ಮುಂಬಯಿನ ‘ಬಾರ್ಬೆಕ್ಯೂ ನೇಷನ್’ ರೆಸ್ಟೋರೆಂಟ್‌ನಲ್ಲಿ ಸಸ್ಯಾಹಾರದಲ್ಲಿ ಇಲಿ ಪತ್ತೆ!

ಇದು ಸಂಭವಿಸಲಿಲ್ಲ ಎಂದು ‘ಬಾರ್ಬೆಕ್ಯೂ ನೇಷನ್’ ಸ್ಪಷ್ಟೀಕರಣ

ಮುಂಬಯಿ – ಪ್ರಯಾಗರಾಜ್‌ನ ರಾಜೀವ್ ಶುಕ್ಲಾ ಅವರು ಜನವರಿ 8 ರಂದು ಮುಂಬಯಿನ ‘ಬಾರ್ಬೆಕ್ಯೂ ನೇಷನ್’ ಎಂಬ ರೆಸ್ಟೋರೆಂಟ್‌ನಿಂದ ಸಸ್ಯಾಹಾರಿ ಆಹಾರವನ್ನು ಆರ್ಡರ್ ಮಾಡಿದ್ದಾರೆ; ಆದರೆ ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಈ ಬಗ್ಗೆ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ, ಆದರೆ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಶುಕ್ಲಾ ಕೆಲಸದ ನಿಮಿತ್ತ ಮುಂಬಯಿನ ವರಳಿ ಪ್ರದೇಶಕ್ಕೆ ಬಂದಿದ್ದರು. ಆಗ ಈ ಮೇಲಿನಂತೆ ಸಂಭವಿಸಿದೆ. ಊಟದ ದಾಲ್ ಪಾತ್ರೆಯಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಇಲಿ ಕಾಣಿಸುವಷ್ಟರಲ್ಲಿ ಶುಕ್ಲಾ ಆಹಾರ ಸೇವಿಸಿದ್ದರು. ಇದರಿಂದ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ 3 ದಿನ ಆಸ್ಪತ್ರೆಯಲ್ಲಿಯೇ ಇರಬೇಕಾಯಿತು.

“ನಮಗೆ ಈ ಬಗ್ಗೆ ದೂರು ಬಂದಿದೆ” ಎಂದು ಬಾರ್ಬೆಕ್ಯು ನೇಷನ್ ಹೇಳಿದರು. ಅದರಂತೆ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಾವು ವಿಚಾರಿಸಿದ್ದೇವೆ; ಆದರೆ ನಮಗೆ ಅಂತಹ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿದೆ.