ವಾರಣಾಸಿ (ಉತ್ತರ ಪ್ರದೇಶ) – ಭಾರತೀಯ ಪುರಾತತ್ವ ಸಮೀಕ್ಷೆಯ ತಂಡವು ಜ್ಞಾನವಾಪಿಯ ವಿವರವಾದ ನಕ್ಷೆಯನ್ನು ನಿರ್ಮಿಸಿದೆ. ಈ ರೀತಿ ಆಗಿರುವುದು ಇದೇ ಮೊದಲಬಾರಿಯಾಗಿದೆ. ಇದರ ಮೊದಲು ಜೇಮ್ಸ್ ಪ್ರಿನ್ಸೆಪ್ ಮತ್ತು ಇತರರು ಮಾಡಿದ ಹಿಂದಿನ ನಕ್ಷೆಗಳು ಕಾಶಿಯ ಜನರೊಂದಿಗೆ ಚರ್ಚೆಗಳು ಅಥವಾ ಸಂಭಾಷಣೆಗಳನ್ನು ಆಧರಿಸಿತ್ತು. ಇದು ಕಲ್ಪನೆಯಿಂದ ಮಾಡಲ್ಪಟ್ಟಿದೆ, ಅದನ್ನು ನಿಖರ ಎಂದು ಕರೆಯಲಾಗುವುದಿಲ್ಲ.
ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ಜ್ಞಾನವಾಪಿ ಮತ್ತು ಅದರ ರಚನೆಯ ಉದ್ದ ಮತ್ತು ಅಗಲವನ್ನು ಅಳೆಯುವ ಮೂಲಕ ನಿಖರವಾದ ವಿವರಗಳು ಲಭ್ಯವಾದ ನಂತರ ಮೊದಲ ಬಾರಿಗೆ ನಿಖರವಾದ ನಕ್ಷೆಯನ್ನು ತಯಾರಿಸಲಾಯಿತು. ಜ್ಞಾನವಾಪಿಯ 839 ಜಲ ಸಮೀಕ್ಷೆ ವರದಿಯನ್ನು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಅದರಲ್ಲಿ ನೀಡಲಾದ ನಕ್ಷೆಯು ಸೆಂಟ್ರಲ್ ಹಾಲ್, ಉತ್ತರ ಸಭಾಂಗಣ, ದಕ್ಷಿಣ ಸಭಾಂಗಣ, ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಮಾರ್ಗ ಮತ್ತು ಜ್ಞಾನವಾಪಿಯ ಪ್ರಸ್ತುತ ರಚನೆಯ ಪಕ್ಕದಲ್ಲಿರುವ ಕೋಣೆಗಳ ಉದ್ದ ಮತ್ತು ಅಗಲ ಇವುಗಳ ನೈಜ ಸ್ಥಿತಿಯನ್ನು ವಿವರಿಸುತ್ತದೆ.
Following the Survey, Archaeological Survey of India makes Authentic Map of #Gyanvapi for the first time !
Remove Worship Act#GyanvapiCase | #GyanvapiASISurvey #ReclaimTemples pic.twitter.com/l5P6zI54Kz
— Sanatan Prabhat (@SanatanPrabhat) February 4, 2024
“ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತೀಯ ಪುರಾತತ್ವ ಇಲಾಖೆಯು ಜ್ಞಾನವಾಪಿಯ ಸ್ಪಷ್ಟ ನಕ್ಷೆಯನ್ನು ಮಾಡಿದೆ ಎಂದು ನಾವು ಖಚಿತವಾಗಿ ಹೇಳಬಹುದು. – ಸಮಿಕ್ಷೆಯ ವಿಜ್ಞಾನಿ