ಉತ್ತರಾಖಂಡದಲ್ಲಿ ಏನಾದರೂ ಹಾನಿಯಾದರೆ ಸರಕಾರವೇ ಹೊಣೆ ಎಂದು ಕಾಜಿಯಿಂದ ಬೆದರಿಕೆ !

ಉತ್ತರಾಖಂಡದಲ್ಲಿ ಸಮಾನ ನಾಗರಿಕ ಕಾನೂನು ಜಾರಿಯಾಗುವ ಪ್ರಕರಣ

(ಕಾಜಿ ಎಂದರೆ ಷರಿಯಾ ಕಾನೂನಿನ ಪ್ರಕಾರ ನ್ಯಾಯ ನೀಡುವವರು)

ಡೆಹ್ರಾಡೂನ್ – ಉತ್ತರಕಾಂಡ ಸರಕಾರವು ಸಮಾನ ನಾಗರಿಕ ಕಾನೂನಿಗಾಗಿ ಸ್ಥಾಪಿಸಿದ ತಜ್ಞರ ಸಮಿತಿಯು ಕಾನೂನಿನ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ. ಸಚಿವ ಸಂಪುಟದ ಒಪ್ಪಿಗೆ ಬಳಿಕ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ. ಇದಕ್ಕಾಗಿ ಫೆಬ್ರವರಿ 5 ರಿಂದ ಸದನ ವಿಶೇಷ ಅಧಿವೇಶನ ಕರೆಯಲಾಗಿದೆ. ಇದು ಮತಾಂಧ ಮುಸ್ಲಿಮರನ್ನು ಕೆರಳಿಸಿದೆ. ಡೆಹ್ರಾಡೂನ್ ನಗರದ ಕಾಜಿ ಮುಹಮ್ಮದ್ ಅಹ್ಮದ್ ಖಾಸ್ಮಿ ಇವರು, ‘ಸರಕಾರ ಏನು ಬೇಕಾದರೂ ನಿರ್ಧಾರ ಕೈಗೊಳ್ಳಬಹುದು’ ಎಂದರು. ರಾಜ್ಯದ ಆಡಳಿತ ಅವರ (ಬಿಜೆಪಿ) ಕೈಯಲ್ಲಿದೆ; ಆದರೆ ಈ ಕಾನೂನು ಜಾರಿಯಾದ ನಂತರ ರಾಜ್ಯಕ್ಕೆ ಆಗುವ ಹಾನಿಗೆ ಸರಕಾರವೇ ಹೊಣೆಯಾಗಲಿದೆ. ಎಂದು ಬೆದರಿಕೆ ಹಾಕಿದ್ದಾರೆ. ಈ ಕಾನೂನಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಬಿಜೆಪಿ ಸರಕಾರವನ್ನು ಟೀಕಿಸಿದೆ.

ಕಾಂಗ್ರೆಸ್‌ನಿಂದ ಮುಸಲ್ಮಾನರ ಓಲೈಕೆ

ಬಿಜೆಪಿ ಸರಕಾರವನ್ನು ಟೀಕಿಸಿದ ಕಾಂಗ್ರೆಸ್, ‘ಸರ್ಕಾರದ ಈ ನಿರ್ಧಾರವು ಉತ್ತರಾಖಂಡಕ್ಕೆ ಏನು ಲಾಭವಾಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ಮಾಡಿಕೊಡಲು ಬಿಜೆಪಿ ಈ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸೂರ್ಯಕಾಂತ್ ದಶಮಾನ ಹೇಳಿದ್ದಾರೆ. (ಕಾಂಗ್ರೆಸ್‌ಗೆ ಹಿಂದೂಗಳು ಮನೆಯಲ್ಲಿ ಕೂಡಿಸಿದ್ದರೂ ಬುದ್ಧಿ ಬಂದಿಲ್ಲ ಎನ್ನುವುದನ್ನು ತೋರಿಸುತ್ತದೆ ! – ಸಂಪಾದಕರು) ‘ಈ ಕಾನೂನನ್ನು ಜಾರಿಗೆ ತರಲು ಸರಕಾರ ಯಾರ ಅಭಿಪ್ರಾಯವನ್ನು ತೆಗೆದುಕೊಂಡಿದೆ ಎಂಬುದನ್ನು ಅವರು ಹೇಳಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಭವಿಷ್ಯದಲ್ಲಿ ಉತ್ತರಾಖಂಡದಲ್ಲಿ ಸಮಾನ ನಾಗರಿಕ ಕಾನೂನು ಜಾರಿಯಾದರೆ ಮತಾಂಧರು ಗಲಭೆಗಳು ಸೃಷ್ಟಿಸಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುತ್ತವೆ ಎಂಬುದು ಕಾಜಿಯವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಇಂತಹ ಸಮಾಜವಿರೋಧಿ ಕಾಜಿ ವಿರುದ್ಧ ಕ್ರಮ ಕೈಗೊಳ್ಳುವ ಅಪೇಕ್ಷಿತ ಇದೆ !