ಹಾವಡಾ (ಬಂಗಾಳ) – ಇಲ್ಲಿ ಮತಾಂಧ ಮುಸ್ಲಿಮರಿಂದ ಶ್ರೀರಾಮನ ಮೆರವಣಿಗೆಯ ಮೇಲೆ ದಾಳಿ

ಸ್ಥಳೀಯ ಶಿವನ ಮಂದಿರದ ಧ್ವಂಸ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿಂದೂಗಳನ್ನು ರಕ್ಷಿಸುವಲ್ಲಿ ವಿಫಲ ! – ಭಾಜಪ ಆರೋಪ

ಕೊಲಕಾತಾ (ಬಂಗಾಳ) – ಬಂಗಾಳದ ಹಾವಡಾದಲ್ಲಿ ಜನವರಿ 24 ರ ರಾತ್ರಿ, ಬೆಲಿಲಿಯಾಸ್ ಮಾರ್ಗದ ವಿಭಾಗ ಸಂಖ್ಯೆ 17 ರ ಮೇಲೆ ಮತಾಂಧ ಮುಸ್ಲಿಮರು ಶ್ರೀರಾಮನ ಮೆರವಣಿಗೆಯ ಮೇಲೆ ದಾಳಿ ಮಾಡಿದರು. ಆ ಸಮಯದಲ್ಲಿ, ಸ್ಥಳೀಯ ಶಿವಮಂದಿರವನ್ನೂ ಧ್ವಂಸಗೊಳಿಸಿದರು ಎಂದು ಬಂಗಾಳದ ಭಾಜಪ ಉಪನಿರೀಕ್ಷಕ ಅಮಿತ್ ಮಾಳವಿಯಾ ಇವರು ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಅವರು ತಮ್ಮ ಮಾತನ್ನು ಮುಂದುವರೆಸಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇವಲ ಭದ್ರತೆಯನ್ನು ಒದಗಿಸುವಲ್ಲಿ ಮಾತ್ರ ವಿಫಲರಾಗಿಲ್ಲ, ಅವರು ಅವರ ಸರ್ವ ಧರ್ಮ ಸಭೆಯಲ್ಲಿ ಜಾತಿವಾದಿ ಭಾಷಣಗಳನ್ನೂ ಮಾಡಿದ್ದಾರೆ. ಇದರಿಂದ ಧಾರ್ಮಿಕ ಹಿಂಸಾಚಾರಗಳು ನಡೆದವು. ಕೋಲಕಾತಾ ಉಚ್ಚ ನ್ಯಾಯಾಲಯವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗೆ ನೀಡಿತ್ತು; ಆದರೆ ಮಮತಾ ಬ್ಯಾನರ್ಜಿಯವರು ಮಾತ್ರ ಆ ಆದೇಶವನ್ನು ರಾಜಾರೋಶವಾಗಿ ಉಲ್ಲಂಘಿಸುತ್ತಿದ್ದಾರೆ. ಪ್ರಧಾನ ಮಂತ್ರಿಯವರ ಕಾರ್ಯಕ್ರಮವನ್ನು ನಿಲ್ಲಿಸುವ ಬದಲು, ರಾಜ್ಯದ ಗೃಹ ಸಚಿವರೂ ಆಗಿರುವ ಮಮತಾ ಬ್ಯಾನರ್ಜಿ ಅವರು ಎಲ್ಲಾ ಹಿಂದೂಗಳು ಮತ್ತು ಬಂಗಾಳದ ಎಲ್ಲಾ ನಾಗರಿಕರಿಗೆ ಭದ್ರತೆಯನ್ನು ನೀಡಬೇಕು. ರಾಜ್ಯ ಭಾಜಪ ಪೊಲೀಸರಲ್ಲಿ ದೂರು ದಾಖಲಿಸಿದೆ; ಆದರೆ ಮಮತಾ ಬ್ಯಾನರ್ಜಿಯವರು ಯಾವುದೇ ಕ್ರಮ ಕೈಗೊಳ್ಳುವ ಭರವಸೆ ಇಲ್ಲ ಎಂದು ಹೇಳಿದರು.

ಸಂಪಾದಕರ ನಿಲುವು

*ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ತರುವುದೊಂದೇ ಈ ಎಲ್ಲ ಘಟನೆಗಳಿಗೂ ಸದ್ಯಕ್ಕೆ ಏಕೈಕ ಉಪಾಯವಾಗಿದೆ.