ಕನಸಿನಲ್ಲಿ ಭಗವಾನ್ ಶ್ರೀರಾಮ ಬಂದಿದ್ದರಿಂದ ಮುಸ್ಲಿಂ ಮಹಿಳೆಯಿಂದ ಹಿಂದೂ ಧರ್ಮ ಸ್ವೀಕಾರ !

ಜಬಲಪುರ್ (ಮಧ್ಯಪ್ರದೇಶ) – ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮಲಾಲಾನ ಪ್ರಾಣ ಪ್ರತಿಷ್ಠಾಪಿಸಿದ ದಿನ, ಉತ್ತರ ಪ್ರದೇಶದ ಓರ್ವ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಹುಡುಗನಿಗೆ ರಾಮ್ ರಹೀಮ್ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೆ, ಮಧ್ಯಪ್ರದೇಶದ ಜಬಲ್‌ಪುರದ ಮುಸ್ಲಿಂ ಮಹಿಳೆಯೊಬ್ಬರು ಔಪಚಾರಿಕವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಈ ಮಹಿಳೆಯ ಹೆಸರು ರಜಿಯಾ ಬಿ. ಎಂದಾಗಿದೆ. ರಜಿಯಾ, ಭಗವಾನ್ ಶ್ರೀರಾಮನು ಒಂದು ವಾರದ ಹಿಂದೆ ಅವಳ ಕನಸಿನಲ್ಲಿ ಬಂದಿದ್ದರು. ಆದ್ದರಿಂದ ಅವಳು ಹಿಂದೂ ಧರ್ಮವನ್ನು ಸ್ವೀಕರಿಸಲು ನಿರ್ಧರಿಸಿದಳು. ಯಾರ ಒತ್ತಡಕ್ಕೂ ಮಣಿಯದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ ರಜಿಯಾಗೆ ‘ನಂದಿನಿ’ ಎಂದು ಹೆಸರು ಇಡಲಾಯಿತು. ಇತರ ಧರ್ಮಗಳಿಗೆ ಮತಾಂತರಗೊಂಡ ಸ್ಥಳೀಯ ಮೂಲ ಹಿಂದೂ ಸಹೋದರರಿಗೆ ಹಿಂದೂ ಧರ್ಮವನ್ನು ಮರು ಸ್ವೀಕರಿಸುವಂತೆ ಅವರು ಮನವಿ ಮಾಡಿದ್ದಾರೆ.

(ಸೌಜನ್ಯ – News18 Virals)

ಇಸ್ಲಾಂನಲ್ಲಿ ಮಹಿಳೆಯರಿಗೆ ಅನೇಕ ನಿರ್ಬಂಧಗಳು !

ನಂದಿನಿಯು ಮಾತು ಮುಂದುವರೆಸುತ್ತಾ, ಇಸ್ಲಾಂನಲ್ಲಿ ಮಹಿಳೆಯರಿಗೆ ಹಲವು ನಿರ್ಬಂಧಗಳಿವೆ. ಹಿಂದೂ ಧರ್ಮದಲ್ಲಿ ಮಾತ್ರ ಮಹಿಳೆಯರಿಗೆ ಗೌರವ ನೀಡಲಾಗುತ್ತದೆ. ಇದರಿಂದಾಗಿ ನಾನು ಹಿಂದೂ ಆಗಲು ನಿರ್ಧರಿಸಿದೆ. ನನ್ನ ಕುಟುಂಬವೂ ನನಗೆ ಹಿಂದೂ ಧರ್ಮ ಸ್ವೀಕರಿಸಲು ಅನುಮತಿ ನೀಡಿತು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದ ತಥಾಕಥಿತ ಸೆಕ್ಯುಲರಿಸ್ಟ್ ಮತ್ತು ಮುಸ್ಲಿಂ ಪ್ರಿಯ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಇತ್ಯಾದಿ ರಾಜಕೀಯ ಪಕ್ಷಗಳ ಹಿಂದೂ ನಾಯಕರ ಕನಸಿನಲ್ಲಿ ಟಿಪ್ಪು ಸುಲ್ತಾನ್, ಔರಂಗಜೇಬ್, ಅಕ್ಬರ್, ಬಾಬರ್ ಬರುತ್ತಾರೆ ಎಂದು ಯಾರಿಗಾದರೂ ಅನ್ನಿಸಬಹುದು !