲಾನ ಮೂರ್ತಿಯಲ್ಲಿ ಈ ಸೂಕ್ಷ್ಮದ ಸ್ಪಂದನಗಳನ್ನೂ ತಂದಿದ್ದಾರೆ. ಇದರಿಂದ ಅವರ ಅರ್ಹತೆಯ ಅರಿವಾಗುತ್ತದೆ.

೮. ಮೂರ್ತಿಯನ್ನು ಇನ್ನಷ್ಟು ಸ್ವಲ್ಪ ಸಮಯ ನೋಡಿದಾಗ ಮೊದಲು ತನ್ನ ಮೂಲಾಧಾರಚಕ್ರ ಜಾಗೃತವಾಗುವುದು ಹಾಗೂ ಅನಂತರ ಸಹಸ್ರಾರಚಕ್ರ ಜಾಗೃತವಾಗುವುದು : ಮೂರ್ತಿಯನ್ನು ೨-೩ ನಿಮಿಷ ನೋಡಿದಾಗ ಮೊದಲು ನನ್ನ ಮೂಲಾಧಾರಚಕ್ರ ಜಾಗೃತವಾಯಿತು ಮೂರ್ತಿಯನ್ನು ೨-೩ ನಿಮಿಷ ನೋಡಿದಾಗ ಮೊದಲು ನನ್ನ ಮೂಲಾಧಾರಚಕ್ರ ಜಾಗೃತವಾಯಿತು ಹಾಗೂ ಅನಂತರ ಸಹಸ್ರಾರಚಕ್ರ ಜಾಗೃತವಾಯಿತು. ಆಗ ನನ್ನ ಸುಷುಮ್ನಾನಾಡಿ ಕಾರ್ಯನಿರತವಾಯಿತು. ಆದ್ದರಿಂದ ಈ ಮೂರ್ತಿಯಲ್ಲಿ ಮೂಲಾಧಾರಚಕ್ರ ಮತ್ತು ಸಹಸ್ರಾರಚಕ್ರ ಜಾಗೃತಗೊಳಿಸುವ ಸಾಮರ್ಥ್ಯವೂ ಇದೆಯೆಂಬುದು ಅರಿವಾಯಿತು. ಇದು ಮೂರ್ತಿಯಲ್ಲಿನ ದೇವತ್ವದ ಪರಿಣಾಮವಾಗಿದೆಯೆಂದು ಅರಿವಾಗುತ್ತದೆ. ಆದ್ದರಿಂದ ಮೂರ್ತಿಕಾರರು ಮೂರ್ತಿಯಲ್ಲಿ ಪ್ರತ್ಯಕ್ಷ ದೇವತ್ವವನ್ನು ತಂದಿದ್ದಾರೆ, ಎಂಬುದು ತಿಳಿಯಿತು.

೯. ಮೂರ್ತಿಯಲ್ಲಿನ ವಿವಿಧ ಸ್ಪಂದನಗಳ ಪ್ರಮಾಣ : ಈ ಮೇಲಿನ ಕೋಷ್ಟಕದಿಂದ ಶ್ರೀ ರಾಮಲಲ್ಲಾನ ಮೂರ್ತಿಯಲ್ಲಿ ಆನಂದದ ಸ್ಪಂದನಗಳು ಅತೀ ಹೆಚ್ಚು ಪ್ರಮಾಣದಲ್ಲಿದೆ, ಎಂಬುದು ಅರಿವಾಗುತ್ತದೆ ಹಾಗೂ ಮೂರ್ತಿಯನ್ನು ನೋಡಿಯೂ ಹಾಗೆಯೇ ಅರಿವಾಗುತ್ತದೆ.

೧೦. ವಿಶ್ವದಾದ್ಯಂತ ರಾಮರಾಜ್ಯವನ್ನು ತರುವ ಮೂರ್ತಿ !

‘ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿತವಾದ ಕಾರಣ ವಿಶ್ವದಾದ್ಯಂತ ರಾಮರಾಜ್ಯ ಬರುವ ಪ್ರಕ್ರಿಯೆ ಆರಂಭವಾಗುವುದು’, ಎಂದು ಅನಿಸಿತು. ಪ್ರಭು ಶ್ರೀರಾಮನು ದೇಹಶುದ್ಧಿ ಹಾಗೂ ವಾತಾವರಣ ಶುದ್ಧಿಯ ಕಾರ್ಯಗಳನ್ನು ಒಂದೇ ಸಮಯಕ್ಕೆ ಆರಂಭಿಸುವನು. ದೇಹಶುದ್ಧಿಯೆಂದರೆ ಸದ್ಯ ಮನುಷ್ಯನಲ್ಲಿ ಅನೀತಿ, ಅಧರ್ಮಾಚರಣೆ, ದುರಾಚರಣೆ, ಸ್ವಾರ್ಥ ಇಂತಹ ರಜ-ತಮಾತ್ಮಕ ಪ್ರವೃತ್ತಿ ಹೆಚ್ಚಾಗಿದೆ, ಅವುಗಳನ್ನು ನಾಶಗೊಳಿಸುವುದು. ಮೊದಲಿಗೆ ದೇಹಶುದ್ಧಿಯ ಕಾರ್ಯ ಪೂರ್ಣಗೊಳ್ಳುವವು ಹಾಗೂ ಆ ಮೇಲೆ ವಾತಾವರಣಶುದ್ಧಿ ಪೂರ್ಣವಾಗುವುದು. ಈ ರೀತಿ ಶುದ್ಧೀಕರಣದ ಕಾರ್ಯ ಪೂರ್ಣವಾದ ನಂತರ ಸತ್ತ್ವಗುಣಿ ರಾಮರಾಜ್ಯವು ಆರಂಭವಾಗುವುದು !

ಶ್ರೀರಾಮಲಲ್ಲಾನ ಮೂರ್ತಿಯ ದರ್ಶನದಿಂದಾಗಿ ಇವೆಲ್ಲವೂ ಕಲಿಯಲು ಸಿಕ್ಕಿದವು. ಅದಕ್ಕಾಗಿ ಪ್ರಭು ಶ್ರೀರಾಮ ಮತ್ತು ನನಗೆ ಪ್ರೇರಣೆ ನೀಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್‌.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೨.೧.೨೦೨೪)