ಮುಸಲ್ಮಾನರು ಜ್ಞಾನವಾಪಿ ಮತ್ತು ಶಾಹಿ ಈದ್ಗಾ ಮಸೀದಿ ಹಿಂದೂಗಳಿಗೆ ಒಪ್ಪಿಸಬೇಕು ! – ಕೆ. ಕೆ. ಮಹಮ್ಮದ್

ತಿರುವನಂತಪುರಂ (ಕೇರಳ) – ಮುಸಲ್ಮಾನರು ವಾರಣಾಸಿಯಲ್ಲಿನ ಜ್ಞಾನವಾಪಿ ಮತ್ತು ಮಥೂರೆಯಲ್ಲಿನ ಶಾಹಿ ಈದ್ಗಾಹ ಮಸೀದಿಯನ್ನು ಹಿಂದುಗಳಿಗೆ ಒಪ್ಪಿಸಬೇಕು, ಎಂದು ಶ್ರೀರಾಮ ಜನ್ಮಭೂಮಿ ಮಂದಿರದ ಉತ್ಕನನಾದ ನಂತರ ಮಹತ್ವದ ತೀರ್ಮಾನ ನೀಡಿರುವ ಪುರಾತತ್ವ ಶಾಸ್ತ್ರಜ್ಞ ಕೆ.ಕೆ. ಮಹಮ್ಮದ್ ಇವರು ಮುಸಲ್ಮಾನರಿಗೆ ಕರೆ ನೀಡಿದರು. ಅವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

೧. ಕೆ.ಕೆ. ಮಹಮ್ಮದ್ ಮಾತು ಮುಂದುವರೆಸುತ್ತಾ, ಈ ಸಮಸ್ಯೆಗೆ ಇದು ಏಕೈಕ ಉಪಾಯವೆಂದರೆ ಜ್ಞಾನವಾಪಿ ಮತ್ತು ಈದ್ಗಾ ಹಿಂದೂಗಳಿಗೆ ಒಪ್ಪಿಸಬೇಕು. ಎಲ್ಲಾ ಧರ್ಮ ಗುರುಗಳು ಸಂಘಟಿತರಾಗಿ ಈ ಕಟ್ಟಡ ಹಿಂದುಗಳಿಗೆ ಒಪ್ಪಿಸಬೇಕು. ಕಾಶಿ, ಮಥುರ ಮತ್ತು ಅಯೋಧ್ಯ ಹಿಂದುಗಳಿಗೆ ಬಹಳ ವಿಶೇಷವಾಗಿವೆ. ಅವುಗಳು ಭಗವಾನ್ ಶಿವ, ಭಗವಾನ್ ಶ್ರೀ ಕೃಷ್ಣ ಮತ್ತು ಪ್ರಭು ಶ್ರೀ ರಾಮ ಇವರ ಜೀವನಕ್ಕೆ ಸಂಬಂಧಿತವಾಗಿದೆ. ಇಲ್ಲಿ ಕಟ್ಟಿರುವ ಮಸೀದಿಯ ಬಗ್ಗೆ ಮುಸಲ್ಮಾನರಲ್ಲಿ ಭಾವನೆಗಳಿಲ್ಲ.

೨. ಕೇರಳಾದ ಕೋಳಿಕೊಡನ ನಿವಾಸಿ ೭೧ ವರ್ಷದ ಮಹಮ್ಮದ್ ಇವರು, ಬಾಬ್ರಿ ಕಟ್ಟಡದ ತೀರ್ಮಾನದ ನೀಡಿರುವುದರಿಂದ ಇಂದಿಗೂ ನನಗೆ ಜೀವ ಬೆದರಿಕೆ ನೀಡುತ್ತಿದ್ದಾರೆ. ಕೇರಳದಲ್ಲಿ ನಿಷೇಧಿತ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆ ಹಿಂದೆ ಬಹಳ ಸಕ್ರಿಯವಾಗಿ ಇತ್ತು.

ಕೆ.ಕೆ .ಮಹಮ್ಮದ್ ಯಾರು ?

ಕೆ.ಕೆ. ಮಹಮ್ಮದ್ ಇವರ ೨೦೧೨ ರಲ್ಲಿ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ ಉತ್ತರ ವಿಭಾಗದ ಪ್ರಾದೇಶಿಕ ಸಂಚಾಲಕರಾಗಿ ನಿವೃತ್ತರಾದರು. 1973 ರಲ್ಲಿ ಬಾಬ್ರಿ ಕಟ್ಟಡದ ಉತ್ಖನನ ನಡೆಸಿರುವ ಬಿ.ಬಿ. ಲಾಲ್ ಇವರ ತಂಡದಲ್ಲಿ ಸಹಭಾಗಿದ್ದರು. ಮಹಮ್ಮದ್ ಇವರಿಗೆ ಜನವರಿ ೨೨ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಆಮಂತ್ರಣ ನೀಡಿದ್ದರು; ಆದರೆ ಅವರಿಗೆ ಶಾರೀರಿಕ ತೊಂದರೆಯಿಂದ ಹೋಗಲು ಸಾಧ್ಯವಾಗಲಿಲ್ಲ.