ಬಾಂಗ್ಲಾದೇಶದಲ್ಲಿರುವ ಹಿಂದೂಗಳಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ನಂತರ ಪ್ರಚಂಡ ಭಯದ ವಾತಾವರಣ !

ಶೇಖ ಹಸೀನಾ ಸರಕಾರ ನಿಷ್ಕ್ರಿಯವಾಗಿದೆಯೆಂದು ಹಿಂದೂಗಳ ಆರೋಪ

ಢಾಕಾ (ಬಾಂಗ್ಲಾದೇಶ) – ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ಭಗವಾನ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಆದಾಗಿನಿಂದ ದೇಶ-ವಿದೇಶಗಳಿಂದ ಬೃಹತ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕಾಗಿ ಬರುತ್ತಿದ್ದಾರೆ. ಹೀಗಿದ್ದರೂ ಭಾರತದ ಪಕ್ಕದಲ್ಲಿರುವ ಬಾಂಗ್ಲಾದೇಶದಿಂದ ಅಯೋಧ್ಯೆಗೆ ಬರಲು ಯಾರೂ ಧೈರ್ಯವನ್ನು ತೋರಿಸಿಲ್ಲ ಎನ್ನುವುದು ಕಂಡು ಬಂದಿದೆ. ಬಾಂಗ್ಲಾದೇಶದ ಕೆಲವು ದಿನಗಳ ಹಿಂದೆ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆ ಸಮಯದಲ್ಲಿ ಹಿಂದೂಗಳ ಮೇಲೆ ಆಕ್ರಮಣವಾಗಿತ್ತು. `ಒಂದು ವೇಳೆ ಅಯೋಧ್ಯೆಗೆ ಹೋಗಿ ಶ್ರೀ ರಾಮಲಲ್ಲಾನ ದರ್ಶನವನ್ನು ಪಡೆದರೆ, ನಮ್ಮ ಮೇಲೆ ಹಲ್ಲೆ ನಡೆಯಬಹುದು’ ಎಂದು ಅಲ್ಲಿಯ ಹಿಂದೂಗಳಿಗೆ ಭಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಢಾಕೇಶ್ವರಿ ಹಾಗೂ ರಮಣ ಕಾಳಿ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ರೂಹಿದಾಸ ಪಾಲ್ ಮಾತನಾಡಿ, ಜನವರಿ 22ರ ನಂತರ ಇಲ್ಲಿನ ವಾತಾವರಣ ಸರಿಯಾಗಿಲ್ಲ. ನನಗೆ ನನ್ನ ಹೆಂಡತಿ ಮತ್ತು ಮಗಳ ಭದ್ರತೆಯ ಬಗ್ಗೆ ಚಿಂತೆಯಾಗಿದೆ. ನನಗೆ ನನ್ನ ಸಂಬಂಧಿಕರನ್ನು ಭೇಟಿಯಾಗಲು ಕೋಲಕತ್ತಾಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದು, ಅವರು ಯಾವಾಗಲೂ ಅಸುರಕ್ಷಿತರಾಗಿದ್ದಾರೆ – ರಾಮೆನ್ ಮಂಡಲ್, ಅಧ್ಯಕ್ಷರು, ಢಾಕೇಶ್ವರಿ ದೇವಸ್ಥಾನ

‘ನಾವು ಅಧಿಕಾರಕ್ಕೆ ಬಂದರೆ, ಮಂದಿರಗಳನ್ನು ಕೆಡವುತ್ತೇವೆ ಮತ್ತು ಮಸೀದಿಗಳನ್ನು ಕಟ್ಟುತ್ತೇವೆ’ ಎಂದು ಅನೇಕ ಮತಾಂಧರು ಬೆದರಿಕೆ ಹಾಕುತ್ತಿದ್ದಾರೆ; ಆದರೆ ಸರಕಾರ ಮಾತ್ರ ಸುಮ್ಮನಿದೆ. – ಮೇಘ ಮಲ್ಹಾರ ಬಸು, ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತೆ

ಪ್ರಾಣಪ್ರತಿಷ್ಠಾಪನೆಯ ದಿನದಂದು ಮೌಲ್ವಿಗಳು ಮೆರವಣಿಗೆಯನ್ನು ತೆಗೆಯಲು ಬಿಡಲಿಲ್ಲ !

ರಮಣ ಕಾಳಿ ಮಂದಿರದ ಅಧ್ಯಕ್ಷ ಉತ್ಪಲ್ ಸಹಾ ಮಾತನಾಡಿ, ಜನವರಿ 22ರಂದು ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭವಾದಾಗ ಮೌಲವಿಯವರು ‘ಇಲ್ಲಿ ಮೆರವಣಿಗೆಯನ್ನು ತೆಗೆಯಬಾರದು’ ಎಂದು ಬೆದರಿಕೆ ಹಾಕಿದ್ದರು. `ನಿಮ್ಮ ಮಂದಿರ ಅಥವಾ ಮನೆಗಳನ್ನು ಸುಡಲಾಗುವುದು’, ಎನ್ನುವ ಭಯ ಇಲ್ಲಿನ ಹಿಂದೂಗಳಿಗೆ ಅನಿಸುತ್ತಿತ್ತು. ‘ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ ಪಾರ್ಟಿ’ ಬಾಂಗ್ಲಾದೇಶದ ಹಿಂದೂಗಳ ಮೇಲೆ ಅತ್ಯಧಿಕ ಸಮಾಧಾನಗೊಂಡಿದೆ. ಹಿಂದೂಗಳ ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ಅವರಿಗೆ ಸಾಮಾನ್ಯವಾಗಿದೆ. ಇಷ್ಟು ದೊಡ್ಡ ಮಂದಿರವನ್ನು ಭಾರತದಲ್ಲಿ ಕಟ್ಟಿದರು; ಆದರೆ ಬಾಂಗ್ಲಾದೇಶ ಹಿಂದೂಗಳಾಗಿರುವುದರಿಂದ ಮತ್ತು ಅಲ್ಲಿಯ ಮಂದಿರಗಳ ಅಧ್ಯಕ್ಷನಾಗಿರುವುದರಿಂದ ನನ್ನ ಮನಸ್ಸಿನಲ್ಲಿ ಭಯವಿದೆ. 1993 ರಲ್ಲಿ ಬಾಬ್ರಿ ಧ್ವಂಸದ ಬಳಿಕ ಹಿಂದೂಗಳ ಮೇಲೆ ಆಗಿರುವ ದಾಳಿ ಮತ್ತು ಹಿಂಸೆ ಇಲ್ಲಿ ವಾಸಿಸುತ್ತಿರುವ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಈಗಿನ ಅವಾಮಿ ಲೀಗ್ ಸರಕಾರವಿರುವ ಆಡಳಿತದಲ್ಲಿ ಈ ಪರಿಸ್ಥಿತಿಯಿದೆ, ವಿರೋಧ ಪಕ್ಷದವರು ಅಧಿಕಾರಕ್ಕೆ ಬಂದರೆ ಏನಾಗಬಹುದು ?

ಸಂಪಾದಕೀಯ ನಿಲುವು

ಬಾಂಗ್ಲಾದೇಶವು ತನ್ನನ್ನು ಇಸ್ಲಾಮಿಕ್ ದೇಶವೆಂದು ಘೋಷಿಸಿಕೊಂಡಿರದಿದ್ದರೂ, ಅಲ್ಲಿಯ ಬಹುಸಂಖ್ಯಾತ ಮುಸ್ಲಿಮರು ಹಿಂದೂಗಳ ವಂಶಸಂಹಾರ ಮಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ಯಾವ ರೀತಿ ಪಾಕಿಸ್ತಾನಕ್ಕೆ ಎಂದಿಗೂ ಭಾರತ ಸರಕಾರ ಪ್ರಶ್ನಿಸಿಲ್ಲವೋ, ಹಾಗೆಯೇ ಬಾಂಗ್ಲಾ ದೇಶವನ್ನೂ ಯಾವತ್ತೂ ಪ್ರಶ್ನಿಸಿಲ್ಲ. ಅಲ್ಲಿಯ ಹಿಂದೂಗಳಿಗಾಗಿ ಸರಕಾರ ಎಂದಾದರೂ ಧ್ವನಿ ಎತ್ತುತ್ತಿದ್ದಾರೆಯೇ ?

ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ ಹಸೀನಾ ಅವರು ಭಾರತದೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ, ಅಲ್ಲಿನ ಹಿಂದೂಗಳ ರಕ್ಷಣೆಯನ್ನು ಅವರು ಮಾಡುತ್ತಿರುವುದು ಕಂಡು ಬಂದಿಲ್ಲ. ಇಂತಹ ಸಂಬಂಧದಿಂದ ಹಿಂದೂಗಳಿಗೆ ಯಾವುದೇ ಲಾಭವಿಲ್ಲ, ಎನ್ನುವುದನ್ನು ಗಮನದಲ್ಲಿಡಬೇಕು !