ಅಯೋಧ್ಯೆಯ ಮಂದಿರದಲ್ಲಿ ಶ್ರೀ ಹನುಮಂತನೇ ದರ್ಶನಕ್ಕಾಗಿ ಬಂದಿರುವ ಬಗ್ಗೆ ಚರ್ಚೆ ! 

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾದ ಮರುದಿನವೇ ಒಂದು ಕೋತಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿರುವ ಘಟನೆಯೊಂದು ನಡೆದಿದೆ. ಈ ಕೋತಿ ಕೆಲವು ಸಮಯ ಗರ್ಭಗುಡಿಯಲ್ಲಿ ಶಾಂತವಾಗಿ ಕುಳಿತುಕೊಂಡು ಮೂರ್ತಿಯನ್ನು ನೋಡುತ್ತಿತ್ತು ಮತ್ತು ನಂತರ ಅದು ಅಲ್ಲಿಂದ ಹೊರಟು ಹೋಯಿತು. ಕೋತಿಯಿಂದಾಗಿ `ಮಂದಿರದಲ್ಲಿ ಶ್ರೀ ಹನುಮಂತನೇ ಬಂದಿದ್ದನು’ ಎಂದು ಅಯೋಧ್ಯೆಯಲ್ಲಿ ಚರ್ಚೆ ಆರಂಭವಾಯಿತು.

1. ಈ ಘಟನೆಯ ಮಾಹಿತಿಯನ್ನು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದೆ; ಆದರೆ ಆ ಸಮಯದ ಯಾವುದೇ ಛಾಯಾಚಿತ್ರವನ್ನು ನೀಡಿಲ್ಲ. ಈ ಪೋಸ್ಟನಲ್ಲಿ ಇಂದು (ಜನವರಿ 23ರಂದು) ಶ್ರೀರಾಮ ಜನ್ಮಭೂಮಿಯ ಮಂದಿರದಲ್ಲಿ ಸುಂದರ ಘಟನೆಯೊಂದು ನಡೆಯಿತು. ಸಂಜೆ 5.50 ಗಂಟೆ ಸುಮಾರಿಗೆ ಒಂದು ಕೋತಿ ದಕ್ಷಿಣ ದ್ವಾರದಿಂದ ಗರ್ಭಗುಡಿಯನ್ನು ಪ್ರವೇಶಿಸಿತು. ತದನಂತರ ಈ ಕೋತಿ ಉತ್ಸವಮೂರ್ತಿಯ ಹತ್ತಿರ ತಲುಪಿತು. ಭದ್ರತಾ ಸಿಬ್ಬಂದಿಯವರು ಕೋತಿಯನ್ನು ಮಂದಿರ ಪ್ರವೇಶಿಸಿರುವುದನ್ನು ನೋಡಿ ಧಾವಿಸಿದರು. ಅವರಿಗೆ, ಈ ಮಂಗ ಮೂರ್ತಿಗೆ ಏನಾದರೂ ಹಾನಿ ಮಾಡಬಹುದು ಎಂದೆನಿಸಿತ್ತು. ಆದರೆ ಈ ಕೋತಿ ಕೆಲವು ಸಮಯ ಮೂರ್ತಿಯ ಎದುರಿಗೆ ಕುಳಿತುಕೊಂಡಿತು ಮತ್ತು ನಂತರ ಉತ್ತರ ಬಾಗಿಲಿನಿಂದ ಹೊರಟು ಹೋಯಿತು. ಆ ಕೋತಿ ಯಾವುದೇ ಹಾನಿಯನ್ನು ಮಾಡಲಿಲ್ಲ. ರಾಮರಾಯನ ದರ್ಶನಕ್ಕೆ ಶ್ರೀ ಹನುಮಂತ ಬಂದಿದ್ದಾನೆ ಎಂದು ಭದ್ರತಾ ಸಿಬ್ಬಂದಿಯಲ್ಲಿ ಚರ್ಚೆ ನಡೆದಿದೆ.

2. ಈ ದೃಶ್ಯವನ್ನು ನೋಡಿದ ಭಕ್ತರು ತಾವು ಅದೃಷ್ಟವಂತರು ಎಂದು ತಿಳಿಯುತ್ತಿದ್ದಾರೆ.`ಇದು ನಮಗೆ ಭಾಗ್ಯದ ಕ್ಷಣವಾಗಿತ್ತು. ನಾವು ರಾಮನ ಮೂರ್ತಿ ಮತ್ತು ಹನುಮಂತನ ದರ್ಶನವನ್ನು ಪಡೆದೆವು’, ಎಂದು ಅವರು ಹೇಳುತ್ತಿದ್ದರು.