ಭಾರತೀಯ ಬಾಸ್ಮತಿ ಅಕ್ಕಿ ವಿಶ್ವದ ಅತ್ಯುತ್ತಮ ಅಕ್ಕಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ !

ನವದೆಹಲಿ – ವಿಶ್ವದ ೬ ಅತ್ಯುತ್ತಮ ಅಕ್ಕಿಗಳ ಪಟ್ಟಿಯಲ್ಲಿ ಬಾಸ್ಮತಿ ಅಕ್ಕಿಗೆ ಮೊದಲ ಸ್ಥಾನ ಸಿಕ್ಕಿದೆ. ಸಾಂಪ್ರದಾಯಿಕ ಖಾದ್ಯಪದಾರ್ಥಗಳು, ಪಾಕ ವಿಧಾನಗಳು ಮತ್ತು ಸಂಶೋಧನೆಗಳ ವರದಿ ಕೊಡುವ ‘ಟೇಸ್ಟ ಅಟ್ಲಾಸ್‘ ಸಂಸ್ಥೆಯು ಪಟ್ಟಿಯನ್ನು ತಯಾರಿಸಿದೆ. ಭಾರತದಲ್ಲಿ ಉತ್ಪಾದಿಸುವ ಬಾಸ್ಮತಿ ಅಕ್ಕಿಯು ಉತ್ತಮ ಗುಣಮಟ್ಟದ ಸುಗಂಧ ಭರಿತ ಅಕ್ಕಿಯಾಗಿದೆ, ಇದಕ್ಕೆ ವಿಶ್ವದಾದ್ಯಂತ ಹೆಚ್ಚಿನ ಬೇಡಿಕೆ ಇದೆ. ಈ ಪಟ್ಟಿಯಲ್ಲಿ ಇಟಲಿಯ ‘ಅರಬೋರಿಯೋ‘ ಅಕ್ಕಿ ಎರಡನೇ ಸ್ಥಾನದಲ್ಲಿದ್ದು ಪೋರ್ಚುಗಲ್‌ನ ‘ಕರಲಿನೋ‘ ಅಕ್ಕಿ ಮೂರನೆಯ ಸ್ಥಾನದಲ್ಲಿದೆ.

೧. ಬಾಸ್ಮತಿ ಅಕ್ಕಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ‘ಟೇಸ್ಟ್ ಅಟ್ಲಾಸ್‘, ‘ಬಾಸ್ಮತಿ’ ಇದು ಮೂಲತಃ ಭಾರತ ಮತ್ತು ಪಾಕಿಸ್ತಾನದಲ್ಲಿ ಬೆಳಸಲಾದ ಉದ್ದ ಆಕಾರದ ಅಕ್ಕಿಯಾಗಿದೆ. ಈ ಅಕ್ಕಿಯ ವಿಶೇಷತೆ ಎಂದರೆ ಅದರ ರುಚಿ ಮತ್ತು ಪರಿಮಳವಾಗಿದೆ. ಈ ಅಕ್ಕಿ ತುಂಬಾ ಪೌಷ್ಟಿಕ ಮತ್ತು ರುಚಿಯಾಗಿದೆ ಬೇಯಿಸಿದಾಗ ಇದು ಬಿಡಿಬಿಡಿಯಾಗಿರುತ್ತದೆ.

2. ಅಕ್ಕಿ ರಫ್ತಿನಲ್ಲಿ ಭಾರತವು ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ. 2023-24ರ ಆರ್ಥಿಕ ವರ್ಷದಲ್ಲಿ ಭಾರತವು ದಾಖಲೆಯ 2.3 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ರಫ್ತು ಮಾಡಿದೆ, ಇದು ವಿಶ್ವ ಮಾರುಕಟ್ಟೆಯಲ್ಲಿನ ಒಟ್ಟು ಅಕ್ಕಿಯ ಶೇಕಡಾ 40.8 ರಷ್ಟಿದೆ. ಭಾರತವು ವಿಶ್ವಕ್ಕೆ 65 ಪ್ರತಿಶತ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುತ್ತದೆ, ಆದರೆ ಪಾಕಿಸ್ತಾನವು 35 ಪ್ರತಿಶತ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುತ್ತದೆ.