ಡಾ. ಅಂಬೇಡ್ಕರ್ ಪ್ರತಿಮೆಯ ಪೂಜೆಗೆ ಭಾಗವಹಿಸದ ವಿದ್ಯಾರ್ಥಿ; ಇತರ ವಿದ್ಯಾರ್ಥಿಗಳು ಥಳಿಸುತ್ತಾ ಬೆತ್ತಲೆ ಮಾಡಿ ಮೆರವಣಿಗೆ !

ಕಲ್ಬುರ್ಗಿಯಲ್ಲಿ ಡಾ. ಅಂಬೇಡ್ಕರ್ ಪುತ್ತಳಿಗೆ ಪೂಜೆಯಲ್ಲಿ ಭಾಗವಹಿಸದ ಪ್ರಕರಣ !

ಕಲಬುರಗಿ – ಇಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡುತ್ತಿದ್ದರು. ಅದರಲ್ಲಿ ಓರ್ವ ವಿದ್ಯಾರ್ಥಿ ಸಹಭಾಗಿ ಆಗಲಿಲ್ಲ ಎಂಬ ಕಾರಣಕ್ಕೆ ಆತನನ್ನು ಬೆತ್ತಲೆಗೊಳಿಸಿ ಥಳಿಸಿದ್ದಾರೆ. ಈ ವಿದ್ಯಾರ್ಥಿಯ ಕೈಯಲ್ಲಿ ಡಾ.ಅಂಬೆಡ್ಕರ್ ಅವರ ಭಾವಚಿತ್ರ ಕೊಟ್ಟು ಪಟ್ಟಣದಲ್ಲಿ ಸುತ್ತಾಡಿಸಿದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಆಯಿತು.

ಕಲಬುರಗಿಯ ಕಾಲೇಜಿನಲ್ಲಿ ಓದಿತ್ತಿರುವ ಕೆಲವು ವಿದ್ಯಾರ್ಥಿಗಳು ಜನವರಿ ೨೫ ರಂದು ಹಾಸ್ಟೆಲ್ ನಲ್ಲಿ ಡಾ. ಅಂಬೇಡ್ಕರ್ ಅವರ ಪೂಜೆಯನ್ನು ಆಯೋಜಿಸಿದ್ದರು. ಸಂತ್ರಸ್ಥ ವಿದ್ಯಾರ್ಥಿಯೂ ಇದೇ ಹಾಸ್ಟೆಲ್ ನಲ್ಲಿ ವಾಸವಾಗಿದ್ದಾನೆ. ಪೂಜೆಗೆ ಭಾಗವಹಿಸುವಂತೆ ಅವನಿಗೆ ಹೇಳಲಾಗಿತ್ತು; ಆದರೆ ವಿದ್ಯಾರ್ಥಿಯು ವೈಯುಕ್ತಿಕ ಕಾರಣದಿಂದಾಗಿ ಭಾಗವಹಿಸಲು ನಿರಾಕರಿಸಿದ್ದಾನೆ. ಆದ್ದರಿಂದ ಅವನನ್ನು ನಗ್ನಗೊಳಿಸಿ ಹೊಡೆದರು ಮತ್ತು ರಸ್ತೆಯಲ್ಲಿ ತಿರುಗಾಡಿಸಿದರು. ಪೊಲೀಸರು ಅಲ್ಲಿಗೆ ತಲುಪಿದಾಗ ಹಲ್ಲೆಮಾಡಿದ ವಿದ್ಯಾರ್ಥಿಗಳು ಅಲ್ಲಿಂದ ಓಡಿಹೋಗಿದ್ದಾರೆ. ಈ ಪ್ರಕರಣದ ದೂರನ್ನು ದಾಖಲಿಸಿದ್ದು ಪೊಲೀಸರು ಆರೋಪಿ ವಿದ್ಯಾರ್ಥಿಗಳ ಹುಡುಕಾಟ ನಡೆಸುತ್ತಿದ್ದಾರೆ.

ಸಂಪಾದಕರ ನಿಲುವು

* ವಿದ್ಯಾರ್ಥಿಗಳು ಕಲಿಯಲು ಮತ್ತು ಯೋಗ್ಯ ಸಂಸ್ಕಾರವಾಗಲು ಶಾಲೆ ಮತ್ತು ಕಾಲೇಜುಗಳಿಗೆ ಹೋಗುತ್ತಾರೆ, ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡರೆ ಅದಕ್ಕೆ ಶಾಲಾ ಕಾಲೇಜುಗಳೇ ಹೊಣೆ !

* ಸಂವಿಧಾನವು ನಮಗೆ ವಿಚಾರಸ್ವಾತಂತ್ಯ್ರವನ್ನು ಕೊಟ್ಟಿದೆ. ಹಾಗೆಯೇ ಪ್ರಜಾಸತ್ತಾತ್ಮಕವಾಗಿ ವಿರೋಧಿಸಲು ಕಲಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಖಂಡನೀಯ ಕೃತ್ಯಮಾಡಿ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದರೆ ಡಾ. ಅಂಬೆಡ್ಕರ್ ಅವರಿಗೆ ಇಷ್ಟವಾಗುತ್ತಿತ್ತೇ !