ಸುತಾರದರಾ (ಪುಣೆ) ಇಲ್ಲಿ ಕ್ರೈಸ್ತರ ಮತಾಂತರದ ಯೋಜನೆ ಹಿಂದುತ್ವನಿಷ್ಠರಿಂದ ವಿಫಲ !

ಪುಣೆ, ಜನವರಿ ೩೦ (ಸುದ್ದಿ) – ಇಲ್ಲಿನ ಸುತಾರದರಾ ಪ್ರದೇಶದಲ್ಲಿ ಜನವರಿ ೨೬ ರಂದು ೧೬-೧೭ ಕ್ರೈಸ್ತ ಮಿಷನರಿಗಳ ಗುಂಪು ‘ಯೇಸು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ, ಹಿಂದೂಗಳ ದೇವರನ್ನು ನೀರಿನಲ್ಲಿ ಎಸೆದರೆ ಮುಳುಗಿ ಹೋಗುವುದು, ದೇವರು ಸ್ವತಃ ಮುಳುಗುವುದರಿಂದ ಭಕ್ತರನ್ನು ಹೇಗೆ ರಕ್ಷಿಸುವನು?‘, ಹೀಗೆ ಹೇಳುತ್ತಾ ಸುತ್ತಮುತ್ತಲಿನ ಬಡ ಹಿಂದೂ ಕುಟುಂಬಗಳ ಮತಾಂತರಕ್ಕೆ ಪ್ರಯತ್ನಿಸಿದರು. (ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ಸರಕಾರವು ಮತಾಂತರ ನಿಷೇಧ ಕಾನೂನನ್ನು ಯಾವಾಗ ಜಾರಿಗೆ ತರುವುದು ? – ಸಂಪಾದಕರು) ಈ ವಿಷಯದ ಮಾಹಿತಿ ತಿಳಿಯುತ್ತಲೇ ಸ್ಥಳೀಯ ಹಿಂದುತ್ವನಿಷ್ಠರು ಮತಾಂತರದ ಸಂಚನ್ನು ವಿಫಲಗೊಳಿಸಿದರು ಮತ್ತು ೩ ಕುಟುಂಬಗಳನ್ನು ಮತಾಂತರದಿಂದ ರಕ್ಷಿಸಿದರು. ‘ಸ್ವಾರದ ಫೌಂಡೇಶನ್‘ ಸಂಸ್ಥಾಪಕಿ ಸ್ವಾತಿತಾಯಿ ಮೋಹೋಳ, ರವೀಂದ್ರ ಪಡವಳ, ರುತುಜಾ ಮಾನೆ, ಮಹೇಶ ಖೋಪಕರ, ಕಿಸನ ಕಾಳೋಖೆ, ರವೀಂದ್ರ ಶೆಳಕೆ, ‘ಓಂ ಸಾಯಿ ಮಿತ್ರ ಮಂಡಳಿ‘ಯ ಯುವಕರು ಮತ್ತು ದತ್ತನಗರ ಪ್ರದೇಶದ ಸ್ಥಳೀಯ ಮಹಿಳೆಯರು ಮತ್ತು ಯುವಕರು ಮತಾಂತರಕ್ಕೆ ಬಂದ ಮಿಷನರಿಗಳನ್ನು ಹಿಡಿದರು ಮತ್ತು ಅವರನ್ನು ಶಾಸ್ತ್ರಿನಗರ ಪೋಲೀಸ್ ಠಾಣೆಗೆ ಕರೆದೊಯ್ದು ಕ್ರಮ ಕೈಗೊಳ್ಳುವಂತೆ ಪೋಲೀಸರ ವಶಕ್ಕೆ ಒಪ್ಪಿಸಿದರು.