ಶ್ರೀರಾಮ ಮಂದಿರದ ಉದ್ಘಾಟನೆಯ ದಿನದಂದು ರಜೆ ಘೋಷಿಸಿರುವ ಶಾಲೆಗಳ ವಿಚಾರಣೆ ನಡೆಸಲು ಕೇರಳ ಸರಕಾರದ ಆದೇಶ !

ತಿರುವನಂತಪುರಂ (ಕೇರಳ) – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಪ್ರಯುಕ್ತ ಕೇರಳದ ಕಾಸರಗೋಡು ಜಿಲ್ಲೆಯಲ್ಲಿನ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದ್ದರು. ಇದರ ಬಗ್ಗೆ ಕೇರಳ ಸರಕಾರ ವಿಚಾರಣೆಗೆ ಆದೇಶ ನೀಡಿದೆ. ಸರಕಾರದಿಂದ ಈ ದಿನ ಯಾವುದೇ ರಜೆ ಘೋಷಿಸಲಿಲ್ಲ. ಆದರೂ ಕೂಡ ಶಾಲೆಯಿಂದ ರಜೆ ಘೋಷಿಸಿರುವುದರಿಂದ ವಿಚಾರಣೆಯ ಆದೇಶ ನೀಡಿದ್ದಾರೆ. ಹಾಗೂ ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನಕುಟ್ಟಿ ಇವರು ಸಾರ್ವಜನಿಕ ಶಿಕ್ಷಣ ಮಹಾ ಸಂಚಾಲಕರಿಂದ ವರದಿ ಕೇಳಿದ್ದಾರೆ. ‘ಸಾಮಾನ್ಯ ಶಿಕ್ಷಣ ಇಲಾಖೆಯಿಂದ ಯಾವುದೇ ಆದೇಶ ಇಲ್ಲದಿರುವಾಗ ಶಾಲೆಗೆ ರಜೆ ಏಕೆ ಘೋಷಿಸಿದ್ದರು ? ಇದರ ಬಗ್ಗೆ ೨೪ ಗಂಟೆಯಲ್ಲಿ ವರದಿ ಪ್ರಸ್ತುತಪಡಿಸಬೇಕೆಂದು ಹೇಳಿದ್ದಾರೆ.

(ಸೌಜನ್ಯ – News 24)

ಕೇರಳದ ಮುಖ್ಯಮಂತ್ರಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೋಡಲು ನಿರಾಕರಿಸಿದ್ದರು !
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರು ಶ್ರೀರಾಮಲಲ್ಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ರಾಜ್ಯದ ಕಾರ್ಯಕ್ರಮ ಎಂದು ನೋಡಲು ನಿರಾಕರಿಸಿದ್ದರು. ಅವರು, ಸಂವಿಧಾನದ ರಕ್ಷಣೆ ಮಾಡುವುದಕ್ಕಾಗಿ ನಾನು ಈ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದ್ದೇನೆ. ನಾನು ನನ್ನ ಸಂವಿಧಾನಿಕ ಹೊಣೆ ನಿಭಾಯಿಸಲು ಸಂವಿಧಾನದಲ್ಲಿನ ಜಾತ್ಯತೀತ ತತ್ವದ ಪಾಲನೆ ಮಾಡಲು ಕಟಿಬದ್ಧನಾಗಿದ್ದೇನೆ. (ಢೋಂಗಿ ಜಾತ್ಯತೀತತರ ಜಾತ್ಯಾತೀತವಾದ ಎಂದರೆ ಹಿಂದುಗಳ ದ್ವೇಷ ಮತ್ತು ಮುಸಲ್ಮಾನರ ಪ್ರೀತಿ ಹೀಗೆ ಇದೆ. ಹಿಂದುಗಳನ್ನು ಪ್ರೀತಿಸಿದರೆ ಮತ್ತು ಮುಸಲ್ಮಾನರನ್ನು ದೂರಸರಿಸಿದರೆ ಆಗ ಅವರು ಜಾತ್ಯತೀತತೆಯ ವಿರೋಧದಲ್ಲಿ ಅಂತ ೭೫ ವರ್ಷಗಳಿಂದ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ ! – ಸಂಪಾದಕರು)

ಸಂಪಾದಕೀಯ ನಿಲುವು

ಕೇರಳದ ಕಮ್ಯುನಿಸ್ಟ್ ಸರಕಾರಕ್ಕೆ ಶ್ರೀ ರಾಮನ ಕುರಿತು ಪ್ರೇಮವಿಲ್ಲ, ಇದರಿಂದ ಮತ್ತೊಮ್ಮೆ ಇದು ಸ್ಪಷ್ಟವಾಗುತ್ತದೆ ! ದೇವಸ್ಥಾನದ ಬದಲು ಮಸೀದಿಯ ಉದ್ಘಾಟನೆ ಇದ್ದಿದ್ದರೆ, ಆಗ ಕಮಿನಿಸ್ಟ್ ಸರಕಾರದಿಂದ ರಜೆ ಘೋಷಿಸುತ್ತಿದ್ದರು !