ರಷ್ಯಾದ ಭಾರತೀಯ ರಾಯಭಾರ ಕಛೇರಿಯಲ್ಲಿತ್ತು ನೇಮಕ !
ಮೇರಠ (ಉತ್ತರಪ್ರದೇಶ) – ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಸತ್ಯೇಂದ್ರ ಸಿವಾಲ ಎಂಬ ನೌಕರನನ್ನು ಮೇರಠನಲ್ಲಿ ಬಂಧಿಸಿದೆ. ಅವನು ಮಾಸ್ಕೋದಲ್ಲಿಯ ರಾಯಭಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು ಮೂಲತಃ ಉತ್ತರಪ್ರದೇಶದ ಹಾಪುಡದನವನು. ೨೦೨೧ ರಿಂದ ಸತ್ಯೇಂದ್ರನನ್ನು ‘ಅತ್ಯುತ್ತಮ ಭದ್ರತಾ ಸಹಾಯಕ‘ ಎಂದು ನೇಮಿಸಲಾಗಿತ್ತು. ಅವನು ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದನು. ಆತನಿಂದ ೧ ಮೊಬೈಲ್ ಫೋನ್, ಆಧಾರ್ ಕಾರ್ಡ್ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಮಹಿಳೆಯ ಬಲೆಗೆ ಸಿಲುಕಿದ್ದ !
ಸತ್ಯೇಂದ್ರ ಸಿವಾಲ ಕಳೆದ ವರ್ಷ ಐ.ಎಸ್.ಐ.ನ ಓರ್ವ ಮಹಿಳೆಯ ಸಂಪರ್ಕಕ್ಕೆ ಬಂದಿದ್ದನು. ಆದ್ದರಿಂದ ಅವರ ಆನ್‌ಲೈನ್ ಚಾಟ್‌ನೊಂದಿಗೆ ವೀಡಿಯೋ ಕರೆ ಶುರುವಾಯಿತು. ಪಾಕಿಸ್ತಾನದ ಈ ಮಹಿಳೆಯ ಜಾಲದಲ್ಲಿ ಸಿಕ್ಕಿಕೊಂಡಿದ್ದು ಅನೇಕ ಗೌಪ್ಯ ಮಾಹಿತಿ ಈ ಮಹಿಳೆಗೆ ಕೊಟ್ಟಿದ್ದಾನೆ. ಇದಕ್ಕಾಗಿ ಈ ಮಹಿಳೆ ಮೊದಲು ಸತ್ಯೇಂದ್ರನಿಗೆ ಉಡುಗೊರೆ ಮತ್ತು ಹಣದ ಅಮಿಷ ತೋರಿಸಿದಳು. ಆನಂತರ ಅವಳು ಸತ್ಯೇಂದ್ರನಿಗೆ ರಾಯಭಾರಿ ಕಚೇರಿಗೆ ಬರುತ್ತಿರುವ ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿ ಕೇಳಲು ಶುರು ಮಾಡಿದಳು. ಸತ್ಯೇಂದ್ರ ಅವಳಿಗೆ ಅನೇಕ ಮಹತ್ವದ ಮಾಹಿತಿಗಳನ್ನು ಕೊಡುತ್ತಿದ್ದನು.
ಸಂಪಾದಕೀಯ ನಿಲುವುಇಂತಹವರಿಗೆ ಕಠಿಣ ಶಿಕ್ಷೆಯಾದರೆ ಬೇರೆಯವರು 100 ಸಲ ವಿಚಾರ ಮಾಡುವರು ! |