ಹೆಚ್ಚಿನ ಪ್ರವಾಸಿಗರ ಕ್ಷಮತೆಯನ್ನು ಸಹಿಸಿಕೊಳ್ಳುವ ಕ್ಷಮತೆ ಲಕ್ಷದ್ವೀಪಕ್ಕಿಲ್ಲ !

ಲಕ್ಷದ್ವೀಪದ ಸಂಸದ ಮಹಮ್ಮದ್ ಪೈಸಲ್ ಇವರ ದಾವೆ !

ನವ ದೆಹಲಿ – ಲಕ್ಷದ್ವೀಪ ದ್ವಿಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಭಾರ ಸಹಿಸಲು ಸಾಧ್ಯವಿಲ್ಲ. ಇಲ್ಲಿಯ ಹೋಟೆಲ್ ನಲ್ಲಿ ಕೇವಲ ೧೫೦ ಕೋಣೆಗಳು ಇವೆ ಮತ್ತು ಅಲ್ಲಿ ಹೋಗಿ ಬರುವುದಕ್ಕಾಗಿ ವಿಮಾನಗಳ ಉಡಾವಣೆ ಕೂಡ ಕಡಿಮೆ ಇವೆ. ಎರಡೂ ಹೆಚ್ಚಾದರೂ, ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ ಬರಲು ಸಾಧ್ಯವಿಲ್ಲ, ಕಾರಣ ಅಲ್ಲಿಯ ನೈಸರ್ಗಿಕ ವಾತಾವರಣ ಬಹಳ ಸೂಕ್ಷ್ಮವಾಗಿ ಇದೆ ಮತ್ತು ಪ್ರಯಾಣಿಕರು ಸಹಿಸಲು ಸಾಧ್ಯವಾಗದು, ಎಂದು ಲಕ್ಷದ್ವೀಪದ ಸಂಸದ ಮಹಮ್ಮದ್ ಪೈಜಲ್ ಇವರು ಒಂದು ವಾರ್ತಾ ವಾಹಿನಿಯ ಪ್ರತಿನಿಧಿಗೆ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕೆಲವು ದಿನಗಳ ಹಿಂದೆ ಭಾರತೀಯರಿಗೆ ಲಕ್ಷದ್ವೀಪಕ್ಕೆ ಪ್ರವಾಸಕ್ಕೆ ಹೋಗಲು ಕರೆ ನೀಡಿದ್ದರು. ಅದರ ನಂತರ ಮಾಲ್ಡಿವ್ಸ್ ಈ ಬಗ್ಗೆ ಟೀಕಿಸಿತ್ತು. ಇದರ ಹಿನ್ನೆಲೆಯಲ್ಲಿ ಸಂಸದ ಫೈಜಲ್ ಮಾತನಾಡುತ್ತಿದ್ದರು.

ಮಹಮ್ಮದ್ ಪೈಜಲ್ ಮಾತು ಮುಂದುವರೆಸಿ, ನಾವು ‘ಇಂಟಿಗ್ರೇಟೆಡ್ ಐಲ್ಯಾಂಡ್ ಮ್ಯಾನೇಜ್ಮೆಂಟ್ ಪ್ಲಾನ್’ ಇದರ ಆಧಾರದಲ್ಲಿ ಇಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ. ಇದೇ ಯೋಜನೆ ನ್ಯಾಯಮೂರ್ತಿ ರವೀಂದ್ರಮ್ ಆಯೋಗದ ವರದಿಯಲ್ಲಿ ನಮೂದಿಸಲಾಗಿತ್ತು. ಲಕ್ಷದ್ವೀಪದ ವಿಕಾಸಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಈ ಆಯೋಗದ ಸ್ಥಾಪನೆ ಮಾಡಲಾಗಿತ್ತು. ಆಯೋಗದ ಸಲಹೆ ಪ್ರಕಾರ ಲಕ್ಷದ್ವೀಪದಲ್ಲಿ ಹೆಚ್ಚಿನ ಪ್ರಯಾಣಿಕರು ಅನಿರೀಕ್ಷಿತವಾಗಿ ಬರಬೇಕು, ಹೀಗೆ ನಮಗೆ ಅನಿಸುವುದಿಲ್ಲ. ಕಡಿಮೆ ಪ್ರವಾಸಿಗರ ಸಹಾಯದಿಂದ ತೆರಿಗೆ ಪಡೆಯುವುದರ ಮೇಲೆ ನಮ್ಮ ಒತ್ತು ಇದೆ. ಇಲ್ಲಿ ಬರಲು ಇಚ್ಚಿಸುವವರಿಗೆ ಇಲ್ಲಿಯ ಪರಿಸರದ ಮೇಲೆ ಹಾನಿ ಆಗದಿರುವ ಹಾಗೆ ಕಾಳಜಿ ವಹಿಸಬೇಕಾಗುತ್ತದೆ.