ತಿರುನವನಪುರಂ (ಕೇರಳ) – ಕೇರಳದ ಭಾಜಪ ನಾಯಕ ರಂಜಿತ ಶ್ರೀನಿವಾಸ ಅವರನ್ನು ಡಿಸೆಂಬರ್ 19, 2021 ರಂದು ಅವರ ಆಲಪ್ಪುಳದಲ್ಲಿರುವ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ 15 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ಅಜಮಲ, ಅನೂಪ್, ಮೊಹಮ್ಮದ ಅಸ್ಲಂ ಅಬ್ದುಲ್ ಕಲಾಂ ಅಲಿಯಾಸ್ ಸಲಾಮ, ಸಫರುದ್ದೀನ, ಮನ್ಶದ ಜಸೀಬ ರಾಜಾ, ನವಾಜ, ಸಮೀರ, ನಝೀರ, ಅಬ್ದುಲ ಕಲಾಂ, ಝಾಕೀರ ಹುಸೇನ, ಶಾಜಿ, ನೈಸಂ ಮತ್ತು ಶೇರನಾಸ ಅಶ್ರಫ ಹೆಸರುಗಳಾಗಿವೆ, ಅವರು ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ.) ಸದಸ್ಯರಾಗಿದ್ದರು. ಮಾವೆಲಿಕ್ಕರ್ ಜಿಲ್ಲಾ ನ್ಯಾಯಾಲಯವು ಅವರಿಗೆ ಶಿಕ್ಷೆಯನ್ನು ವಿಧಿಸಿತು. 15 ಮಂದಿಯಲ್ಲಿ 8 ಆರೋಪಿಗಳು ಕೊಲೆಯಲ್ಲಿ ನೇರ ಭಾಗಿಗಳಾಗಿದ್ದರು; ಇತರ ಆರೋಪಿಗಳು ಈ ಅಪರಾಧದ ಮುಖ್ಯ ಆರೋಪಿಗಳಿಗೆ ಸಹಾಯ ಮಾಡಿದ್ದರು.
ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ! – ರಂಜಿತ ಅವರ ಪತ್ನಿ ಲಿಶಾ
ರಂಜಿತ ಇವರ ಪತ್ನಿ ಲಿಶಾ ಈ ಶಿಕ್ಷೆಯ ಬಗ್ಗೆ ತಮ್ಮ ಸಮಾಧಾನವನ್ನು ವ್ಯಕ್ತಪಡಿಸಿದರು. ಅವರು ಮಾತನಾಡಿ, ಇದು ಕೇವಲ ಒಂದು ಹತ್ಯೆಯ ಪ್ರಕರಣವಲ್ಲ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ ಎಂದು ಹೇಳಿದರು. ನನ್ನ ಕಣ್ಣೆದುರೇ ನನ್ನ ಪತಿಯ ಮೇಲೆ ಹಲ್ಲೆ ಮಾಡಿದ್ದರು ಮತ್ತು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು ಎಂದು ಹೇಳಿದರು.
(ಸೌಜನ್ಯ: India Today)
ಸಂಪಾದಕರ ನಿಲುವು* ಇದಕ್ಕೆ ಹೇಳೋದು ಕಠಿಣ ಶಿಕ್ಷೆ ! ಹಿಂದುತ್ವನಿಷ್ಠರ ಹತ್ಯೆ ಮಾಡಿದವರಿಗೆ ಇದೇ ಶಿಕ್ಷೆ ಸಿಗಬೇಕು. ಈಗ ಈ ಶಿಕ್ಷೆಯನ್ನು ತಕ್ಷಣವೇ ಜಾರಿಗೊಳಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ, ಇಲ್ಲವಾದರೆ ಹಿಂದಿನ ಅನುಭವಗಳನ್ನು ನೋಡಿದರೆ ಜಿಹಾದಿಗಳು ಈ ಶಿಕ್ಷೆಯನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಾರೆ ಎನ್ನುವುದೂ ಅಷ್ಟೇ ಖಚಿತವಾಗಿದೆ ! |