ಶ್ರೀರಾಮ ಮಂದಿರದ ಉದ್ಘಾಟನೆಯ ದಿನದಂದು ಅಲೀರಾಜಪುರ (ಮಧ್ಯಪ್ರದೇಶ) ಇಲ್ಲಿ ವಿಧಿ !
ಭೋಪಾಲ್ (ಮಧ್ಯಪ್ರದೇಶ) – ಯಾಕೂಬ ಖಾನ ಮತ್ತು ಅವರ ಮಕ್ಕಳು ಘರವಾಪಸಿ (ಹಿಂದೂ ಧರ್ಮದಲ್ಲಿ ಪುನರ್ಪ್ರವೇಶ) ಮಾಡಿದ್ದಾರೆ. ಜನವರಿ ೨೨ ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಪ್ರಯುಕ್ತ ರಾಜ್ಯದ ಅಲೀರಾಜಪುರ ಇಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಘರವಾಪಸಿ ಮಾಡಿದರು. ಯಾಕೂಬ ಖಾನ ಇವರು ಧಾರ್ಮಿಕ ವಿಧಿಗಳಾದ ನಂತರ, ‘ನಾನು ನಮ್ಮ ಪೂರ್ವಜರು ಮಾಡಿರುವ ತಪ್ಪನ್ನು ಸುಧಾರಿಸುತ್ತಿದ್ದೇನೆ. ನನಗೆ ಮೊದಲಿನಿಂದಲೂ ಸನಾತನ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಇತ್ತು. ನಾನು ಸ್ವ ಇಚ್ಛೆಯಿಂದ ಹಿಂದೂ ಧರ್ಮ ಸ್ವೀಕರಿಸುತ್ತಿದ್ದೇನೆ’ ಎಂದು ಹೇಳಿದರು.
ಯಾಕೂಬ ಖಾನ ಇವರಿಗೆ ಸ್ಥಳೀಯ ಹಿಂದುತ್ವನಿಷ್ಠ ಕಾರ್ಯಕರ್ತರ ಸಹಾಯದಿಂದ ಹಿಂದೂ ಧರ್ಮದಲ್ಲಿ ಪ್ರವೇಶ ಮಾಡಲು ಸಾಧ್ಯವಾಯಿತು. ಅವರ ಹೆಸರು ‘ರಾಜಕುಮಾರ’ ಎಂದು ಇಟ್ಟಿದ್ದಾರೆ. ಮಗಳ ಕರಿಷ್ಮಾನ ಹೆಸರು ಬದಲಾಯಿಸಿಲ್ಲ ಹಾಗೂ ಮಗ ಶಾರುಖ್ ಈಗ ಸುಭಾಷ ಎಂದು ಹೆಸರು ಬದಲಾಯಿಸಿದ್ದಾರೆ.
ಯಾಕೂಬ ಅಲಿಯಾಸ್ ರಾಜಕುಮಾರ ಇವರ ಪತ್ನಿ ಮೂಲತಃ ಹಿಂದೂ ಆಗಿದ್ದಾರೆ ಅವರ ಹೆಸರು ಶಾರದಾ ಆಗಿದೆ. ವಿವಾಹದ ನಂತರ ಕೂಡ ಅವರು ಹಿಂದೂ ಸಂಪ್ರದಾಯ ಪಾಲಿಸಿದ್ದಾರೆ. ಅವರು ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನು ಹಿಂದೂ ಕುಟುಂಬದಲ್ಲಿ ವಿವಾಹ ಮಾಡಿಕೊಟ್ಟಿದ್ದಾರೆ.