ಪುಣೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ !
ಪುಣೆ – ದೇಶದಲ್ಲಿ ಅನೇಕ ಚಲನಚಿತ್ರೋತ್ಸವಗಳು ನಡೆಯುತ್ತವೆ; ಆದರೆ ಪುಣೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಂತೆ ಒಂದೇ ಒಂದು ಚಲನಚಿತ್ರೋತ್ಸವವಿದೆ. ಇಂತಹ ಮಹೋತ್ಸವಗಳು ಯುವಕರಿಗೆ ಸ್ಪೂರ್ತಿದಾಯಕವಾಗಿದೆ. ರಾಜ್ಯ ಸರಕಾರ ಉತ್ತಮ ರೀತಿಯಲ್ಲಿ ಚಲನಚಿತ್ರ ನೀತಿಯನ್ನು ರೂಪಿಸುತ್ತಿದ್ದು ಇದು ಚಲನಚಿತ್ರ ಕ್ಷೇತ್ರವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ನೀತಿಯನ್ನು ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ‘ಫಿಲ್ಮ್ ಸಿಟಿ’ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಢಾಕಣೆ ತಿಳಿಸಿದ್ದಾರೆ. ಪುಣೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಢಾಕಣೆ ಇವರು ಉದ್ಘಾಟಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ಢಾಕಣೆ ಮಾತು ಮುಂದುವರೆಸುತ್ತಾ, “ಪುಣೆ ಕೇವಲ ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲ, ಶೈಕ್ಷಣಿಕ ಮತ್ತು ಐಟಿ ಕೇಂದ್ರವೂ ಆಗಿದೆ. ಚಲನಚಿತ್ರ ನಿರ್ದೇಶಕ ಡಾ. ಜಬ್ಬಾರ ಪಟೇಲ್ ಇವರು ಪುಣೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉತ್ತಮ ರೀತಿಯಲ್ಲಿ ಮುಂದೆ ತಂದಿದ್ದಾರೆ. ಈ ಮಹೋತ್ಸವದಲ್ಲಿ 51 ದೇಶಗಳ 800ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸ್ಥಳೀಯ ಕಥೆಗಳನ್ನು ಆಧರಿಸಿದ ಚಿತ್ರಗಳು ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿವೆ.” ಎಂದು ಹೇಳಿದರು.