ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿಯ ಪುರಾತತ್ವ ಇಲಾಖೆಯ ಸಮೀಕ್ಷೆಯ ವರದಿ ಎರಡು ಪಕ್ಷದವರಿಗೆ ನೀಡಲು ನ್ಯಾಯಾಲಯ ಒಪ್ಪಿದೆ. ಆದಷ್ಟು ಬೇಗನೆ ಇದರ ಪ್ರತಿ ಅವರಿಗೆ ನೀಡುವರು. ಇದರಿಂದ ಈ ವರದಿ ಸಾರ್ವಜನಿಕವಾಗಬಹುದು. ಸಮೀಕ್ಷೆಯ ವರದಿ ಬಹಿರಂಗ ಪಡಿಸಲು ಹಿಂದೂ ಪಕ್ಷದಿಂದ ಆಗ್ರಹಿಸಲಾಗಿತ್ತು. ಆದರೆ ಸಮೀಕ್ಷೆಯ ವರದಿ ಬಹಿರಂಗಪಡಿಸಬಾರದು ಎಂದು ಮುಸಲ್ಮಾನ ಪಕ್ಷದಿಂದ ಅರ್ಜಿ ಸಲ್ಲಿಸಿದರು. ಈಗ ಈ ವರದಿ ಬಹಿರಂಗವಾದ ನಂತರ ಜ್ಞಾನವಾಪಿ ಯಾರದು ? ಎಂದು ಸ್ಪಷ್ಟವಾಗುವುದು.
Archaeological survey report of Gyanvapi will be made public.
Varanasi (Uttar Pradesh) – The district court has agreed to give the report of the Gyanvapi survey, conducted by the #ASI to both the parties.
The parties would soon receive the report, implying, that the survey… pic.twitter.com/kYEj0kGBnX
— Sanatan Prabhat (@SanatanPrabhat) January 24, 2024
ಡಿಸೆಂಬರ್ ೧೮, ೨೦೨೩ ರಂದು ಪುರಾತತ್ವ ಸಮೀಕ್ಷಾ ವಿಭಾಗದಿಂದ ಈ ವಿಷಯದ ವರದಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿತ್ತು. ಜ್ಞಾನವಾಪಿಯ ಸಮೀಕ್ಷೆ ೧೦೦ ದಿನಗಳಿಗಿಂತಲೂ ಹೆಚ್ಚು ಸಮಯ ನಡೆಯಿತು. ಇದಕ್ಕಾಗಿ ಅಮೇರಿಕಾದ ಶಾಸ್ತ್ರಜ್ಞರ ಸಹಾಯ ಪಡೆದಿದ್ದರು.
(ಸೌಜನ್ಯ – Republic World)