ಮಹಾರಾಷ್ಟ್ರದಲ್ಲಿ ಒಂದೇ ಒಂದು ಸ್ವತಂತ್ರ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿಲ್ಲ !
ನಾಗ್ಪುರ – 2012 ರಲ್ಲಿ ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ-ಹತ್ಯೆಯ ನಂತರ, ಅಂದಿನ ಕೇಂದ್ರ ಸಚಿವಾಲಯವು ರಾಜ್ಯದ ಪ್ರತಿ ನಗರ ಮತ್ತು ಜಿಲ್ಲೆಗಳಲ್ಲಿ ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಿತ್ತು. ವಾಸ್ತವವಾಗಿ ಮಹಾರಾಷ್ಟ್ರದಲ್ಲಿ ಒಂದೇ ಒಂದು ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸಿಲ್ಲ. ತಮಿಳುನಾಡಿನಲ್ಲಿ ಅತಿ ಹೆಚ್ಚು 199, ಉತ್ತರ ಪ್ರದೇಶದಲ್ಲಿ 71 ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಗಳಿವೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಕಿರುಕುಳ, ಲೈಂಗಿಕ ದೌರ್ಜನ್ಯ ಮತ್ತು ಕೌಟುಂಬಿಕ ದೌರ್ಜನ್ಯದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ; ಆದರೆ ಇನ್ನೂ ಸ್ವತಂತ್ರ ಪೊಲೀಸ್ ಠಾಣೆ ಸ್ಥಾಪನೆಯಾಗಿಲ್ಲ.
1. ತಮಿಳುನಾಡು, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮುಂತಾದ 25 ರಾಜ್ಯಗಳಲ್ಲಿ ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಮಹಾರಾಷ್ಟ್ರ ಸರಕಾರವು ನಾಸಿಕ್, ನಾಗ್ಪುರ, ಮುಂಬಯಿ ಮತ್ತು ಪುಣೆ ನಗರಗಳಲ್ಲಿ ಈ ಠಾಣೆಗಳನ್ನು ತೆರೆಯಲು ನಿರ್ಧರಿಸಿತ್ತು; ಆದರೆ ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
2. ನಗರದ ಇತರೆ ಪೊಲೀಸ್ ಠಾಣೆಗಳಿಗೆ ಬರುವ ಮಹಿಳೆಯರಿಗೆ ಸಂಬಂಧಿಸಿದ ಎಲ್ಲ ದೂರುಗಳನ್ನು ಈ ಮಹಿಳಾ ಪೊಲೀಸ್ ಠಾಣೆಯಲ್ಲಿ ವರ್ಗೀಕರಿಸಲಾಗುವುದು. ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಠಾಣೆ ಎನ್‌ಫೋರ್ಸರ್‌ಗಳು, ಬೀಟ್ ಮಾರ್ಷಲ್‌ಗಳು, ಚಾಲಕರು, ಅಪರಾಧ ತನಿಖಾ ತಂಡಗಳು ಇತ್ಯಾದಿಗಳ ಎಲ್ಲಾ ಕಾರ್ಯಗಳನ್ನು ಮಹಿಳಾ ಉದ್ಯೋಗಿಗಳಿಗೆ ವಹಿಸಲಾಗುವುದು.
ಸಂಪಾದಕೀಯ ನಿಲುವುಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ದೌರ್ಜನ್ಯಗಳ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಇಂತಹ ಪೊಲೀಸ್ ಠಾಣೆಯನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಸರಕಾರ ಪ್ರಯತ್ನಿಸಬೇಕು ! |