ಮಧ್ಯಪ್ರದೇಶದ ಬಾಮೋರಿ ನಗರದ ಪೀಪಲೇಶ್ವರ ಮಹಾದೇವ ದೇವಸ್ಥಾನದಲ್ಲಿ ಹಾನಿ !

ಧ್ವಂಸಗೊಳಿಸಿದ ಪೀಪಲೇಶ್ವರ ಮಹಾದೇವ ದೇವಸ್ಥಾನ

ಭೋಪಾಲ್ – ಮಧ್ಯಪ್ರದೇಶದ ಗುನಾ ಜಿಲ್ಲೆಯ ಬಾಮೋರಿ ಪಟ್ಟಣದಲ್ಲಿರುವ ಪೀಪಲೇಶ್ವರ ಮಹಾದೇವ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಅಪರಿಚಿತ ವ್ಯಕ್ತಿಗಳು ದೇವಾಲಯದ ಬಾಗಿಲು ಮುರಿದು ಒಳ ನುಗ್ಗಿ ಶಿವಲಿಂಗವನ್ನು ಕಿತ್ತು ರಸ್ತೆಗೆ ಎಸೆದು ನಂದಿಯನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದ ನಗರದಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯಿಂದ ಹಿಂದೂಗಳು ಆಕ್ರೋಶಗೊಂಡಿದ್ದು, ‘ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಮನೆಗಳನ್ನು ಕೆಡವಬೇಕು’ ಎಂದು ಆಗ್ರಹಿಸಿದ್ದಾರೆ. ಮತಾಂಧರು ವಿಧ್ವಂಸಕ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನ ಧ್ವಂಸ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ 2013ರಲ್ಲಿ ಈ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು. ಇದರ ನಂತರ, ಗ್ರಾಮಸ್ಥರು ಮತ್ತೆ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದರು.

ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬಾಮೋರಿಯ ಸೌರಭ್ ಕಿರಾರ್ ಇವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಜಾನೆ 5 ಗಂಟೆಗೆ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಶಿವಲಿಂಗ ಮತ್ತು ನಂದಿ ವಿಗ್ರಹವನ್ನು ಧ್ವಂಸಗೊಳಿಸಿರುವುದನ್ನು ನೋಡಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಕಿರಾರ್ ಶಾರುಖ್, ರಿಹಾನ್, ವಫಾತಿ, ಅನ್ವರ್, ಜೀಶನ್, ಬಿಟ್ಟು, ರಹೀಶ್ ಅವರನ್ನು ವಿಧ್ವಂಸಕ ಕೃತ್ಯವೆಂದು ಶಂಕಿಸಿದ್ದಾರೆ. ಈ ಜನರು ರಾತ್ರಿ 1 ಗಂಟೆಯವರೆಗೂ ಗ್ರಾಮದ ಸುತ್ತ ತಿರುಗುತ್ತಾರೆ.

ಮತಾಂಧರ ವಿರುದ್ಧ ಪ್ರಕರಣ ದಾಖಲು

ಪೊಲೀಸರು 7 ಮತಾಂಧರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, 4 ಜನರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಇಂದಿಗೂ ಘಜ್ನಿ ವಂಶಸ್ಥರು ಹಿಂದುದ್ವೇಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ, ಇದೇ ನಿಜ. ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆ ಅಗತ್ಯ!