ಗೋರಖಪುರ (ಉತ್ತರ ಪ್ರದೇಶ) – ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶದಲ್ಲಿ ಶ್ರೀರಾಮಚರಿತಮಾನಸ ಪ್ರತಿಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಇಲ್ಲಿನ ಗೀತಾ ಪ್ರೆಸ್ ನಲ್ಲಿ 50 ವರ್ಷಗಳಲ್ಲಿ ಇದೇ ಮೊದಲಬಾರಿ ಶ್ರೀರಾಮಚರಿತಮಾನಸದ ಪ್ರತಿಗಳನ್ನು ಹಗಲು ರಾತ್ರಿ ಮುದ್ರಣ ಮಾಡಲಾಗುತ್ತಿದೆ. ಈ ವಿಷಯವಾಗಿ ಗೀತಾ ಪ್ರೆಸ್ಸಿನ ವ್ಯವಸ್ಥಾಪಕ ಶ್ರೀ ಲಾಲಮಣಿ ತ್ರಿಪಾಠಿ ಇವರು, ಶ್ರೀ ರಾಮಲಾಲದ ಪ್ರಾಣ ಪ್ರತಿಷ್ಠಾಪನೆಯ ದಿನಾಂಕ ಘೋಷಿತವಾದ ನಂತರ ಸುಂದರಕಾಂಡ ಮತ್ತು ಹನುಮಾನ ಚಾಲೀಸ್ ಇದರ ಜೊತೆಗೆ ಶ್ರೀರಾಮಚರಿತ ಮಾನಸ ಗ್ರಂಥದ ಬೇಡಿಕೆಯು ಹೆಚ್ಚಾಗಿದೆ. ಹಿಂದಿನ ಕೆಲವು ವರ್ಷಗಳಲ್ಲಿ ನಾವು ಪ್ರತಿ ತಿಂಗಳಿಗೆ ಶ್ರೀರಾಮಚರಿತಮಾನಸದ 75 ಸಾವಿರ ಪ್ರತಿ ಮುದ್ರಿತ ಮಾಡುತ್ತಿದ್ದೆವು ಈ ವರ್ಷ ಒಂದು ಲಕ್ಷ ಪ್ರತಿ ಮುದ್ರಿಸಿದರೂ ಸದ್ಯ ಸ್ಟಾಕ್ ಉಳಿದಿಲ್ಲ ಎಂದು ಹೇಳಿದರು.