ನವದೆಹಲಿ – ‘ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ನ್ಯಾಸ’ದ ಟ್ರಸ್ಟಿ ಮತ್ತು ಮಾಜಿ ಶಾಸಕ ಕಾಮೇಶ್ವರ ಚೌಪಾಲ್ (ವಯಸ್ಸು ೬೮ ವರ್ಷ) ಇವರು ಫೆಬ್ರುವರಿ ೭ ರಂದು ಇಲ್ಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದಾಗಿ ಅವರು ಕೆಲುವು ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕಾಮೇಶ್ವರ ಚೌಪಾಲ್ ರಾಮ ಜನ್ಮಭೂಮಿ ಆಂದೋಲನದ ಮೊದಲ ಕಾರಸೇವಕ (ರಾಮ ಮಂದಿರಕ್ಕಾಗಿ ಆಂದೋಲನ ಮಾಡುವವರು)ರಾಗಿದ್ದರು. ಅವರೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಡದ ಮೊದಲ ಇಟ್ಟಿಗೆ ಇಟ್ಟಿದ್ದರು. ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ‘ಪ್ರಥಮ ಕಾರಸೇವಕ’ ಎಂಬ ಸ್ಥಾನ ನೀಡಿದ್ದರು. ಕಾಮೇಶ್ವರ ಚೌಪಾಲ ಇವರು ರಾಜಕೀಯಕ್ಕೆ ಬರುವ ಮೊದಲು ವಿಶ್ವ ಹಿಂದೂ ಪರಿಷತ್ತಿನ ಸಹ ಸಚಿವರಾಗಿದ್ದರು ಹಾಗೂ ಅವರು ಭಾಜಪದ ಬಿಹಾರ ಪ್ರದೇಶ ಕಾರ್ಯದರ್ಶಿ ಕೂಡ ಆಗಿದ್ದರು.