ಹೂತಿ ಬಂಡುಕೋರರಿಂದ ಅಮೆರಿಕಾ ನೌಕೆಯ ಮೇಲೆ ೩ ಬ್ಯಾಲೆಸ್ಟಿಕ್ ಕ್ಷಿಪಣಿ ದಾಳಿ !

ಅಮೇರಿಕಾದಿಂದ ಗಾಳಿಯಲ್ಲಿ ನಾಶ !

ವಾಷಿಂಗ್ಟನ್ (ಅಮೇರಿಕಾ) – ಇಸ್ರೈಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದಿಂದ ಸಮುದ್ರ ದಾಳಿ ಹೆಚ್ಚಾಗಿದೆ. ಯೇಮನ್‌ನ ಹೂತಿ ಬಂಡುಕೋರರು ಜನವರಿ ೨೪ ರಂದು ಮಧ್ಯ ಪೂರ್ವದಲ್ಲಿನ ಎಡನ್ ಕಣಿವೆಯಲ್ಲಿನ ಅಮೇರಿಕಾದ ಒಂದು ನೌಕೆಯ ಮೇಲೆ ದಾಳಿ ಮಾಡಿದೆ. ಅವರು ‘ಮೇಕರ್ಸ್ ಡೆಟ್ರಾಯಿಟ್’ ಈ ಅಮೇರಿಕಾದ ನೌಕೆಯ ಮೇಲೆ ೩ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಮಾಡಿದೆ. ಇದರಲ್ಲಿನ ಒಂದು ಸಮುದ್ರದಲ್ಲಿ ಬಿದ್ದಿತು ಹಾಗೂ ಇನ್ನೆರಡನ್ನು ಅಮೇರಿಕಾ ಗಾಳಿಯಲ್ಲೇ ನಾಶ ಮಾಡಿದೆ.

ಹೂತಿ ಬಂಡುಕೋರರ ಹೆಚ್ಚಿರುವ ಚಟುವಟಿಕೆಯ ವಿರುದ್ಧ ಅಮೇರಿಕಾ ಮತ್ತು ಬ್ರಿಟನ್ ಇವರು ಜನವರಿ ೨೨ ರಂದು ಅವರ ಕೇಂದ್ರಗಳ ಮೇಲೆ ದಾಳಿ ನಡೆಸಿ ವಿಪರೀತ ಹಾನಿ ಮಾಡಿದ್ದರು. ಈ ಚಟುವಟಿಕೆಗೆ ಕೆನಡಾ, ನೆದರಲ್ಯಾಂಡ್, ಬಹರಿನ ಮತ್ತು ಆಸ್ಟ್ರೇಲಿಯಾ ಬೆಂಬಲ ಘೋಷಿಸಿತ್ತು.