ಗುರುದ್ವಾರದಲ್ಲಿ ಖಲಿಸ್ತಾನಿ ಭಯೋತ್ಪಾದಕರ ಫೋಟೋಗಳನ್ನು ಹಾಕುವುದನ್ನು ವಿರೋಧಿಸಿದ ನಿವೃತ್ತ ಕರ್ನಲ್ ವಾಹನದ ಮೇಲೆ ದಾಳಿ !

ತರನತಾರನ (ಪಂಜಾಬ) ಇಲ್ಲಿಯ ಘಟನೆ !

ತರನತಾರನ (ಪಂಜಾಬ್) – ಇಲ್ಲಿನ ಪಾಹುವಿಂದ ಗ್ರಾಮದಲ್ಲಿ ದೀಪ ಸಿಂಗ್ ಜನ್ಮಸ್ಥಳ ಗುರುದ್ವಾರದಲ್ಲಿ ಜನವರಿ ೨೮ ರಂದು ಬಾಬಾ ದೀಪ ಸಿಂಗ್ ಅವರ ಜಯಂತಿ ನಿಮಿತ್ತ ಒಂದು ಉತ್ಸವವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕೆಲವು ಸಿಖ್ ಯುವಕರು ಖಲಿಸ್ತಾನಿ ಭಯೋತ್ಪಾದಕ ಜರ್ನೆಲ್‌ಸಿಂಗ್ ಭಿಂದ್ರನ್‌ವಾಲೆ ಅವರ ಫೋಟೊ ಹಾಕಿದ್ದರು. ಈ ಗುರುದ್ವಾರದ ನಿರ್ವಹಣಾ ಸಮಿತಿಯ ಅಧ್ಯಕ್ಷ (ನಿವೃತ್ತ) ಕರ್ನಲ್ ಹರಸಿಮರನ ಸಿಂಗ್ ಇವರು ಆಕ್ಷೇಪಿಸಿದರು. ಅವರು ಈ ಸಿಖ್ ಯುವಕರಿಗೆ ಭಿಂದ್ರನ್‌ವಾಲೆ ಫೋಟೊ ಅಲ್ಲಿಂದ ತೆಗೆದುಹಾಕುವಂತೆ ಹೇಳಿದರು. ಈ ಯುವಕರು ಒಪ್ಪಲಿಲ್ಲ. ಫೋಟೊ ತೆಗೆಯುವ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ನಂತರ ಹರಸಿಮರನ್ ಅವರು ಸ್ವತಃ ಫೋಟೊಗಳನ್ನು ತೆಗೆದುಹಾಕಿದರು. ಅದದ ನಂತರ ಹರಸಿಮಾರನ ಸಿಂಗ್ ಗುರುದ್ವಾರದಿಂದ ಹಿಂದಿರುಗುತ್ತಿದ್ದಾಗ ಅವರ ಕಾರಿನ ಮೇಲೆ ಈ ಯುವಕರು ದಾಳಿ ಮಾಡಿ ಕಾರಿಗೆ ಹಾನಿ ಮಾಡಿದರು. ಈ ಸಂದರ್ಭದಲ್ಲಿ ಸಿಂಗ್‌ಗೆ ರಕ್ಷಣೆ ನೀಡುತ್ತಿದ್ದ ಪೊಲೀಸರೊಂದಿಗೆ ಈ ಯುವಕರು ವಾಗ್ವಾದ ನಡೆಸಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಗಾಯಗೊಂಡಿದ್ದು ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಪೊಲೀಸರು ಸಿಂಗ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.

ಈ ಪ್ರಕರಣದ ವಿಷಯ ತಿಳಿದ ತಕ್ಷಣ ಕೆಲವು ಸಿಖ್ ನಾಯಕರು ಇಲ್ಲಿಗೆ ತಲುಪಿ ಅವರು(ನಿವೃತ್ತ) ಕರ್ನಲ್ ಹರಸಿಮಾರನ ಸಿಂಗ್ ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲು ಪ್ರಾರಂಭಿಸಿದರು.

ಸಂಪಾದಕರ ನಿಲುವು

* ಪಂಜಾಬ್‌ನ ಖಲಿಸ್ತಾನಿಸ್ಟ್‌ಗಳನ್ನು ಇಸ್ಲಾಮಿಕ್ ದೇಶಗಳಾದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳಿಗೆ ಓಡಿಸಿದರೆ, ಅವರಿಗೆ ಭಾರತದ ಮತ್ತು ಹಿಂದೂಗಳ ಮಹತ್ವ ಗಮನಕ್ಕೆ ಬರುವುದು