ರಾಷ್ಟ್ರೀಯ ತನಿಖಾ ದಳದ ಪ್ರಯತ್ನ
ಮುಂಬಯಿ – ದೇಶಾದ್ಯಂತ ಹಾಗೂ ವಿದೇಶದಲ್ಲಿ ಸಕ್ರಿಯರಾಗಿರುವ 22 ಸಾವಿರಕ್ಕೂ ಹೆಚ್ಚಿನ ಭಯೋತ್ಪಾದಕರ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.) ಸಂಗ್ರಹಿಸಿದೆ. ಭಯೋತ್ಪಾದಕರ ವಿರುದ್ಧ ದೇಶದಲ್ಲಿ ದಾಖಲಾಗಿರುವ ಸಾವಿರಾರು ಅಪರಾಧಗಳ ಮಾಹಿತಿ ಈ ಮೂಲಕ ಸಿಗಲಿದೆ. ಅಮೇರಿಕಾ ಸಿದ್ಧಪಡಿಸಿರುವ ‘ಗ್ಲೋಬಲ್ ಟೆರರಿಸಂ ಡೇಟಾಬೇಸ್’ ನ ಆಧಾರದಲ್ಲಿ ರಾಷ್ಟ್ರೀಯ ಭಯೋತ್ಪಾದನೆ ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ ಕೇಂದ್ರ (ಎಂಟಿಡಿಸಿ-ಫಾಕ್) ಸ್ಥಾಪಿಸಿದೆ.
1. 2008ರಲ್ಲಿ ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಸ್ಥಾಪಿಸಲಾಗಿರುವ ರಾಷ್ಟ್ರೀಯ ತನಿಖಾ ದಳಕ್ಕೆ ಭಯೋತ್ಪಾದಕರ ಚಟುವಟಿಕೆಗಳ ವಿಷಯದಲ್ಲಿ ಗುಪ್ತಚರ ಇಲಾಖೆಯಿಂದ ಮಾಹಿತಿ ನೀಡಲಾಗುತ್ತದೆ. ಇದರಿಂದ, ವಿವಿಧ ರಾಜ್ಯಗಳಲ್ಲಿ ಭಯೋತ್ಪಾದನಾ ವಿರೋಧಿ ದಳಕ್ಕೆ ಸ್ವತಂತ್ರವಾಗಿ ಪ್ರಯತ್ನಿಸಿ ಮಾಹಿತಿಯನ್ನು ಕಲೆ ಹಾಕಬೇಕಾಗುತ್ತದೆ. ಭಯೋತ್ಪಾದಕರ ವಿರುದ್ಧ ಚಟುವಟಿಕೆ ನಡೆಸುವ ಜವಾಬ್ದಾರಿ ಹೊಂದಿರುವ ರಾಷ್ಟ್ರೀಯ ತನಿಖಾ ದಳ 15 ವರ್ಷಗಳ ಬಳಿಕ ಇಂತಹದ್ದೊಂದು ‘ಡೇಟಾಬೇಸ್’ ಸಿದ್ಧಪಡಿಸಿದೆ.
2. ಇಂಡಿಯನ್ ಮುಜಾಹಿದ್ದೀನ, ಲಷ್ಕರ-ಎ-ತೊಯ್ಬಾ ಈ ಪ್ರಮುಖ ಸಂಘಟನೆಗಳಲ್ಲದೇ ದೇಶದಲ್ಲಿ ನಿಷೇಧಿಸಲಾಗಿರುವ ಎಲ್ಲಾ ಭಯೋತ್ಪಾದಕ ಸಂಘಟನೆಗಳ ಮಾಹಿತಿಯನ್ನೂ ಅವರ ನಾಯಕರೊಂದಿಗೆ ಇದರಲ್ಲಿ ನೀಡಲಾಗಿದೆ.
3. 2023 ರಲ್ಲಿ, ದಳವು 625 ಭಯೋತ್ಪಾದಕರನ್ನು ಬಂಧಿಸಿತು.
4. ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಎಲ್ಲಾ ಭಯೋತ್ಪಾದಕರ ಮಾಹಿತಿ ಮತ್ತು ಅವರ ಸಂಘಟನೆಗಳ ಹೆಸರು, ಬೆರಳಿನ ಅಚ್ಚು, ಆಡಿಯೋ, ಛಾಯಾಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಮಾಹಿತಿ ಇತ್ಯಾದಿ ಎಲ್ಲ ವಿವರಗಳನ್ನು ಸಂಗ್ರಹಿಸಲಾಗಿದೆ.
5. ದಳವು ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ 92 ಲಕ್ಷ ಶಂಕಿತರ ಬೆರಳಿನ ಅಚ್ಚುಗಳಿವೆ. ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುವ 5 ಲಕ್ಷಕ್ಕಿಂತ ಅಧಿಕ ಆರೋಪಿಗಳ ಮಾಹಿತಿಯೂ ಅವರ ಇತ್ತೀಚಿನ ಛಾಯಾಚಿತ್ರದೊಂದಿಗೆ ಸಂಗ್ರಹಿಸಲಾಗಿದೆ.
6. ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡುವ ಶಂಕಿತರ ಬಗ್ಗೆಯೂ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಸಿಸಿಟಿವಿ ದೃಶ್ಯಗಳ ಛಾಯಾಚಿತ್ರಗಳಿಂದ ಆರೋಪಿಯನ್ನು ಗುರುತಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.
7. ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾ, ‘ಭಯೋತ್ಪಾದನೆ ನಿರ್ಮೂಲನೆಗೆ ಈ ಅತ್ಯಾಧುನಿಕ ವ್ಯವಸ್ಥೆ ಅನುಕೂಲವಾಗಲಿದೆ. ರಾಜ್ಯಗಳಲ್ಲಿರುವ ಭಯೋತ್ಪಾದನಾ ನಿಗ್ರಹ ತಂಡಗಳಿಗೂ ಈ ಮಾಹಿತಿ ಲಭ್ಯವಾಗಲಿದೆ. ಪ್ರತಿ ರಾಜ್ಯದ ಭಯೋತ್ಪಾದನಾ ನಿಗ್ರಹ ದಳವು ಆ ರಾಜ್ಯದಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಿದೆ; ಆದರೆ ಈ ಹೊಸ ಡೇಟಾಬೇಸ್‌ನಿಂದಾಗಿ ದೇಶಾದ್ಯಂತದ ಚಟುವಟಿಕೆಗಳ ಮಾಹಿತಿಯು ಅವರಿಗೆ ಲಭ್ಯವಾಗುತ್ತದೆ ಮತ್ತು ಉತ್ತಮ ಸಮನ್ವಯವನ್ನು ಸಾಧಿಸಬಹುದು ಎಂದು ಹೇಳಿದ್ದಾರೆ.