ಪಾಕಿಸ್ತಾನಿ ಗಾಯಕ ಅತಿಫ ಅಸ್ಲಂ ಪುನಃ ಬಾಲಿವುಡನಲ್ಲಿ ಕೆಲಸ ಮಾಡುವವನಿದ್ದಾನೆ !

ಸಾಮಾಜಿಕ ಮಾಧ್ಯಮದಿಂದ ಭಾರತೀಯರಿಂದ ಆಕ್ರೋಶ ವ್ಯಕ್ತ

ಮುಂಬಯಿ – ಪಾಕಿಸ್ತಾನಿ ಗಾಯಕ ಆತಿಫ ಅಸ್ಲಂ 7 ವರ್ಷಗಳ ಬಳಿಕ ಪುನಃ ಬಾಲಿವುಡನಲ್ಲಿ ಕೆಲಸ ಮಾಡಸಲಿದ್ದಾನೆ. `ಲವ್ ಸ್ಟೋರಿ ಆಫ್ 90’ ಈ ಚಲನಚಿತ್ರದ ಒಂದು ಹಾಡನ್ನು ಹಾಡಲಿದ್ದಾನೆ. ಅಮಿತ ಕಸಾರಿಯಾ ಈ ಚಲನಚಿತ್ರದ ನಿರ್ದೇಶಕರಾಗಿದ್ದಾರೆ. ಹರೇಶ ಮತ್ತು ಧರ್ಮೇಶ ಸಂಘಾನಿ ಈ ಚಲನಚಿತ್ರದ ನಿರ್ಮಾಪಕರಾಗಿದ್ದಾರೆ. ಅತಿಫ ಅಸ್ಲಮ ಇವನ ಪುನರಾಗಮನದಿಂದ ಚಲನಚಿತ್ರಕ್ಕೆ ಸಂಬಂಧಿಸಿದ ನಿರ್ದೇಶಕ ಮತ್ತು ನಿರ್ಮಾಪಕರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ; ಆದರೆ ಭಾರತೀಯರಲ್ಲಿ ಆಕ್ರೋಶವ್ಯಕ್ತವಾಗಿದ್ದು, ಅನೇಕ ಜನರು ಸಾಮಾಜಿಕ ಮಾಧ್ಯಮದಿಂದ ಇದನ್ನು ವಿರೋಧಿಸುತ್ತಿದ್ದಾರೆ.

2016ರಲ್ಲಿ ಉರಿಯ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿ ಕಲಾವಿಧರ ಮೇಲೆ ಭಾರತದಲ್ಲಿ ನಿರ್ಬಂಧಿಸುವಂತೆ ಕೋರಲಾಗಿತ್ತು. ತದನಂತರ ಪಾಕಿಸ್ತಾನಿ ಕಲಾವಿಧರು ಭಾರತದಲ್ಲಿ ಕೆಲಸ ಮಾಡಿಲ್ಲ. `ಈಗ ಪುನಃ ಇಂತಹ ಪ್ರಕಾರ ಪ್ರಾರಂಭವಾಗಲಿದೆಯೇ?’ ಎನ್ನುವ ಪ್ರಶ್ನೆಯನ್ನು ಕೇಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮದಿಂದ ಭಾರತೀಯರ ವಿರೋಧ

ಅಸ್ಲಂನಿಗೆ ಹಾಡುವ ಅವಕಾಶ ನೀಡಿರುವ ವಿಷಯದಲ್ಲಿ ಅನೇಕ ಜನರು ಬಾಲಿವುಡನ ಉದ್ದೇಶದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ‘ಒಂದೆಡೆ ಭಾರತೀಯ ಸೈನಿಕರು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರೊಂದಿಗೆ ಹೋರಾಡುತ್ತಿದ್ದು, ದೇಶಕ್ಕಾಗಿ ಬಲಿದಾನ ನೀಡುತ್ತಿದ್ದಾರೆ. ಇನ್ನೊಂದೆಡೆ ಕಲೆಯ ಹೆಸರಿನಡಿಯಲ್ಲಿ ಬಾಲಿವುಡ ಪಾಕಿಸ್ತಾನಿ ಗಾಯಕರನ್ನು ಸ್ವಾಗತಿಸುತ್ತಿದ್ದಾರೆ’ ಎನ್ನುವ ಪ್ರತಿಕ್ರಿಯೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

ಅತಿಫ ಅಸ್ಲಂನ ಭಾರತದ್ವೇಷ !

ಅನೇಕ ಪಾಕಿಸ್ತಾನಿ ಕಲಾವಿಧರು ಭಾರತದ ವಿರುದ್ಧ ವಿಷ ಕಾರುವುದು ಕಂಡು ಬರುತ್ತದೆ. ಭಾರತವು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ರದ್ದುಗೊಳಿಸಿದ ಬಳಿಕ ಅಸ್ಲಂನು `ಕಾಶ್ಮೀರಿ ಜನರ ಮೇಲಾಗುವ ಅನ್ಯಾಯ ಮತ್ತು ದೌರ್ಜನ್ಯವನ್ನು ನಾನು ಕಟುವಾದ ಶಬ್ದದಲ್ಲಿ ನಿಷೇಧಿಸುತ್ತೇನೆ’, ಎಂದು ಅವನು ಹೇಳಿದ್ದ. (ಇಂತಹವರಿಗೆ ಭಾರತದಲ್ಲಿ ರತ್ನಗಂಬಳಿ ಹಾಸುತ್ತಿರುವುದು ಆಕ್ರೋಶದ ವಿಷಯವೇ ಆಗಿದೆ – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದಿ ಚಲನಚಿತ್ರಗಳಲ್ಲಿ ಪಾಕಿಸ್ತಾನಿ ಗಾಯಕನಿಗೆ ಹಾಡಲು ಅವಕಾಶ ನೀಡುವ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರು ರಾಷ್ಟ್ರಘಾತುಕರೇ ಆಗಿದ್ದಾರೆ. ಇಂತಹವರ ಚಲನಚಿತ್ರವನ್ನು ಬಹಿಷ್ಕಾರ ಹಾಕುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿಯ ರಾಷ್ಟ್ರಕರ್ತವ್ಯವೇ ಆಗಿದೆ !