‘ಇಂದು ನಾಯಿಗಳ (ಹಿಂದೂ) ಸಮಯ, ನಾಳೆ ನಮ್ಮದು ಬರುತ್ತದೆ!’ (ಅಂತೆ) – ಮುಫ್ತಿ ಸಲ್ಮಾನ

ಹಿಂದೂಗಳು ಜ್ಞಾನವಾಪಿಯಲ್ಲಿ ಪೂಜೆಯನ್ನು ಪ್ರಾರಂಭಿಸಿದ್ದರಿಂದ ಜುನಾಗಡ (ಗುಜರಾತ)ನ ಮುಫ್ತಿ ಸಲ್ಮಾನ ವಿಷಕಾರಿ ಹೇಳಿಕೆ !

ಜುನಾಗಡ (ಗುಜರಾತ) – ವಾರಣಾಸಿಯ ಜ್ಞಾನವಾಪಿಯಲ್ಲಿ ಹಿಂದೂಗಳಿಂದ ಪೂಜೆ ಆರಂಭವಾದ ನಂತರ ಮತಾಂಧ ಮುಸ್ಲಿಂ ನಾಯಕರ ಪಿತ್ತ ನೆತ್ತಿಗೇರಿದೆ. ಇಲ್ಲಿನ ಮುಫ್ತಿ ಸಲ್ಮಾನ ಅಝಹರಿಯು ಕಾರ್ಯಕ್ರಮವೊಂದರಲ್ಲಿ ಹಿಂದೂಗಳ ವಿರುದ್ಧ ವಿಷಕಾರಿದ್ದಾನೆ. ವ್ಯಾಪಕವಾಗಿ ಪ್ರಸಾರವಾಗಿರುವ ವೀಡಿಯೊದಲ್ಲಿ, ಅಝಹರಿಯು ‘ಕೆಲವು ಕಾಲದ ವರೆಗೆ ಶಾಂತತೆ ಇದೆ, ನಂತರ ತೀವ್ರ ವಾಗಲಿದೆ. ಇಂದು ನಾಯಿಗಳ(ಹಿಂದೂಗಳ) ಸಮಯವಿದೆ, ನಾಳೆ ನಮ್ಮ ಸಮಯ ಬರುವುದು’, ಎನ್ನುವಂತಹ 22 ಸೆಕೆಂಡಿನ ಈ ವಿಡಿಯೋ ಎಲ್ಲೆಡೆ ಪ್ರಸಾರವಾಗುತ್ತಿದ್ದು, ಅವನ ಮೂಲ ಭಾಷಣ 53 ನಿಮಿಷಗಳದ್ದಾಗಿದೆ. ಜನವರಿ 31ರಂದು ಮುಫ್ತಿಯು ಕಾರ್ಯಕಮದಲ್ಲಿ ಈ ಹೇಳಿಕೆಯನ್ನು ನೀಡಿದನು.

ಮುಫ್ತಿ ಅಝಹರಿ ತನ್ನ ಮಾತನ್ನು ಮುಂದುವರಿಸಿ,

1. ಮಸೀದಿಯಲ್ಲಿ ಮೂರ್ತಿಗಳನ್ನು ಇಡುವುದರಿಂದ ಮಸೀದಿ ಮೂರ್ತಿಗೃಹವಾಗುವುದಿಲ್ಲ. ನೀವು ಕಾಬಾದಲ್ಲಿ 360 ಮೂರ್ತಿಗಳನ್ನು ಇಟ್ಟರೂ, ಕಾಬಾ ಕಾಬಾ ಆಗಿಯೇ ಉಳಿಯಿತು. ಹಜ್ ಎಂದಿಗೂ ನಿಲ್ಲಲಿಲ್ಲ. (ಈ ಹೇಳಿಕೆಯಿಂದ ಕಾಬಾದಲ್ಲಿ ಹಿಂದೂಗಳ ದೇವತೆಗಳ 360 ಮೂರ್ತಿಗಳಿವೆಯೆಂದು ಮುಫ್ತಿಯವರು ಒಪ್ಪಿಕೊಂಡಿದ್ದಾರೆಂದು ತಿಳಿಯಬೇಕೆ ? ಇದರ ಬಗ್ಗೆ ಓವೈಸಿಯವರಂತಹ ಮುಸಲ್ಮಾನ ನಾಯಕರು ಏನು ಹೇಳುತ್ತಾರೆ ?- ಸಂಪಾದಕರು)

2. ಪ್ಯಾಲೆಸ್ಟೈನ, ಇರಾನ, ಬರ್ಮಾ (ಮ್ಯಾನಮಾರ) ಇಲ್ಲಿ ಎಲ್ಲೆಡೆ ಮುಸ್ಲಿಮರ ಹತ್ಯೆಯಾಗುತ್ತಿದೆ; ಆದರೆ ಅವರ ಮರಣದಿಂದ ಇಸ್ಲಾಂ ಮುಗಿಯುವುದಿಲ್ಲ.

3. ಮುಸ್ಲಿಮರಿಗೆ ತಮ್ಮನ್ನು ತಾವು ಜಾಗೃತಗೊಳಿಸಿಕೊಳ್ಳಬೇಕಾಗಲಿದೆ. ಅದಕ್ಕಾಗಿ ಯಾವುದೇ ನಾಯಕ ಅಥವಾ ವಿರೋಧಿ ಪಕ್ಷ ಬರುವುದಿಲ್ಲ. ಕ್ರಾಂತಿ ಮುಸಲ್ಮಾನರ ಮನೆಯಿಂದಲೇ ಆಗುವುದು.

4. ಮಸೀದಿಯನ್ನು ಮೂರ್ತಿಗೃಹವನ್ನಾಗಿ ರೂಪಾಂತರಗೊಳಿಸುವ ಧೈರ್ಯ ಅವರಲ್ಲಿ(ಹಿಂದೂಗಳಲ್ಲಿ) ಇಲ್ಲ. ನೀವು ಮಸೀದಿಯನ್ನು ಪಾಳು ಬಿಟ್ಟಿದ್ದೀರಿ. ಯಾವಾಗ ಮೈದಾನ ತೆರೆಯುತ್ತದೆಯೋ, ಆಗ ನಾಯಿಗಳು ಆಡಳಿತ ನಡೆಸುತ್ತವೆ. ನೀವು ಹೊಲದಲ್ಲಿ ತಿರುಗಾಡುತ್ತಿದ್ದರೆ, ನಾಯಿಗಳು ಉಳಿಯುವುದಿಲ್ಲ.

5. ಮುಸ್ಲಿಮರೇ, ಭಯಪಡಬೇಡಿ, ದೇವರ ಮಹಿಮೆ ಇನ್ನೂ ಬಾಕಿ ಇದೆ. ಇಸ್ಲಾಂ ಇನ್ನೂ ಜೀವಂತವಾಗಿದೆ, ಕುರಾನ್ ಇನ್ನೂ ಉಳಿದಿದೆ.

ಜುನಾಗಢ ಪೊಲೀಸರಿಂದ ಹಸ್ತಕ್ಷೆಪ !

ಈ ಪ್ರಕರಣವನ್ನು ಪೊಲೀಸರು ಹಸ್ತಕ್ಷೇಪ ಮಾಡಿದ್ದೂ, ಜುನಾಗಡ ಪೊಲೀಸ ಆಯುಕ್ತರಾಗಿರುವ ಹಿತೇಶ ಧಂಡಾಲಿಯಾ ಮಾತನಾಡಿ ನಾವು ಸಂಪೂರ್ಣ ಭಾಷಣವನ್ನು ಪಡೆದುಕೊಂಡಿದ್ದೇವೆ ಮತ್ತು ಕಾನೂನಿನಂತೆ ತಜ್ಞರ ಅಭಿಪ್ರಾಯಕ್ಕಾಗಿ ಕಳುಹಿಸಿದ್ದೇವೆ. ಆಕ್ರಮಣಕಾರಿ ನಡೆಯನ್ನು ತೋರಿಸುವವರ ಮೇಲೆ ಕ್ರಮವನ್ನು ಜರುಗಿಸಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮುಪ್ತಿಗೆ ತಕ್ಕ ಪಾಠವನ್ನು ಕಲಿಸಬೇಕು. ಅವನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಮತಾಂಧ ಮುಸಲ್ಮಾನ ನಾಯಕರ ಮೇಲೆ ಕಡಿವಾಣ ಹಾಕಬಹುದು !

ವಿದೇಶಿ ಪ್ರಸಾರ ಮಾಧ್ಯಮಗಳ ಪ್ರಕಾರ, ‘ಭಾರತದಲ್ಲಿರುವ ಮುಸ್ಲಿಮರು ಭಯಭೀತ ಜೀವನ ನಡೆಸುತ್ತಾರೆ ಮತ್ತು ಅಸಹಿಷ್ಣು ಹಿಂದೂಗಳು ಅವರ ಮೇಲೆ ದೌರ್ಜನ್ಯ ಮಾಡುತ್ತಿರುತ್ತಾರೆ’, ಎನ್ನುವುದು ಸತ್ಯವಾಗಿದ್ದರೆ, ಇಂತಹ ರೀತಿಯ ಹೇಳಿಕೆಗಳನ್ನು ನೀಡುವ ಧೈರ್ಯ ಮುಫ್ತಿಗೆ ಆಗುತ್ತಿತ್ತೇ ?