ತೆಂಗಿನಗುಂಡಿ ಗ್ರಾಮದ ಪಂಚಾಯತಿಯಿಂದ ಸ್ವಾತಂತ್ರವೀರ ಸಾವರ್ಕರ ಹೆಸರಿನ ಫಲಕ ಮತ್ತು ಕೇಸರಿ ಧ್ವಜವನ್ನು ತೆರವು !

ಗ್ರಾಮಸ್ಥರಿಂದ ಆಂದೋಲನ

ಕಾರವಾರ – ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದ ಕಡಲತೀರದಲ್ಲಿರುವ ‘ಸಾವರ್ಕರ ವೃತ್ತ’ ಹೆಸರಿನ ಫಲಕ ಹಾಗೂ ಭಗವಾ ಧ್ವಜವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತೆರವು ಮಾಡಿದರು. ಈ ವಿಷಯದಲ್ಲಿ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಭಾಜಪ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಗೋವಿಂದ ನಾಯಕ, ಸುಬ್ರಾಯ ದೇವಾಡಿಗ ನೇತೃತ್ವದಲ್ಲಿ ಗ್ರಾಮಸ್ಥರು ಆಂದೋಲನ ಪ್ರಾರಂಭಿಸಿದ್ದಾರೆ. ನಾಮಫಲಕ ಹಚ್ಚಲು ಸರಕಾರದಿಂದ ಅನುಮತಿಯಿತ್ತು. ಗ್ರಾಮ ಪಂಚಾಯಿತಿಯವರು ಏಕಾಏಕಿ ಜೆಸಿಬಿ ಮೂಲಕ ಎರಡನ್ನೂ ತೆಗೆದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈ ಬಗ್ಗೆ ವಿಚಾರಿಸುವಾಗ ಗೋವಿಂದನಾಯಕ ಮಾತನಾಡಿ, ‘ ಯಾರಪ್ಪನ ಆಸ್ತಿ ಎಂದು ಆ ಧ್ವಜ ಮತ್ತು ಫಲಕ ತೆಗೆದಿದ್ದಾರೆ? ಇದು ಪಾಕಿಸ್ತಾನವೆಂದು ತೆಗೆಯಲಾಗಿದೆಯೇ? ಹಿಂದೂಗಳು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಿಮ್ಮ ಮೇಲೆ ಯಾರ ಒತ್ತಡವಿದೆಯೇ? ಇದು ಭಟ್ಕಳ ಆಗಿದೆ. ಯಾರದಾದರೂ ಕೈಗೊಂಬೆಯಾಗಿರಬೇಡಿರಿ’, ಎನ್ನುವ ಶಬ್ದಗಳಲ್ಲಿ ಅವರನ್ನು ಬೆದರಿಸಿದರು.