ಅಯೋಧ್ಯೆ, ಜನವರಿ 19 (ಸುದ್ದಿ) – ಲೆಕಾರಾಮ ಸೈನಿ ಅವರು ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಿಂದ 11 ತಿಂಗಳ ಹಿಂದೆ ಉದ್ದಂಡ ನಮಸ್ಕಾರವನ್ನು ಹಾಕುತ್ತಾ ಯಾತ್ರೆಯನ್ನು ಪ್ರಾರಂಭಿಸಿದ್ದರು. 14 ರಾಜ್ಯದಿಂದ ಉದ್ದಂಡ ನಮಸ್ಕಾರವನ್ನು ಹಾಕುತ್ತಾ ಲೇಕಾರಾಮ ಸೈನಿಯವರು ಅಯೋಧ್ಯೆಗೆ ಶ್ರೀರಾಮನ ದರ್ಶನಕ್ಕಾಗಿ ತಲುಪಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳ ಆಗುವ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಲೇಕಾರಾಮ ಸೈನಿ ಉಪಸ್ಥಿತರಿರಲಿದ್ದಾರೆ.
ಲೆಕಾರಾಮ ಸೈನಿ ಮೂಲತಃ ಹರಿಯಾಣ ರಾಜ್ಯದವರಾಗಿದ್ದಾರೆ. ಫೆಬ್ರವರಿ 15, 2023 ರಂದು, ಅವರು ಹರಿಯಾಣದಿಂದ ತಮಿಳುನಾಡಿನ ಕನ್ಯಾಕುಮಾರಿಗೆ ಹೊರಟರು. ಫೆಬ್ರವರಿ 18 ರಂದು ಕನ್ಯಾಕುಮಾರಿ ತಲುಪಿದರು. ಕನ್ಯಾಕುಮಾರಿಯಿಂದ ಅವರು 22 ಫೆಬ್ರವರಿ 2023 ರಂದು ಅವರು ಉದ್ದಂಡ ನಮಸ್ಕಾರ ಯಾತ್ರೆಯನ್ನು ಪ್ರಾರಂಭಿಸಿದರು. ಉದ್ದಂಡ ನಮಸ್ಕಾರವನ್ನು ಹಾಕುತ್ತಾ ಜನವರಿ 19 ರಂದು ಅಯೋಧ್ಯೆಯನ್ನು ತಲುಪಿದ್ದಾರೆ. ಯಾತ್ರೆ ಪ್ರಾರಂಭವಾದಾಗಿನಿಂದಲೂ ಅವರು ಕೇವಲ ಫಲಾಹಾರವನ್ನು ಸೇವಿಸುತ್ತಿದ್ದರು. ಅವರೊಂದಿಗೆ ಅವರ ಇಬ್ಬರು ಸಹೋದ್ಯೋಗಿಗಳಿದ್ದರು. ಹಿಂದೂ ಸಂಸ್ಕೃತಿಯ ಪುನರ್ ಸ್ಥಾಪನೆ ಮತ್ತು ವಿಶ್ವಕಲ್ಯಾಣಕ್ಕಾಗಿ ಭಗವಾನ್ ಶ್ರೀರಾಮನ ಆಶೀರ್ವಾದವನ್ನು ಸಿಗಬೇಕು, ಎಂದು ಅವರು ಅಯೋಧ್ಯೆಯವರೆಗೂ ಉದ್ದಂಡ ನಮಸ್ಕಾರ ಮಾಡಿರುವುದಾಗಿ ದಿನಪತ್ರಿಕೆ ‘ಸನಾತನ ಪ್ರಭಾತ’ ಪ್ರತಿನಿಧಿಯೊಂದಿಗೆ ಮಾತನಾಡುವಾಗ ಹೇಳಿದರು.