ವಾರಣಾಸಿಯ ಜ್ಯೋತಿಷಿ ಗಣೇಶ್ವರ ಶಾಸ್ತ್ರಿ ದ್ರಾವಿಡ ಮತ್ತು ಪಂಡಿತ ಲಕ್ಷ್ಮೀಕಾಂತ ದೀಕ್ಷಿತ ಅವರನ್ನು ಮುಖ್ಯ ಆಚಾರ್ಯರ ಹುದ್ದೆಗೆ ನೇಮಕ

ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮ !

ಅಯೋಧ್ಯೆ – ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಸಮಾರಂಭದ ಸಿದ್ಧತೆ ಪೂರ್ಣವಾಗಿದೆ, ಈ ಕ್ರಮದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸವು ಕಾರ್ಯಕ್ರಮದ ಪ್ರಧಾನ ಅರ್ಚಕರನ್ನು ಘೋಷಿಸಿದೆ. ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ಪ್ರಕ್ರಿಯೆ ಜನೇವರಿ 16 ರಿಂದ ಪ್ರಾರಂಭವಾಗಿದೆ. ಪ್ರಾಯಶ್ಚಿತ್ತ ಮತ್ತು ಕರ್ಮಕುಟಿ ಪೂಜೆಯಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಪ್ರಾಣಪ್ರತಿಷ್ಠಾಪನೆಯ ವಿಧಿಯ ಎಲ್ಲ ಪ್ರಕ್ರಿಯೆಯ ಸಮನ್ವಯ ಮತ್ತು ಮಾರ್ಗದರ್ಶನವನ್ನು 121 ಅರ್ಚಕರು ನಡೆಸಲಿದ್ದಾರೆ. ವಾರಣಾಸಿಯ ದೇಶದ ಅಗ್ರಗಣ್ಯ ಜ್ಯೋತಿಷಿ ಗಣೇಶ್ವರ ಶಾಸ್ತ್ರಿ ದ್ರಾವಿಡಜಿಯವರು ಈ ಸಂಪೂರ್ಣ ಪ್ರಕ್ರಿಯೆಯ ಮೇಲ್ವಿಚಾರಣೆ, ಸಮನ್ವಯ ಮತ್ತು ಮಾರ್ಗದರ್ಶನ ಮಾಡಲಿದ್ದಾರೆ. ಅದೇ ಸಮಯದಲ್ಲಿ, ಪಂಡಿತ ಲಕ್ಷ್ಮೀಕಾಂತ ದೀಕ್ಷಿತ ಆಚಾರ್ಯ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

(ಸೌಜನ್ಯ – MPS Hindi)

1. ಆಚಾರ್ಯ ಗಣೇಶ್ವರ ಶಾಸ್ತ್ರಿ ದ್ರಾವಿಡಜಿ ಅವರು ಜ್ಯೋತಿಷ್ಯ ಮತ್ತು ಧಾರ್ಮಿಕ ಶಾಸ್ತ್ರಗಳ ಶ್ರೇಷ್ಠ ಅಧ್ಯಯನಕಾರರೆಂದು ಪರಿಗಣಿಸಲ್ಪಟ್ಟಿದ್ದಾರೆ. ದೇಶದಲ್ಲೇ ಶ್ರೇಷ್ಠ ಜ್ಯೋತಿಷಿ ಎಂದು ಹೆಸರುವಾಸಿಯಾಗಿದ್ದಾರೆ.

2. ಶ್ರೀರಾಮ ಮಂದಿರದ ಅಡಿಪಾಯಕ್ಕಾಗಿ ಶುಭಮುಹೂರ್ತವನ್ನು ಆಚಾರ್ಯ ಗಣೇಶ್ವರ ಶಾಸ್ತ್ರಿ ದ್ರಾವಿಡಜಿ ಅವರು ನಿರ್ಧರಿಸಿದ್ದರು. ಅವರು ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಗೆ ಶುಭ ಮುಹೂರ್ತವನ್ನು ಕೂಡ ಅವರೇ ನಿರ್ಧರಿಸಿದ್ದರು. ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ಶುಭಮುಹೂರ್ತವನ್ನು ಕೂಡ ಅವರೇ ನಿರ್ಧರಿಸಿದ್ದಾರೆ.

3. ಪಂಡಿತ ಲಕ್ಷ್ಮೀಕಾಂತ ದೀಕ್ಷಿತ ಅವರು 17 ನೇ ಶತಮಾನದ ಪ್ರಸಿದ್ಧ ಪಂಡಿತ ಗಾಗಾ ಭಟ್ಟರ ವಂಶಜರಾಗಿದ್ದಾರೆ.