ಮಹಿಳಾ ನ್ಯಾಯಾಧೀಶರಿಗೆ ಪಿ.ಎಫ್.ಐ.ನ ಜಿಹಾದಿಗಳಿಂದ ಬೆದರಿಕೆ !

ಹಿಂದುತ್ವನಿಷ್ಠನ ಕೊಲೆ ಪ್ರಕರಣದಲ್ಲಿ ಪಿ.ಎಫ್.ಐ.ನ ಜಿಹಾದಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಪ್ರಕರಣ

ತಿರುವನಂತಪುರಂ – ಕೇರಳದ ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸ್ ಅವರನ್ನು ಡಿಸೆಂಬರ್ 19, 2021 ರಂದು ಅಲಾಪ್ಪುಳದಲ್ಲಿರುವ ಅವರ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಕೊಲೆ ಪ್ರಕರಣದಲ್ಲಿ 15 ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಅವರು ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.ನ) ಸದಸ್ಯರಾಗಿದ್ದರು. ಈ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ನ್ಯಾಯಾಧೀಶ ವಿ.ಜಿ. ಶ್ರೀದೇವಿ ಇವರು ಜಿಹಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಲ್ಲದೇ 2 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

1. ಪಿ.ಎಫ್.ಐ.ಗೆ ಸಂಬಂಧಿಸಿದ ಮತಾಂಧರು ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಾಧೀಶ ಶ್ರೀದೇವಿ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನ್ಯಾಯಾಧೀಶ ಶ್ರೀದೇವಿ ಕೇರಳದ ಅಲಪ್ಪುಳದ ಮಾವೆಲಿಕ್ಕರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾರೆ.

2. ನ್ಯಾಯಾಧೀಶ ಶ್ರೀದೇವಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕೇರಳ ಪೊಲೀಸರು ಕನಿಷ್ಠ 6 ಪ್ರಕರಣಗಳನ್ನು ದಾಖಲಿಸಿದ್ದಾರೆ. ಬಿ.ವಿ. ಕೆಯು, ಅಸ್ಲಂ ವಳಪ್ಪುಚ, ನಜೀರ್ ಮೋನ್ ಖಲೀಲ್, ಆಜಾದ್ ಅಮೀರ್, ರಫಿ ತಿರುವನಂತಪುರಂ ಮತ್ತು ಶಫೀಕ್ ಎಂದು ಗುರುತಿಸಲಾಗಿದೆ.

(ಸೌಜನ್ಯ – India Today)

ಸಂಪಾದಕೀಯ ನಿಲುವು

ಪಿ.ಎಫ್.ಐ.ಅನ್ನು ನಿಷೇಧಿಸಲಾಗಿದ್ದರೂ ಅದರ ಬೆಂಬಲಿಗರು ಮತ್ತು ಜಿಹಾದಿ ಕತ್ಯಗಳನ್ನು ಮಾಡುವವರು ಇನ್ನೂ ಸಕ್ರಿಯರಾಗಿದ್ದಾರೆ, ಇದೇ ಈ ಘಟನೆ ತೋರಿಸುತ್ತದೆ. ಈ ಸಂಘಟನೆಯನ್ನು ಬೇರು ಸಮೇತ ಕಿತ್ತೆಸೆಯಲು ಕೇಂದ್ರ ಸರಕಾರ ಮುಂದಾಗಬೇಕು !

ಕೇರಳದಲ್ಲಿ ಮತಾಂಧರ ಓಲೈಕೆ ಮಾಡುವ ಕಮ್ಯುನಿಷ್ಟ ಸರಕಾರ ಅಧಿಕಾರದಲ್ಲಿರುವುದರಿಂದ ಮತಾಂಧರು ನ್ಯಾಯಾಧೀಶರಿಗೆ ಬೆದರಿಕೆ ಹಾಕುವ ಧೈರ್ಯ ಮಾಡುತ್ತಾರೆ !