ಪುಣೆ ವಿಶ್ವವಿದ್ಯಾಲಯದ ನಾಟಕದಲ್ಲಿ ಶ್ರೀರಾಮನನ್ನು ಅವಮಾನಿಸಿದ ನಟ ವಿದ್ಯಾರ್ಥಿಗಳಿಗೆ ಎಬಿವಿಪಿಯಿಂದ ಧರ್ಮದೇಟು !

  • ದೂರಿನ ಮೇರೆಗೆ ಪೊಲೀಸರಿಂದ ವಿಭಾಗದ ಮುಖ್ಯಸ್ಥರು ಸೇರಿದಂತೆ 6 ವಿದ್ಯಾರ್ಥಿಗಳ ಬಂಧನ

  • ಸೀತಾಮಾತೆಯ ಪಾತ್ರದಲ್ಲಿ ನಟಿಸುತ್ತಿರುವ ನಟ ಅವಾಚ್ಯಪದಗಳಲ್ಲಿ ನಿಂದಿಸುತ್ತಾ ಸಿಗರೇಟು ಸೇದುತ್ತಿರುವುದನ್ನು ತೋರಿಸುವುದರ ಮೂಲಕ ಅಕ್ಷಮ್ಯ ಅವಮಾನ !

ಪುಣೆ – ಪುಣೆ ವಿಶ್ವವಿದ್ಯಾಲಯದ ‘ಲಲಿತ ಕಲಾ ಮಂಚ’ ಫೆಬ್ರವರಿ 2 ರಂದು ಆಯೋಜಿಸಿದ್ದ ನಾಟಕದಲ್ಲಿ ಪುರುಷ ನಟನು ಸೀತಾಮಾತೆಯ ಪಾತ್ರಧಾರಿ ಅವಾಚ್ಯ ಪದಗಳಿಂದ ನಿಂದಿಸುವ ಮತ್ತು ಸಿಗರೇಟ್ ಸೇದುವುದನ್ನು ತೋರಿಸಿದೆ. ಅಲ್ಲದೆ ಇದರಲ್ಲಿ ಪ್ರಭು ಶ್ರೀರಾಮ ಮತ್ತು ಸೀತಾಮಾತೆಯ ಪಾತ್ರವನ್ನು ವಿದೂಷಕನಾಗಿ ತೋರಿಸಲಾಗಿದೆ. ನಾಟಕ ನಡೆಯುತ್ತಿದ್ದಾಗ ದೇವಾನುದೇವತೆಗಳಿಗೆ ಆದ ಅವಮಾನ ಸಹಿಸಲಾರದೆ ಎಬಿವಿಪಿ ಕಾರ್ಯಕರ್ತರು ಆಕ್ಷೇಪಾರ್ಹ ನಾಟಕವನ್ನು ನಿಲ್ಲಿಸಿದರು. (ದೇವರ ವಿಡಂಬನೆ ನಿಲ್ಲಿಸಿದ ಎಬಿವಿಪಿ ಕಾರ್ಯಕರ್ತರಿಗೆ ಅಭಿನಂದನೆಗಳು ! – ಸಂಪಾದಕರು) ಅಲ್ಲದೆ, ನಾಟಕದಲ್ಲಿ ರಾಮಾಯಣದ ದೃಶ್ಯಗಳನ್ನು ತಪ್ಪಾಗಿ ಬಿಂಬಿಸಲು ಪ್ರಯತ್ನಿಸಿದ್ದಕ್ಕಾಗಿ ಎಬಿವಿಪಿ ಕಾರ್ಯಕರ್ತರು ನಾಟಕದ ನಟರಿಗೆ ಕಪಾಳಮೋಕ್ಷ ಮಾಡಿದರು. ಬಳಿಕ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ‘ಲಲಿತ ಕಲಾ ಕೇಂದ್ರ’ದ ವಿದ್ಯಾರ್ಥಿ ಭವೇಶ್ ರಾಜೇಂದ್ರ ಎಂಬ ವಿದ್ಯಾರ್ಥಿ ಈ ನಾಟಕವನ್ನು ಬರೆದು ನಿರ್ದೇಶಿಸಿದ್ದಾನೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ! – ಎಬಿವಿಪಿ

ಎಬಿವಿಪಿಯ ಶುಭಂಕರ್ ಬಚ್ಚಲ್ ಇವರು, ‘ಹಿಂದೂಗಳ ದೇವರುಗಳ ಬಗ್ಗೆ ಈ ರೀತಿಯ ಭಾಷೆಯನ್ನು ಸಹಿಸುವುದಿಲ್ಲ ಮತ್ತು ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಮ್ಮ ನಿಲುವನ್ನು ಮಂಡಿಸಿದ್ದಾರೆ.

ನಾಟಕದಲ್ಲಿ ಆಕ್ಷೇಪಾರ್ಹ ಪ್ರಸಂಗಗಳು

ಹರ್ಷವರ್ಧನ್ ಹರ್ಪುಡೆ ಎಂಬುವರು ಸಲ್ಲಿಸಿರುವ ದೂರಿನಲ್ಲಿ

1. ನಾಟಕ ಪ್ರದರ್ಶನವಾಗುತ್ತಿದ್ದಾಗ ಸೀತಾಮಾತೆಯ ನಟನೆಯ ಹುಡುಗ ವೇದಿಕೆಯ ಮೇಲೆ ಸಿಗರೇಟು ಸೇದುತ್ತಿದ್ದ.

2. ನಾಟಕದಲ್ಲಿ ಶ್ರೀ ಲಕ್ಷ್ಮಣನ ಪಾತ್ರವು ರಾವಣನ ಮಾಲೀಶ್ ಮಾಡುತ್ತಿರುವುದು ತೋರಿಸಲಾಯಿತು.

3. ರಾವಣನನ್ನು ನೋಡಿದ ಶ್ರೀರಾಮನು ಓಡಿಹೋದನು ಮತ್ತು ಶ್ರೀರಾಮನನ್ನು ಏಕವಚನದಲ್ಲಿ ‘ರಾಮ್ ಭಾಗಾ-ಭಾಗಾ’ ಎಂದು ಕರೆಯಲಾಯಿತು.

ವಿಶ್ವವಿದ್ಯಾಲಯದ ವಿಭಾಗದ ಮುಖ್ಯಸ್ಥರ ಸಹಿತ 6 ವಿದ್ಯಾರ್ಥಿಗಳ ಬಂಧನ !

ಈ ಬಗ್ಗೆ ಎಬಿವಿಪಿ ದೂರು ದಾಖಲಿಸಿದ ಬಳಿಕ ಪೊಲೀಸರು ‘ಲಲಿತ ಕಲಾ ಕೇಂದ್ರ’ ವಿಭಾಗದ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 6 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ವಿಶ್ವವಿದ್ಯಾಲಯವೊಂದರ ವಿಭಾಗದ ಮುಖ್ಯಸ್ಥರನ್ನು ಈ ರೀತಿ ಬಂಧಿಸಿರುವುದು ಇದೇ ಮೊದಲಬಾರಿಯಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ‘ಲಲಿತ ಕಲಾ ಕೇಂದ್ರ’ದ ಮುಖ್ಯಸ್ಥ ಡಾ. ಪ್ರವೀಣ್ ಭೋಲೆ, ಭವೇಶ್ ಪಾಟೀಲ್, ಪ್ರಥಮೇಶ್ ಸಾವಂತ್ ಮತ್ತು ಇತರ ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲಾ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.
ಸಾವಿತ್ರಿಬಾಯಿ ಫುಲೆ ಪುಣೆ ವಿರುದ್ಧ ಕುಲಪತಿಗೆ ಮನವಿ ನೀಡುತ್ತಿರುವ ಪತಿತ್ ಪಾವನ್ ಸಂಘಟನೆಯ ಕಾರ್ಯಕರ್ತರು

ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಪತಿತ್ ಪಾವನ್ ಸಂಘಟನೆಯಿಂದ ಮನವಿಯ ಮೂಲಕ ಆಗ್ರಹ !

ಪುಣೆ – ಈ ಪ್ರಕರಣದಲ್ಲಿ ಪತಿತ್ ಪಾವನ್ ಸಂಘಟನೆಯು ಪುಣೆ ವಿಶ್ವವಿದ್ಯಾಲಯಕ್ಕೆ ಮನವಿ ನೀಡಿದೆ. ಅದರಲ್ಲಿ, ನಾಟಕದ ಘಟನೆಯ ಬಗ್ಗೆ ಸಾಮಾನ್ಯ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಶಾಂತಿಯುತವಾಗಿ ಧ್ವನಿ ಎತ್ತುತ್ತಿದ್ದರೆ, ‘ಲಲಿತಕಲಾ ಕೇಂದ್ರದ ವಿದ್ಯಾರ್ಥಿಗಳು ನಾಟಕವನ್ನು ಆಕ್ಷೇಪಿಸಿದ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ. ಈ ಎಲ್ಲಾ ಘಟನೆ ಖಂಡನೀಯವಾಗಿದೆ. ಆಡಳಿತವು ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಹೇಳಿದೆ.
ಮನವಿಯಲ್ಲಿ, ಸಂಬಂಧಪಟ್ಟ ಲಲಿತಕಲಾ ಕೇಂದ್ರದ ವಿಭಾಗದ ಮುಖ್ಯಸ್ಥ ಪ್ರವೀಣ್ ಭೋಳೆ, ಸಹಾಯಕ ಕುಲಪತಿ ಅವರಿಗೆ ಈ ಎಲ್ಲದರ ಬಗ್ಗೆ ಕಲ್ಪನೆ ಇತ್ತು. ಈ ವಿಚಾರದಲ್ಲಿ ನೀವು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯು ನಿಮ್ಮ ವಿರುದ್ಧ ತೀವ್ರವಾಗಿ ಪ್ರತಿಭಟಿಸಲಿದೆ ಎಂಬುದನ್ನು ಗಮನಿಸಬೇಕು ಎಂದು ಮನವಿಯ ಮೂಲಕ ತಿಳಿಸಿದ್ದಾರೆ.

ಲಲಿತ ಕಲಾ ಕೇಂದ್ರದಲ್ಲಿ ಮಸಿ ಎರೆಚುವುದು ಮತ್ತು ವಿಧ್ವಂಸಕ ಕೃತ್ಯಗಳು

ಈ ಸಂದರ್ಭದಲ್ಲಿ ‘ಲಲಿತ ಕಲಾ ಕೇಂದ್ರ’ದ ಮುಖ್ಯಸ್ಥ ಡಾ. ಪ್ರವೀಣ್ ಭೋಳೆ ಸೇರಿದಂತೆ 6 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಸರಕಾರದ ಪೊಲೀಸ್ ಕಸ್ಟಡಿಗೆಯ ಬೇಡಿಕೆಯನ್ನು ತಿರಸ್ಕರಿಸಿತು ಮತ್ತು ಡಾ. ಪ್ರವೀಣ್ ಭೋಳೆ ಸೇರಿದಂತೆ 5 ಆರೋಪಿ ವಿದ್ಯಾರ್ಥಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾಗಾಗಿ ಆರೋಪಿಗಳಿಗೆ ಜಾಮೀನು ಅರ್ಜಿ ಸಲ್ಲಿಸುವ ಪ್ರಕ್ರಿಯೆ ತಕ್ಷಣವೇ ನಡೆಯುತ್ತಿದೆ.

ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳನ್ನು ಬೆಂಬಲಿಸಲು ಲಲಿತಕಲಾ ಕೇಂದ್ರದ ಆವರಣದಲ್ಲಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಿಂದಾಗಿ, ಎಬಿವಿಪಿ ಕಾರ್ಯಕರ್ತರು ಆಕ್ರಮಣಕಾರಿಯಾಗಿ ಲಲಿತಕಲಾ ಕೇಂದ್ರವನ್ನು ಧ್ವಂಸಗೊಳಿಸಿದರು. ಈ ಕಾರ್ಯಕರ್ತರು ಮುಚ್ಚಿದ ಬಾಗಿಲು ಮತ್ತು ಬೋರ್ಡ್ ಮೇಲೆ ಮಸಿ ಎಸೆದು ಲಲಿತಕಲಾ ಕೇಂದ್ರದ ಗಾಜು ಒಡೆದರು. ಇದೆಲ್ಲದರ ನಂತರ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸಂಪಾದಕೀಯ ನಿಲುವು

ವಿದ್ಯೆಯ ತವರೂರು ಎಂದೇ ಕರೆಯಲ್ಪಡುವ ಪುಣೆಯಲ್ಲಿ ಕಲೆಯ ಹೆಸರಿನಲ್ಲಿ ಹಿಂದೂಗಳ ದೇವತೆಗಳನ್ನು ಅವಮಾನಿಸುವುದು ನಾಚಿಕೆಗೇಡಿನ ಸಂಗತಿ. ಈ ನಾಟಕದ ಆಯೋಜಕರ ವಿರುದ್ಧ ಮತ್ತು ದೇವರನ್ನು ವಿಡಂಬನೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಆಗ ಮಾತ್ರ ಇಂತಹ ಪದೇ ಪದೇ ನಡೆಯುವ ಘಟನೆಗಳನ್ನು ನಿಲ್ಲಿಸಬಹುದು !