ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯಸ್ಥ ಜಾರ್ಜಿವಾ ಅವರ ಹೇಳಿಕೆ !
ವಾಷಿಂಗ್ಟನ್ (ಅಮೇರಿಕಾ) – ಕೃತಕ ಬುದ್ಧಿಮತ್ತೆಯಿಂದಾಗಿ ಜಗತ್ತಿನ ಶೇಕಡಾ 40 ರಷ್ಟು ಉದ್ಯೋಗಗಳು ಅಪಾಯದಲ್ಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖಂಡ ಜಾರ್ಜಿವಾ ಇವರು ಹೇಳಿದರು. ಅವರು ಸ್ವಿಡ್ಜರಲ್ಯಾಂಡ ದಾವೋಸ ನಗರದಲ್ಲಿ ಆಯೋಜಿಸಲಾಗಿರುವ `ವರ್ಲ್ಡ ಇಕಾನಮಿಕ ಫೋರಂ’ ನಲ್ಲಿ ಮಾತನಾಡುತ್ತಿದ್ದರು.
International Monetary Fund’s Managing Director, Kristalina Georgieva’s prophecy.
‘Artificial Intelligence (A.I.) will affect almost 40% of jobs worldwide.’#Deepfake #ChatGPTpic.twitter.com/APWSvnbynD
— Sanatan Prabhat (@SanatanPrabhat) January 15, 2024
1. ಜಾರ್ಜಿವಾ ಮಾತು ಮುಂದುವರೆಸುತ್ತಾ, ಭದ್ರತೆಯ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆಯ ಬಳಕೆಯು ಅಪಾಯಕಾರಿಯಾಗುವ ಸಾಧ್ಯತೆಯಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಲು ಬಳಸಬಹುದಾದ್ದರಿಂದ, ಈ ದೃಷ್ಟಿಯಿಂದ ಅವಕಾಶವನ್ನು ಒದಗಿಸಿಕೊಡುವಂತಹದ್ದಾಗಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವವು ಕಡಿಮೆಯಾಗಬಹುದು; ಆದರೆ ಜಾಗತಿಕ ಸ್ತರದಲ್ಲಿ ಶೇಕಡಾ 40 ರಷ್ಟು ಉದ್ಯೋಗಗಳ ಮೇಲೆ ಪರಿಣಾಮವಾಗಬಹುದು.
2. 2024 ನೇ ವರ್ಷವು ಜಾಗತಿಕ ಆರ್ಥವ್ಯವಸ್ಥೆಗೆ ಕಠಿಣ ವರ್ಷವಾಗುವ ಸಾಧ್ಯತೆಯಿದೆ. ಜಗತ್ತು ಕೊರೊನಾ ಕಾಲದಲ್ಲಿ ತೆಗೆದುಕೊಂಡ ಸಾಲದ ಹೊರೆಯಿಂದ ಇನ್ನೂ ಹೊರಗೆ ಬಂದಿಲ್ಲ. ಹಾಗೆಯೇ ಜಗತ್ತಿನ 60 ದೇಶಗಳಲ್ಲಿ ಚುನಾವಣೆ ನಡೆಯಲಿದೆ. ಇಂತಹ ಸಮಯದಲ್ಲಿ ಅಲ್ಲಿಯ ಸರಕಾರಗಳು ಜನರನ್ನು ಆಕರ್ಷಿಸಲು ಹಣವನ್ನು ವೆಚ್ಚ ಮಾಡಬಹುದು ಮತ್ತು ಇದರ ಪರಿಣಾಮ ಆ ದೇಶದ ಮೇಲೆ ಆಗಬಹುದು. ಇದರಿಂದ ಆ ದೇಶದ ಮೇಲಿನ ಸಾಲ ಹೆಚ್ಚಾಗಬಹುದು ಎಂದು ಹೇಳಿದರು.