Ayodhya Ram Mandir Timings : ಶ್ರೀರಾಮಲಲ್ಲಾನ ದರ್ಶನ ಬೆಳಿಗ್ಗೆ ೬ ರಿಂದ ರಾತ್ರಿ ೧೦ ವರೆಗೆ !

ಅಯೋಧ್ಯೆ – ಶ್ರೀ ರಾಮಲಲ್ಲಾನ ದರ್ಶನದ ವೇಳಾಪಟ್ಟಿ ಬದಲಾಗಿದೆ. ಈಗ ದೇವಸ್ಥಾನ ಪ್ರತಿದಿನ ಸುಮಾರು ೧೬ ಗಂಟೆ ತೆರೆದಿರುತ್ತದೆ. ಶೃಂಗಾರ ಆರತಿಯ ನಂತರ ದೇವಸ್ಥಾನದ ಪ್ರವೇಶ ದ್ವಾರ ಬೆಳಿಗ್ಗೆ ೬ ಗಂಟೆಗೆ ಭಕ್ತರಿಗಾಗಿ ತೆರೆಯಲಾಗುವುದು. ರಾತ್ರಿ ೧೦ ಗಂಟೆಯವರೆಗೆ ಭಕ್ತರು ಶ್ರೀರಾಮಲಲ್ಲಾನ ದರ್ಶನ ಪಡೆಯಬಹುದು. ಈ ಅವಧಿಯಲ್ಲಿ ಸಾಯಂಕಾಲದ ಆರತಿಗಾಗಿ ದೇವಸ್ಥಾನ ಕೇವಲ ೧೫ ನಿಮಿಷ ಮುಚ್ಚುವುದು. ಈ ಹಿಂದೆ ದೇವಸ್ಥಾನ ಬೆಳಿಗ್ಗೆ ೭ ರಿಂದ ರಾತ್ರಿ ೯.೩೦ ವರೆಗೆ ತೆರೆದಿರುತ್ತಿತ್ತು. ದೇವಸ್ಥಾನದ ಟ್ರಸ್ಟಿ, ಡಾ. ಅನಿಲ್ ಮಿಶ್ರ ಇವರು ನೂತನ ವೇಳಾಪಟ್ಟಿ ಪ್ರಸಿದ್ಧಗೊಳಿಸಿದ್ದಾರೆ.

೧. ಪ್ರಯಾಗರಾಜ ಮಹಾಕಂಭದಿಂದ ಹಿಂತಿರುಗುವ ಭಕ್ತರ ದಟ್ಟಣೆಯಿಂದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿರುವುದಾಗಿ ರಾಮಮಂದಿರ ಟ್ರಸ್ಟ್ ಹೇಳಿದೆ.

೨. ಶ್ರೀ ರಾಮಲಲ್ಲಾನ ಮಂಗಳಾರತಿ ಬೆಳಗ್ಗೆ ೪ ಗಂಟೆಗೆ ಆಗುವುದು. ದೇವಸ್ಥಾನದ ಪ್ರವೇಶದ್ವಾರ ಬೆಳಿಗ್ಗೆ ೬ ಗಂಟೆಗೆ ತೆರೆಯುವುದು. ಅದರ ನಂತರ ಶೃಂಗಾರ ಆರತಿ ಆಗುವುದು. ಅದರ ನಂತರ ಭಕ್ತರು ರಾಮಲಲ್ಲಾನ ದರ್ಶನ ಪಡೆಯಬಹುದು.

೩. ಮಧ್ಯಾಹ್ನ ೧೨ ಗಂಟೆಗೆ ಭೋಗ ಆರತಿ (ನೈವೇದ್ಯ) ಆಗುವುದು. ಅದರ ನಂತರ ಭಕ್ತರು ಮತ್ತೆ ಶ್ರೀರಾಮಲಲ್ಲಾನ ದರ್ಶನ ಪಡೆಯಬಹುದು.

೪. ಸಾಯಂಕಾಲ ೭ ಗಂಟೆಗೆ ಸಂಜೆಯ ಆರತಿ ಆಗುವುದು. ಈ ಸಮಯದಲ್ಲಿ ದೇವಸ್ಥಾನ ೧೫ ನಿಮಿಷ ಮುಚ್ಚಲಿದೆ.

೫. ರಾತ್ರಿ ೧೦ ಗಂಟೆಗೆ ಶಯನ ಆರತಿ ಆಗುವುದು. ಅದರ ನಂತರ ದೇವಸ್ಥಾನದ ಬಾಗಿಲು ಮುಚ್ಚುವುದು.

೬. ಟ್ರಸ್ಟಿ ಡಾ. ಅನಿಲ ಮಿಶ್ರ ಇವರ ಪ್ರಕಾರ ನೂತನ ವ್ಯವಸ್ಥೆಯಲ್ಲಿ ದರ್ಶನಕ್ಕಾಗಿ ಬಿರ್ಲಾ ಧರ್ಮಶಾಲೆ ಎದುರಿನ ಮುಖ್ಯ ಪ್ರವೇಶ ದ್ವಾರದಿಂದ ಪ್ರವೇಶಿಸಬೇಕಾಗುತ್ತದೆ.