೧೪ ರಿಂದ ೧೮ ವಯೋಮಾನದ ಶೇ. ೨೫ ಯುವಕರಿಗೆ ಮಾತೃಭಾಷೆಯಲ್ಲಿನ ೨ ತರಗತಿಯ ಪಾಠ ಓದಲು ಬರಲ್ಲ ! – ಸಮೀಕ್ಷೆ

ಭಾರತದಲ್ಲಿನ ಶಿಕ್ಷಣದ ಈ ಪರಿಸ್ಥಿತಿ ಶಿಕ್ಷಣ ಇಲಾಖೆಗೆ ಲಜ್ಜಾಸ್ಪದ !

ಪುಣೆ – ‘ಯುಅಲ್ ಸ್ಟೇಟಸ್ ಆಫ್ ಎಜುಕೇಶನಲ್ ರಿಪೋರ್ಟ್’ ಅಂದರೆ ‘ಅಸರ್’ನ ‘ಬಿಯಾಂಡ್ ಬೇಸಿಕ್ಸ್’ ಹೆಸರಿನ ೨೦೨೩ ರಲ್ಲಿನ ಸಮೀಕ್ಷೆಯ ವರದಿಯಿಂದ ಗ್ರಾಮೀಣ ಪ್ರದೇಶದಲ್ಲಿನ ೧೦ ನೆಯ ತರಗತಿಯ ನಂತರ ಕಲಾವಿಭಾಗಕ್ಕೆ ಪ್ರವೇಶ ಪಡೆಯುವಲ್ಲಿ ವಿದ್ಯಾರ್ಥಿಗಳಿಗೆ ವಲುವು ಇರುವುದು ಬೆಳಕಿಗೆ ಬಂದಿದೆ. ಗಾಂಭೀರ್ಯದ ವಿಷಯವೆಂದರೆ ೧೪ ರಿಂದ ೧೮ ವಯಸ್ಸಿನ ಸುಮಾರು ಶೇ. ೨೫ ರಷ್ಟು ಯುವಕರಿಗೆ ಮಾತೃಭಾಷೆಯಲ್ಲಿನ ಎರಡನೆಯ ತರಗತಿಯ ಪಾಠ ಓದಲು ಬರುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಆದ್ದರಿಂದ ಈ ಪ್ರವೇಶ ಹವ್ಯಾಸವೆಂದು ಪಡೆದಿರುವುದು ಅಥವಾ ಅನಿವಾರ್ಯವೋ ?’, ಇದು ದೊಡ್ಡ ಚರ್ಚೆಯ ವಿಷಯವಾಗಿದೆ.

೧. ಈ ವರದಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿನ ೧೪ ರಿಂದ ೧೮ ವಯಸ್ಸಿನ ಯುವಕರ ಬಗ್ಗೆ ಗಮನಹರಿಸಿದ್ದರು. ಈ ಸಮೀಕ್ಷೆಯಲ್ಲಿನ ಶೇ. ೫೫.೭ ರಷ್ಟು ವಿದ್ಯಾರ್ಥಿಗಳು ಕಲೆ ಅಥವಾ ಮಾನವ ಶಾಸ್ತ್ರ ವಿಭಾಗ ನಂತರ ಶೇ. ೩೧.೭ ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನ ಮತ್ತು ಶೇಕಡ ೯.೪ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ.

೨. ೧೪ ರಿಂದ ೧೮ ವಯಸ್ಸಿನಿಗಿಂತಲೂ ಅರ್ಧಕ್ಕಿಂತಲೂ ಹೆಚ್ಚಿನ ಯುವಕರು ೩ ರಿಂದ ೧ ಅಂಕಿಯ ಕೂಡು ಕಳೆಯುವ ಲೆಕ್ಕದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಕೇವಲ ಶೇ. ೪೩ ರಷ್ಟು ಯುವಕರು ಸರಿಯಾದ ಉತ್ತರ ನೀಡಿದರು. ಮೂರನೆಯ ತರಗತಿಯಿಂದ ನಾಲ್ಕನೆಯ ತರಗತಿವರೆಗಿನ ಪ್ರಶ್ನೆಯ ಕುರಿತು ಈ ಯುವಕರ ಜೊತೆಗೆ ಸಂವಾದ ನಡೆಸಿದ್ದರು.

೩. ಅರ್ಧಕ್ಕಿಂತ ಹೆಚ್ಚಿನ ಯುವಕರು (ಶೇ ೫೭.೩ ರಷ್ಟು) ಇಂಗ್ಲೀಷ ಭಾಷೆಯಲ್ಲಿನ ವಾಕ್ಯಗಳು ಓದಿದರು; ಆದರೆ ಅದರಲ್ಲಿನ ಕೇವಲ ನಾಲ್ಕನೆಯ ಮೂರು ಭಾಗದಷ್ಟು ಯುವಕರಿಗೆ ಇದರ ಅರ್ಥ ಹೇಳಲು ಬಂದಿತು. ಹುಡುಗರ ತುಲನೆಯಲ್ಲಿ ಹುಡುಗಿಯರು ಮಾತೃಭಾಷೆಯಲ್ಲಿ ಎರಡನೆಯ ತರಗತಿಯ ಪಾಠ ಒಳ್ಳೆಯ ರೀತಿಯಲ್ಲಿ ಓದುವುದು ಕಂಡು ಬಂದಿತು; ಆದರೆ ಗಣಿತ ಮತ್ತು ಇಂಗ್ಲೀಷ್ ಈ ವಿಷಯದಲ್ಲಿ ಹುಡುಗಿಯರ ತುಲನೆಯಲ್ಲಿ ಹುಡುಗರು ಹೆಚ್ಚು ಒಳ್ಳೆಯ ರೀತಿಯಲ್ಲಿ ಪ್ರಸ್ತುತಪಡಿಸುವುದು ಕಂಡುಬಂದಿತು.