ಶ್ರೀರಾಮ ಮಂದಿರದ ಮೇಲೆ ದಾಳಿ ಮಾಡುವ ಸಂಚು ಬಹಿರಂಗ; ಅಬ್ದುಲ್ ರೆಹಮಾನನ ಬಂಧನ

ಫರಿದಾಬಾದ್ (ಹರಿಯಾಣ) – ಇಲ್ಲಿ ಗುಜರಾತ್ ಉಗ್ರ ನಿಗ್ರಹ ದಳ ಮತ್ತು ಫರಿದಾಬಾದ್ ವಿಶೇಷ ಕ್ರಿಯಾ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಬ್ದುಲ್ ರೆಹಮಾನ್ (19 ವರ್ಷ) ನನ್ನು ಬಂಧಿಸಿದೆ. ಅವನು ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಬಂಧ ಹೊಂದಿದ್ದು, ಅಯೋಧ್ಯೆಯ ನಿವಾಸಿಯಾಗಿದ್ದಾನೆ. ಆತನಿಂದ 2 ಕೈ ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ನೊಂದಿಗೆ ಸಂಪರ್ಕದಲ್ಲಿದ್ದನು ಮತ್ತು ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ದಾಳಿಯ ಸಿದ್ಧತೆ ಮಾಡುತ್ತಿದ್ದನು. ಅವನು ಹಲವು ಬಾರಿ ಶ್ರೀರಾಮ ಮಂದಿರದ ಗೌಪ್ಯ ಮಾಹಿತಿ ಸಂಗ್ರಹಿಸಿ ಅದನ್ನು ಐ.ಎಸ್.ಐ.ಗೆ ನೀಡಿದ್ದನು.