ಅಯೋಧ್ಯೆಯಲ್ಲಿ ಮುಸ್ಲೀಂ ಭಕ್ತರಿಂದ ಶ್ರೀರಾಮಲಲ್ಲಾನ ದರ್ಶನ !

ಅಯೋಧ್ಯೆ – ಸುಧೀರ್ಘ ಕಾಯುವಿಕೆಯ ನಂತರ ಇಲ್ಲಿ ಭವ್ಯ ಮತ್ತು ದಿವ್ಯ ಶ್ರೀರಾಮಮಂದಿರ ನಿರ್ಮಿಸಲಾಗಿದ್ದು ಶ್ರೀರಾಮಲಲ್ಲಾ ಗರ್ಭಗುಡಿಯಲ್ಲಿ ವಿರಾಜಮಾನರಾಗಿದ್ದಾರೆ. ಶ್ರೀರಾಮಲಲ್ಲಾನ ದರ್ಶನ ಪಡೆಯಲು ಅಲ್ಲಿಗೆ ಮುಸ್ಲಿಂ ಭಕ್ತರು ಆಗಮಿಸಿದ್ದಾರೆ. ಲಕ್ಷಣಪುರಿಯಿಂದ ಮುಸ್ಲಿಂ ಭಕ್ತರ ಒಂದು ಸಮೂಹವು ಅಯೋಧ್ಯೆಗೆ ತಲುಪಿ ಶ್ರೀರಾಮಲಲ್ಲಾನ ದರ್ಶನ ಪಡೆದರು. ಲಖನೌ ಈ ಪಟ್ಟಣವನ್ನು ‘ಲಕ್ಷಣಪುರಿ‘ ಈ ಹೆಸರಿನಿಂದ ಗುರುತಿಸಬೇಕು ಮತ್ತು ದೇವಸ್ಥಾನದಲ್ಲಿ ಲಕ್ಷಣನ ವಿಗ್ರಹವನ್ನು ಪ್ರತಿಷ್ಟಾಪಿಸಬೇಕು, ಎಂದು ಈ ಭಕ್ತರು ದೇವರಲ್ಲಿ ಆರ್ಶಿವಾದವನ್ನು ಕೋರಿದ್ದಾರೆ.

೧. ನೂರಾರು ಮುಸ್ಲಿಂ ಭಕ್ತರು ಜನವರಿ ೨೫ ರಂದು ಲಕ್ಷಣಪುರಿಯಿಂದ ಹೊರಟು ಜನವರಿ ೩೦ ರಂದು ಶ್ರೀರಾಮಲಲ್ಲಾನ ಆರ್ಶೀವಾದ ಪಡೆಯಲು ಅಯೋಧ್ಯೆಗೆ ತಲುಪಿದರು. ಮುಸಲ್ಮಾನ ಭಕ್ತರು ದಿನಕ್ಕೆ ೨೫ ಕಿ.ಮಿ. ಪ್ರಯಾಣಿಸುತ್ತಿದ್ದರು.

೨. ಮುಸ್ಲಿಂ ಸಮುದಾಯದ ಈ ಜನರು ಭಗವಾನ ಶ್ರೀರಾಮನನ್ನು ತಮ್ಮ ಪೂರ್ವಜರೆಂದು ನಂಬುತ್ತಾರೆ. ಅವರು, ಪ್ರಭು ಶ್ರೀರಾಮನ ಸಂಪೂರ್ಣ ಜೀವನ ನ್ಯಾಯ ಮತ್ತು ತಪಸ್ಸಿನ ಆಧಾರದ ಮೇಲೆ ನಿಂತಿದೆ. ಶ್ರೀರಾಮ ಹಿಂದೂ ಮತ್ತು ಮುಸ್ಲಿಂ ಎಲ್ಲರಿಗಾಗಿ ಇದ್ದಾರೆ. ಶ್ರೀರಾಮ ಮೊದಲೂ ಇದ್ದರು ಮತ್ತು ಇಂದಿಗೂ ಇದ್ದಾರೆ ಎಂದು ಹೇಳಿದ್ದಾರೆ.