ರಾಜಸ್ಥಾನದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ ನಿಷೇಧಿಸುವ ಸಿದ್ಧತೆಯಲ್ಲಿ !

ಜಯಪೂರ (ರಾಜಸ್ಥಾನ) – ರಾಜಸ್ಥಾನದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ ಧರಿಸುವುದರ ಮೇಲೆ ನಿಷೇಧ ಹೇರಲು ಭಾಜಪ ಸರಕಾರ ಸಿದ್ಧತೆಯಲ್ಲಿದೆಯೆಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ, ಇತರ ರಾಜ್ಯಗಳ ಹಿಜಾಬ ನಿಷೇಧದ ವಿಷಯದ ಕುರಿತಾದ ಮಾಹಿತಿಯನ್ನು ಅಧ್ಯಯನಕ್ಕಾಗಿ ಕೇಳಲಾಗಿದೆ. ಹಿಜಾಬ ನಿಷೇಧದ ವಿಷಯವನ್ನು ವಿಧಾನಸಭೆಯಲ್ಲಿಯೂ ಮಂಡಿಸಲಾಗಿತ್ತು. ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿ ಒಂದೇ ಸಮವಸ್ತ್ರ. ಅದರಲ್ಲಿ ಹಿಜಾಬ್ ಇರುವುದಿಲ್ಲ. ಮದರಸಾಗಳಲ್ಲಿ ಕಲಿಯುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಾರೆ. ಕೆಲವು ಅಲ್ಪಸಂಖ್ಯಾತ ಸಂಸ್ಥೆಗಳು ನಡೆಸುವ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಸ್ವತಂತ್ರ ಸಮವಸ್ತ್ರವಿರುತ್ತದೆ. ಸಿಖ್ ವಿದ್ಯಾರ್ಥಿಗಳು ಪಗಡಿ ಧರಿಸಿ ಬರಲು ಅವಕಾಶವಿದೆ.

1. ಸೂತ್ರಗಳು ನೀಡಿರುವ ಮಾಹಿತಿಯನುಸಾರ, ಹಿಜಾಬ ನಿಷೇಧದ ಅಂಶಗಳ ಮೇಲೆ ಶಿಕ್ಷಣ ವಿಭಾಗದ ಉನ್ನತ ಮಟ್ಟದಲ್ಲಿ ವರದಿಯನ್ನು ಸಿದ್ಧಪಡಿಸಿ ಶಿಕ್ಷಣ ಸಚಿವ ಮದನ ದಿಲಾವರ ಅವರಿಗೆ ಕಳುಹಿಸಲಾಗುವುದು.

2. ಇತರ ರಾಜ್ಯಗಳಲ್ಲಿ ಹಿಜಾಬ್ ನಿಷೇಧದ ಪರಿಸ್ಥಿತಿ ಮತ್ತು ರಾಜಸ್ಥಾನದಲ್ಲಿ ಅದರ ಪರಿಣಾಮಗಳ ಬಗ್ಗೆ ಶಿಕ್ಷಣ ಸಚಿವ ದಿಲಾವರ ಅವರೇ ಸ್ವತಃ ಇಲಾಖೆಯಿಂದ ವರದಿ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

3. ಉನ್ನತ ಸ್ತರದಲ್ಲಿ ಒಪ್ಪಿಗೆ ಸಿಕ್ಕ ಬಳಿಕವೇ ರಾಜಸ್ಥಾನದ ಶಾಲೆಗಳಲ್ಲಿಯೂ ಹಿಜಾಬ್ ಅನ್ನು ನಿಷೇಧಿಸಬಹುದು.

ಶಾಲೆ, ಕಾಲೇಜು ಮತ್ತು ಮದರಸಾಗಳಲ್ಲಿ ಸಮವಸ್ತ್ರವನ್ನು ಜಾರಿಗೊಳಿಸಿರಿ ! – ರಾಜ್ಯದ ಕೃಷಿ ಸಚಿವ ಡಾ. ಕಿರೋಡಿಲಾಲ್ ಮೀನಾ

ಕೃಷಿ ಸಚಿವ ಡಾ.ಕಿರೋಡಿಲಾಲ್ ಮೀನಾ ಅವರು ರಾಜ್ಯಾದ್ಯಂತ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸುವಂತೆ ಒತ್ತಾಯಿಸಿದರು. ಅವರು ಮಾತನಾಡಿ, ಶಾಲೆಗಳಲ್ಲಿ ಏಕರೂಪದ ನಿಯಮಗಳನ್ನು ಪಾಲಿಸಬೇಕು. ಕೇವಲ ಸರಕಾರಿ ಶಾಲೆಗಳಲ್ಲಿ ಮಾತ್ರವಲ್ಲ, ಖಾಸಗಿ ಶಾಲೆಗಳು ಮತ್ತು ಮದರಸಾಗಳಲ್ಲಿಯೂ ನಿಷೇಧಿಸಬೇಕು. ಈ ವಿಚಾರವಾಗಿ ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಮೊಘಲ ಆಕ್ರಮಣಕಾರರು ಭಾರತಕ್ಕೆ ಬಂದಾಗ, ಅವರು ಹಿಜಾಬ ಸಂಪ್ರದಾಯವನ್ನು ಪ್ರಾರಂಭಿಸಿದರು. ನಮ್ಮ ದೇಶದಲ್ಲಿ ಬುರ್ಖಾ ಮತ್ತು ಹಿಜಾಬ್ ಯಾವುದೇ ರೀತಿಯಲ್ಲಿ ಸ್ವೀಕಾರಾರ್ಹವಲ್ಲ. ಅನೇಕ ಇಸ್ಲಾಮಿಕ್ ದೇಶಗಳಲ್ಲಿ ಹಿಜಾಬ ಮತ್ತು ಬುರ್ಖಾಗೆ ಮಾನ್ಯತೆಯಿಲ್ಲದಿರುವಾಗಲೂ ನಾವು ಅದನ್ನೇಕೆ ಸ್ವೀಕರಿಸಬೇಕು? ನಮ್ಮ ಶಾಸಕರು ಈ ಅಂಶವನ್ನು ಮಂಡಿಸಿದ್ದಾರೆ. ಪೊಲೀಸರು ಮತ್ತು ವಿದ್ಯಾರ್ಥಿಗಳಿಗೂ ಸಮವಸ್ತ್ರವಿದೆ. ಸಮವಸ್ತ್ರದ ನಿಯಮಗಳನ್ನು ಪಾಲಿಸದಿದ್ದರೆ, ನಾಳೆ ಕೆಲವು ಪೊಲೀಸ್ ಅಧಿಕಾರಿಗಳು ಕುರ್ತಾ ಮತ್ತು ಪೈಜಾಮವನ್ನು ಧರಿಸಿ ಪೊಲೀಸ ಠಾಣೆಯಲ್ಲಿ ಕುಳಿತುಕೊಳ್ಳುತ್ತಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ರಫೀಕ್ ಖಾನ್ ಅವರಿಂದ ಹಿಜಾಬ್ ಸೂತ್ರಗಳು ಮಂಡನೆ

ಕಾಂಗ್ರೆಸ ಶಾಸಕ ರಫೀಕ ಖಾನ ಇವರು ವಿಧಾನಸಭೆಯಲ್ಲಿ ಭಾಜಪ ಶಾಸಕ ಬಾಲಮುಕುಂದ ಆಚಾರ್ಯರು ಜಯಪೂರದ ಗಂಗಾಪೋಳನ ಶಾಲೆಯಲ್ಲಿ ಹಿಜಾಬ್ ಅನ್ನು ನಿಷೇಧಿಸಿದ್ದಾರೆ. ಇದರಿಂದ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದಿಲ್ಲ ಎಂದು ಹೇಳಿದರು.

ನಾಳೆ ಹಿಂದೂ ವಿದ್ಯಾರ್ಥಿಗಳೂ ಬಣ್ಣಬಣ್ಣದ ಬಟ್ಟೆ ಧರಿಸಿ ಬರಬಹುದು ! – ಶಾಸಕ ಬಾಲಮುಕುಂದ ಆಚಾರ್ಯ, ಭಾಜಪ

ಭಾಜಪ ಶಾಸಕ ಬಾಲಮುಕುಂದ ಆಚಾರ್ಯ ಅವರು ಹಿಜಾಬ್ ನಿಷೇಧದ ವಿಷಯವನ್ನು ಮೊದಲು ಪ್ರಸ್ತಾಪಿಸಿದರು. ಅವರು ಜಯಪುರದ ಶಾಲೆಗೆ ಹೋಗಿ, ಹಿಜಾಬ್ ಧರಿಸಿರುವ ಹುಡುಗಿಯರನ್ನು ನೋಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ವಿಷಯದ ಬಗ್ಗೆ ಅವರು ಮಾತನಾಡಿ, ಶಾಲೆಗಳಲ್ಲಿ ಸಮವಸ್ತ್ರವಿರುತ್ತದೆ, ನನ್ನ ಭಾಷಣವನ್ನು ನೋಡಬಹುದು. ನಾನು ಶಾಲೆಯ ವಿದ್ಯಾರ್ಥಿನಿಯರಿಗೆ ಏನೂ ಹೇಳಲಿಲ್ಲ, ನಾನು ಕೇವಲ ಶಾಲೆಯ ಮುಖ್ಯೋಪಾಧ್ಯಾಪಕರಿಗೆ ಶಾಲೆಯಲ್ಲಿ 2 ರೀತಿಯ ಸಮವಸ್ತ್ರದ ನಿಯಮವಿದೆಯೇ? ಎಂದು ಕೇಳಿದ್ದೆನು. ಅದಕ್ಕೆ ಅವರು `ಇಲ್ಲ’ ಎಂದು ಹೇಳಿದರು. ನಾನು ಶಾಲೆಯಲ್ಲಿ ಎರಡು ರೀತಿಯ ವಾತಾವರಣವನ್ನು ನೋಡಿದೆ. ಒಂದು ಹಿಜಾಬ್‌ನೊಂದಿಗೆ, ಇನ್ನೊಂದು ಹಿಜಾಬ್ ಇಲ್ಲದ. ಇಂತಹ ಪರಿಸ್ಥಿತಿಯಲ್ಲಿ ನಾಳೆ ಹಿಂದುಗಳ ಮಕ್ಕಳೂ ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ಬರಬಹುದು.

ಸಂಪಾದಕೀಯ ನಿಲುವು

ಯುರೋಪಿನ ಅನೇಕ ದೇಶಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ, ಬುರ್ಖಾ ಮುಂತಾದ ಮುಸ್ಲಿಂ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಭಾರತ ಸರಕಾರವೂ ಸಂಪೂರ್ಣ ದೇಶದಲ್ಲಿ ಬುರ್ಖಾ ಮತ್ತು ಹಿಜಾಬನ್ನು ನಿಷೇಧಿಸಬೇಕು ಎಂದು ರಾಷ್ಟ್ರಪ್ರೇಮಿಗಳ ನಿರೀಕ್ಷೆಯಾಗಿದೆ !